Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್‌ ರಾಜ್‌ಗೆ ನವೀನ್ ಕೃಷ್ಣ ಗಾನ ನಮನ | | ACTPnews

Kannada Actor Director Naveen Krishna Wrote Special Song Dileep Raj


ಒಂದಾನೊಂದು ಕಾಲದಲಿ…

ದಿಲೀಪ್ ರಾಜ್ ಅವರು ಮೇ-13 ರಂದು ಎಲ್ಲರನ್ನು ಬಿಟ್ಟು ಹೋದ್ರು. ಈ ನೋವಿನಲ್ಲಿ ಆತ್ಮೀಯರು, ಸ್ನೇಹಿತರು, ಮನೆಯರು ಹೀಗೆ ಎಲ್ಲರೂ ಇದ್ದಾರೆ. ಹೃದಯಾಘಾತದಿಂದ ದಿಲೀಪ್ ರಾಜ್ ಹೋಗಿರೋದು ಎಲ್ಲರಿಗೂ ಬೇಸರವೂ ಇದೆ. ಚಿಕ್ಕವಯಸ್ಸಿನಲ್ಲಿಯೇ ಹೋಗಿರೊದು ಇನ್ನಷ್ಟು ನೋವು ತಂದಿದೆ.
ಊರೆಲ್ಲ ಬೆಳಗಲು…ದಿಲೀಪ ನಾಗಲು…

ಕಾಲೇಜು ದಿನಗಳ ಗೆಳೆಯ ನವೀನ್ ಕೃಷ್ಣ ಕೂಡ ಅಷ್ಟೇ ಬೇಸರದಲ್ಲಿದ್ದಾರೆ. ಗೆಳೆಯ ದಿಲೀಪ್ ರಾಜ್ ಅವರನ್ನ ಹತ್ತಿರದಿಂದಲೇ ಅರ್ಥ ಮಾಡಿಕೊಂಡ ನವೀನ್ ಕೃಷ್ಣ ಅವರು ಈಗೊಂದು ಹಾಡು ಬರೆದಿದ್ದಾರೆ.

ಎಲ್ಲರಿಗೂ ಸಹಾಯ ಮಾಡುವಾತ..

ದಿಲೀಪ್ ರಾಜ್ ಎಲ್ಲರಿಗೂ ಸಹಾಯ ಮಾಡ್ತಾ ಇದ್ದರು. ಕಷ್ಟ ಅಂತ ಬಂದವರಿಗೂ ನೆರವಾಗುತ್ತಿದ್ದರು. ಸಣ್ಣ ಗೂಡಿನಲ್ಲಿಯೇ ಹುಟ್ಟಿದ ದಿಲೀಪ್ ರಾಜ್‌ ಮುಂದೆ ಎಲ್ಲರಿಗೂ ಸಹಾಯ ಮಾಡುವ ಮಟ್ಟಕ್ಕೆ ಬೆಳೆದ ಅನ್ನೋದನ್ನು ಬರೆದುಕೊಂಡಿದ್ದಾರೆ.

ನವೀನ್ ಕೃಷ್ಣ ಅವರು ಗೆಳೆಯನಿಗೆ ಬರೆದ ಈ ಹಾಡಿನ ಸಾಲುಗಳು ಈ ರೀತಿ ಇವೆ ಓದಿ…

ಒಂದಾನೊಂದು ಕಾಲದಲ್ಲಿ..ಚಿಕ್ಕದೊಂದು ಗೂಡಿನಲ್ಲಿ..

ಜನಿಸಿದ ಕಂದನು ರಾಜನಾಗಲು..

ಊರೆಲ್ಲ ಬೆಳಗಲು…ದಿಲೀಪ ನಾಗಲು…

ಕಲೆಯೇ ಅವನ ಉಸಿರಾಯ್ತು..ನಗುವೇ ಅವನ ಹೆಸರಾಯ್ತು..

“ವಿದ್ಯಾ” ಅವನ ಜೊತೆಯಾಯ್ತು. ಸಾಧನೆ ರೂಢಿಯಾಯ್ತು…

ಹಸಿದವರ ಅನ್ನದಾತ..ಹುಡುಕಿದರು ಸಿಗದ ಗುಣವಂತ..

