Last Updated:
ಇಂದು ಬೆಳ್ಳಂಬೆಳಗ್ಗೆ ಲಡಾಖ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು ಎಂದು ಹೇಳಲಾಗಿದ್ದು, ಈ ಕಂಪನ ಜನರನ್ನು ನಡುಗಿಸಿದೆ.
ಇಂದು ಮುಂಜಾನೆ ಭಾರತದಲ್ಲಿ ಭೂಮಿ ನಡುಗಿದೆ. ಲಡಾಖ್ನಲ್ಲಿ (Ladakh) ಬಲವಾದ ಭೂಕಂಪನದ (Earthquake) ಅನುಭವವಾಗಿದೆ. ಇಂದು ಗುರುವಾರ ಬೆಳಿಗ್ಗೆ 6:05ಕ್ಕೆ ಲಡಾಖ್ನ ಲೇಹ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಲಡಾಖ್ನಲ್ಲಿ ಈ ಭೂಕಂಪದ ಕೇಂದ್ರಬಿಂದುವು ಮೇಲ್ಮೈಯಿಂದ 10 ಕಿಲೋಮೀಟರ್ ಕೆಳಗೆ ಇತ್ತು. ಈ ಕಂಪನದಿಂದ ಜನರು ನಡುಗಿದ್ದಾರೆ.














