Last Updated:
Colombia Earthquake News Updates: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಒಂದು ದಿನದ ನಂತರ, ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡವು. ಪಶ್ಚಿಮ ಕೊಲಂಬಿಯಾದ ಕ್ಯಾಲಿ, ಕ್ವಿಬ್ಡೊ, ಪೆರೇರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಣಾ ತಂಡಗಳು ಹುಡುಕುತ್ತಿವೆ.
ಬೊಗೋಟಾ: 7.4 ತೀವ್ರತೆಯ ಪ್ರಬಲ ಭೂಕಂಪವು ಕೊಲಂಬಿಯಾದಲ್ಲಿ (Colombia Earthquake) ವ್ಯಾಪಕ ವಿನಾಶವನ್ನುಂಟು ಮಾಡಿದ್ದು, ಈವರೆಗೆ, ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದ್ದು, ಕನಿಷ್ಟ 570 ಮಂದಿ ಗಾಯಗೊಂಡು, ನೂರಾರು ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.