ಯಾರೆ ಕೈ ಮುಗಿದರು..ಬಿಡದೆ ಕೈ ಹಿಡಿವಾತ..

ವಿಧಿಯು ಬಂದು ಕರೆದರೂ..ಸಾವಿಗೂ ಕೈಚಾಚಿದಾತ…

ಹೀಗೆ ಅರ್ಥ ಪೂರ್ಣ ಸಾಲುಗಳನ್ನ ಬರೆಯೋದಲ್ಲದೆ ಅದನ್ನ ಹಾಡಿದ್ದಾರೆ. ಒಂದು ಪುಟ್ಟ ವಿಡಿಯೋ ಕೂಡ ಮಾಡಿದ್ದಾರೆ. ಈ ಮೂಲಕ ಗೆಳಯ ದಿಲೀಪ್ ರಾಜ್ ಅವರನ್ನ ನೆನಪಿಸಿಕೊಂಡಿದ್ದಾರೆ.

ಇವರ ಗೆಳೆಯತನ….

ದಿಲೀಪ್ ರಾಜ್ ಹಾಗೂ ನವೀನ್ ಕೃಷ್ಣ ಒಂದೇ ಕಾಲೇಜಿನಲ್ಲಿಯೇ ಓದಿದ್ದಾರೆ. ಕಾಲೇಜಿನಲ್ಲಿ ಅಷ್ಟೆ ಆ್ಯಕ್ಟೀವ್ ಕೂಡ ಆಗಿದ್ದವರು ಇವರು.

Kannada Actor Director Naveen Krishna Wrote Special Song Dileep Raj

ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ

ಕಾಲೇಜಿಗೆ ದಿಲೀಪ್ ರಾಜ್ ಮೊದಲ ಬಹುಮಾನ ತಂದ್ರೆ, ನವೀನ್ ಕೃಷ್ಣ ಎರಡನೇ ಬಹುಮಾನ ತರ್ತಾ ಇದ್ದರು. ಇದು ಫಸ್ಟ್ ಮತ್ತು ಸೆಕೆಂಡ್ ಅಂತ ಬದಲಾಗ್ತಾನೇ ಇತ್ತು. ಆ ರೀತಿಯ ಈ ಸ್ನೇಹಿತರು ಇನ್ನೂ ಒಂದು ಕೆಲಸ ಮಾಡಿದ್ದರು.

ಪ್ರೀತಿಯ ಜರ್ನಿ….

ದಿಲೀಪ್ ರಾಜ್ ಮತ್ತು ನವೀನ್ ಕೃಷ್ಣ ಅವರ ಲವ್ಲಿ ಜರ್ನಿನೂ ಇಂಟ್ರಸ್ಟಿಂಗ್ ಆಗಿದೆ. ದಿಲೀಪ್ ರಾಜ್ ಅವರು ವಿದ್ಯಾ ಅವರ ಪ್ರೀತಿಯಲ್ಲಿ ಬಿದ್ದರು.

ಇದನ್ನ ಹೇಳಿದ್ಯಾರು..

ನವೀನ್ ಕೃಷ್ಣ ಅವರು ಈ ವಿಷಯವನ್ನ ದಿಲೀಪ್ ರಾಜ್ ಅಗಲಿದ ದಿನವೇ ಹೇಳಿಕೊಂಡರು. ಟಿವಿ-9 ಚಿಟ್ ಚಾಟ್ ಅಲ್ಲಿಯೇ ತಮ್ಮ ಸ್ನೇಹ ಮತ್ತು ಪ್ರೀತಿಯ ವಿಷಯವನ್ನ ಹೇಳಿಕೊಂಡಿದ್ದರು. ಈ ದಿನ ತುಂಬಾನೆ ಒಳ್ಳೆ ಸ್ನೇಹಿತನನ್ನ ಕಳೆದುಕೊಂಡಿದ್ದೇನೆ ಅಂತಲೂ ನವೀನ್ ಕೃಷ್ಣ ಹೇಳಿಕೊಂಡಿದ್ದರು ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports