Last Updated:
Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್ ಆಗಿದ್ದರು. ಅಲ್ಲಿ ಸಾಲು ಸಾಲಾಗಿ ಇಟ್ಟಿದ್ದ ಆ ಪ್ಯಾಕೆಟ್ಗಳನ್ನು ನೋಡುತ್ತಿದ್ದಂತೆ ಇಡೀ ಏರ್ಪೋರ್ಟ್ನಲ್ಲಿ (Airport) ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಂತರರಾಷ್ಟ್ರೀಯ ಮಟ್ಟದ (International Level) ಕೋಟ್ಯಂತರ ರೂಪಾಯಿ ಡ್ರಗ್ಸ್ (Drugs) ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ (Businessman) ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಘಟನೆ ಹಲವು ವರ್ಷಗಳ ಹಿಂದೆ ಭೋಪಾಲ್ನ ರಾಜಾ ಭೋಜ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಜಯ್ ಸಿಂಗ್ ಅವರು ದೆಹಲಿಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಸಾಮಾನ್ಯ ಭದ್ರತಾ ತಪಾಸಣೆ ವೇಳೆ ಅವರ ಬ್ಯಾಗಿನಲ್ಲಿ ಇದ್ದ ಬ್ರಾಂಡೆಡ್ ಆಮ್ಚೂರ್ ಮತ್ತು ಗರಂ ಮಸಾಲಾ ಪ್ಯಾಕೆಟ್ಗಳನ್ನು ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಷನ್ ಯಂತ್ರ ಸ್ಕ್ಯಾನ್ ಮಾಡಿತು. ಆ ಯಂತ್ರವು ಅವುಗಳಲ್ಲಿ ಹೆರಾಯಿನ್ ಮತ್ತು ಎಂಡಿಇಎ ಎಂಬ ನಿಷೇಧಿತ ಮಾದಕ ಪದಾರ್ಥಗಳ ಅಂಶಗಳಿವೆ ಎಂದು ಸೂಚಿಸಿತು. ಇದನ್ನು ಆಧಾರ ಮಾಡಿಕೊಂಡು ಸಿಐಎಸ್ಎಫ್ ಸಿಬ್ಬಂದಿ ಅವರನ್ನು ತಕ್ಷಣವೇ ಬಂಧಿಸಿ, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧನದ ಬಳಿಕ ಮಾದರಿಗಳನ್ನು ಪ್ರಾದೇಶಿಕ ಫರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಯಿತು. ಆದರೆ ಅಲ್ಲಿ ಅಗತ್ಯ ಪರೀಕ್ಷಾ ಸೌಲಭ್ಯಗಳ ಕೊರತೆಯಿಂದ ಮಾದರಿಗಳನ್ನು ಸಂಪೂರ್ಣವಾಗಿ ಪರೀಕ್ಷಿಸಲು ಸಾಧ್ಯವಾಗಲಿಲ್ಲ. ನಂತರ ಅವುಗಳನ್ನು ಹೈದರಾಬಾದ್ನ ಕೇಂದ್ರ ಫರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಈ ಸಂಪೂರ್ಣ ಪ್ರಕ್ರಿಯೆಗೆ ದಿನಗಳು ಕಳೆದವು. ಕೊನೆಗೆ ಹೈದರಾಬಾದ್ ಲ್ಯಾಬ್ ವರದಿ, ಆ ಪ್ಯಾಕೆಟ್ಗಳಲ್ಲಿ ಯಾವುದೇ ಮಾದಕ ವಸ್ತು ಇಲ್ಲ, ಅವು ಸಾಮಾನ್ಯ ಮಸಾಲೆ ಪುಡಿಗಳೇ ಎಂದು ಸ್ಪಷ್ಟಪಡಿಸಿತು. ಆದರೆ ಅಷ್ಟರಲ್ಲಾಗಲೇ ಅಜಯ್ ಸಿಂಗ್ 57 ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು.
ಈ ಅನ್ಯಾಯದ ವಿರುದ್ಧ ಅಜಯ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಖೋಟ್ ಅವರು ರಾಜ್ಯದ ಫರೆನ್ಸಿಕ್ ವ್ಯವಸ್ಥೆಯ ದೌರ್ಬಲ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಯಂತ್ರದ ಸೂಚನೆ ಕೇವಲ ಅನುಮಾನಕ್ಕೆ ಕಾರಣವಾಗಬಹುದು; ಅದು ಅಂತಿಮ ಸಾಕ್ಷಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಂತಿಮ ಫರೆನ್ಸಿಕ್ ವರದಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿತು.
ಅಜಯ್ ಸಿಂಗ್ ಅವರ ಮೂಲಭೂತ ಹಕ್ಕಾದ ಸ್ವಾತಂತ್ರ್ಯವನ್ನು ರಾಜ್ಯದ ನಿರ್ಲಕ್ಷ್ಯ ಉಲ್ಲಂಘಿಸಿದೆ ಎಂದು ಹೇಳಿದ ನ್ಯಾಯಾಲಯ, ಇದು ಕಾನೂನುಬಾಹಿರ ಬಂಧನಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಮಧ್ಯಪ್ರದೇಶದ ಎಲ್ಲಾ ಪ್ರಾದೇಶಿಕ ಫರೆನ್ಸಿಕ್ ಲ್ಯಾಬ್ಗಳ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
ಸಾಮಾನ್ಯವಾಗಿ ಅಡುಗೆಗೆ ಬಳಸುವ ಆಮ್ಚೂರ್ (ಒಣ ಮಾವಿನ ಪುಡಿ) ಮತ್ತು ಗರಂ ಮಸಾಲಾ ಪುಡಿಯನ್ನು ವಿಮಾನ ನಿಲ್ದಾಣದ ಭದ್ರತಾ ಯಂತ್ರವು ಮಾದಕ ವಸ್ತು ಎಂದು ಗುರುತಿಸಿದ ಪರಿಣಾಮ, ಉದ್ಯಮಿ ಅಜಯ್ ಸಿಂಗ್ 57 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಇದೀಗ ಈ ಪ್ರಕರಣದ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿ, ರಾಜ್ಯ ಸರ್ಕಾರವು ಅಜಯ್ ಸಿಂಗ್ ಅವರಿಗೆ ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.













