Udupi-Mangaluru: ಕರಾವಳಿಯಲ್ಲಿ ಬಾಂಬ್‌ ಬೆದರಿಕೆ! ಒಂದೇ ದಿನದಲ್ಲಿ 3 ಶಾಲೆಗಳಿಗೆ ಬೆದರಿಕೆ ಕರೆ! | bomb threat on udupi and mangaluru schools | | ACTPnews

ಸಾಂಕೇತಿಕ ಚಿತ್ರ


Last Updated:

ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್‌ಗಳ ಕಣ್ಣು ಬಿದ್ದಿತ್ತು. ಅಲ್ಲದೇ ಶಾಲಾ-ಕಾಲೇಜುಗಳ ಮೇಲೂ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ಈ ಮಧ್ಯೆ ಬಾಂಬರ್‌ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ. ಇದೀಗ ಉಡುಪಿ ಮತ್ತು ಮಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್‌ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಉಡುಪಿ: ಇತ್ತೀಚೆಗೆಬಾಂಬ್‌ ಬೆದರಿಕೆ ಕರೆಗಳು (Bomb Threat) ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದ್ರೂ ಹೋಟೆಲ್‌, ಏರ್‌‌ಪೋರ್ಟ್‌‌ಗಳಿಗೆ ಅನುಮಾನಸ್ಪದವಾಗಿ ಬಾಂಬ್‌ ಬೆದರಿಕೆ ಕರೆಗಳು ಬರುತ್ತಲೇ ಇದೆ. ಇನ್ನು ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್‌ಗಳ ಕಣ್ಣು ಬಿದ್ದಿತ್ತು. ಅಲ್ಲದೇ ಶಾಲಾ-ಕಾಲೇಜುಗಳ ಮೇಲೂ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ಈ ಮಧ್ಯೆ ಬಾಂಬರ್‌ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ. ಇದೀಗ ಉಡುಪಿ ಮತ್ತು ಮಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್‌ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

ಉಡುಪಿಯ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ

ಉಡುಪಿಯ ಪ್ರತಿಷ್ಠಿತ ಶಾಲೆಗೆ ಬಾಂಬ್‌ ಬೆದರಿಕೆ ಬಂದಿದೆ ಎನ್ನಲಾಗಿದ್ದು, ಶಾರದಾ ರೆಸಿಡೆನ್ಷಿಯಲ್ ಸ್ಕೂಲ್ ಗೆ ಇಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ, ಶಾಲೆ ಕೊಠಡಿ, ಹಾಸ್ಟೆಲ್ ನಲ್ಲಿ ಬಾಂಬ್ ಸ್ಕಾಡ್ ನಿಂದ ಸರ್ಚಿಂಗ್ ಮಾಡಲಾಗಿದೆ.

ಬಾಂಬ್‌ ಬೆದರಿಕೆ ಬಗ್ಗೆ ಗ್ರಹ ಸಚಿವರ ಪ್ರತಿಕ್ರಿಯೆ! 

ಇನ್ನು ಉಡುಪಿ ಪ್ರತಿಷ್ಠಿತ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಇದೀಗ ಯಾದಗಿರಿಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಹೇಳಿಕೆ ನೀಡಿದ್ದು, ಇಡೀ ದೇಶದಲ್ಲಿ ಸಾವಿರಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಬರುತ್ತಿದೆ. ಕರ್ನಾಟಕದಲ್ಲೂ ಕೂಡಾ ಬಾಂಬ್ ಬೆದರಿಕೆ ಬಂದಿದೆ. ಹಿಂದೆನೂ ಬಂದಿದೆ, ಈಗಲೂ ಬರ್ತಿದೆ, ದಿನನಿತ್ಯವೂ ಬರುತ್ತದೆ. ನಾವು ವೆರಿಪೈಡ್ ಮಾಡ್ತೀವಿ. ಯಾವುದೋ ದೇಶದಲ್ಲಿ ಕುಳಿತುಕೊಂಡು ಪೋಸ್ಟಿಂಗ್ ಮಾಡಿರ್ತಾನೆ.

ಸಾಂಕೇತಿಕ ಚಿತ್ರ

ನಾವು ಬ್ಯಾಕ್ ಟ್ರಾಕ್ ಮಾಡಿ ಪತ್ತೆ ಹಚ್ಚುತ್ತೇವೆ. ನಮ್ಮಲ್ಲಿ ಸೈಬರ್ ಟಿಂ ಬಹಳ ಚೆನ್ನಾಗಿಯಿದೆ. ಇಡೀ ದೇಶದಲ್ಲಿ ಸೈಬರ್ ನಲ್ಲಿ ಪರಿಣಿತರಿರೋದು ನಮ್ಮ ಕರ್ನಾಟಕದಲ್ಲೇ, ಆದ್ದರಿಂದ ಈ ಬಗ್ಗೆ ವೆರಿಫೈಡ್ ಮಾಡಿದಾಗ ಬೇರೆ ಬೇರೆ ದೇಶದ ಪೋಸ್ಟಿಂಗ್ ಇರುತ್ತವೆ. ಅವರ ಅಡ್ರೇಸ್, ಅಕೌಂಟ್ ಯಾವುದು ‌ನಮಗೆ ಸಿಗೋದಿಲ್ಲ. ಆದ್ದರಿಂದ ನಾವು ಇದನ್ನ ಗಂಭೀರವಾಗಿ ತೆಗೆದುಕೊಳ್ತೀವಿ. ಏಕೆಂದರೆ ಒಂದ್ವೇಳೆ ನಿಜಾನೆ ಆದರೆ ಕಷ್ಟ ಎಂದು ಗೃಹ ಸಚಿವರು ಹೇಳಿದ್ದಾರೆ.

(ವರದಿ: ಗಣೇಶ್‌ ಸಾಯ್ಬರಕಟ್ಟೆ, ನ್ಯೂಸ್‌18 ಕನ್ನಡ ಉಡುಪಿ)

ಮಂಗಳೂರು: ಉಡುಪಿ ಬೆನ್ನಲ್ಲೇ ಮಂಗಳೂರಿನ ಎರಡು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದ್ದು, ಇಮೇಲ್ ಮೂಲಕ ಕಿಡಿಕೇಡಿಗಳು ಬಾಂಬ್ ಬೆದರಿಕೆ ಮೇಲ್ ಕಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಸ್ಥಳಕ್ಕೆ ತೆರಳಿ ಶಾಲೆಯಲ್ಲಿ ಮಂಗಳೂರು ಪೊಲೀಸರು ಶೋಧಕಾರ್ಯ ನಡೆಸಿದ್ದು, ಶಾಲೆಯಲ್ಲಿ ಬಾಂಬ್ ಸ್ಕ್ವಾಡ್ ಯುನಿಟ್ ತನಿಖೆ ಆರಂಭಿಸಿದೆ. ಪಾಂಡೇಶ್ವರ ಹಾಗು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗಳಿಗೆ ಈ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

(ವರದಿ: ಕಿಶನ್‌ ಶೆಟ್ಟಿ, ನ್ಯೂಸ್‌18 ಕನ್ನಡ ಮಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed