DK Shivakumar-Vijay: ಡಿಕೆ ಶಿವಕುಮಾರ್​ ಪದಗ್ರಹಣಕ್ಕೆ ಬರ್ತಾರಾ ದಳಪತಿ ವಿಜಯ್​!? ತಮಿಳುನಾಡು ಸಿಎಂಗೆ ಆಹ್ವಾನ? | | ACTPnews

News18


Last Updated:

ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ಅವರಿಗೆ ಅಮಂತ್ರಣ ತಲುಪಲಿದೆ. ನಾಳಿನ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬರ್ತಾರಾ ದಳಪತಿ?

News18
News18

ಬೆಂಗಳೂರು (ಜೂ.02): ಬಹುದಿನಗಳ ಡಿಕೆ ಶಿವಕುಮಾರ್ (DK Shivakumar) ಕನಸು ಜೂನ್​ 3ರಂದು ನನಸಾಗ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ (Chief Minister) ಡಿಕೆ ದರ್ಬಾರ್​ ಶುರುವಾಗೋ ಕ್ಷಣ ಬಂದೇ ಬಿಟ್ಟಿದೆ. ಈ ಐತಿಹಾಸಿಕ ದಿನ ರಾಜ್ಯದ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯಲಿದ್ದು, ಡಿಕೆ ಶಿವಕುಮಾರ್ ಪಾಲಿಗಿದು ಸುದಿನ ಅಂದ್ರು ತಪ್ಪಾಗಲ್ಲ. ರಾಜಭವನದಲ್ಲಿ ನಡೆಯುವ ನೂತನ ಮುಖ್ಯಮಂತ್ರಿಯ ಪ್ರಮಾಣವಚನ (Oath) ಕಾರ್ಯಕ್ರಮಕ್ಕೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಕೆಲವರಿಗೆ ಖುದ್ದು ಡಿಕೆಶಿ ಅವರು ಆಹ್ವಾನ ನೀಡಿದ್ದಾರೆ. ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಮೂಡಿಸಿದ ಮುಖ್ಯಮಂತ್ರಿಯಾಗಿರೋ ನಟ ಹಾಗೂ ಸಿಎಂ ಜೋಸೆಫ್​ ಸಿ ವಿಜಯ್​  ಅವರಿಗೂ ಆಮಂತ್ರಣ ನೀಡಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಡಿಕೆಶಿ ಪದಗ್ರಹಣಕ್ಕೆ ಬರ್ತಾರಾ ವಿಜಯ್​?

ದಳಪತಿ ವಿಜಯ್​​ಗೂ ಆಹ್ವಾನ!?

ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ಅವರಿಗೆ ಅಮಂತ್ರಣ ನೀಡಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು, ತಮಿಳುನಾಡಲ್ಲಿ ರಾಜಕೀಯ ಸಂಚಲನ ಮೂಡಿಸಿರೋ ವಿಜಯ್​, ಡಿಕೆಶಿ ಪದಗ್ರಹಣದಲ್ಲಿ ಭಾಗಿಯಾಗ್ತಾರಾ ಎನ್ನುವ ಕುರಿತು ಇನ್ನೂ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.

ಡಿಕೆಶಿ ಪ್ರಮಾಣವಚನಕ್ಕೆ ಬರ್ತಾರಾ ವಿಜಯ್​?

ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ವಿಜಯ್​ ಅವರನ್ನ ಡಿಕೆ ಶಿವಕುಮಾರ್ ಕೂಡ ಕೊಂಡಾಡಿದ್ರು. ಕಾಂಗ್ರೆಸ್ ಶಾಸಕ ಬೆಂಬಲದೊಂದಿಗೆ ಸರ್ಕಾರ ರಚಿಸಿದ ವಿಜಯ್​​ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಹುಲ್​ ಗಾಂಧಿ ಕೂಡ ಸಾಥ್ ಕೊಟ್ಟಿದ್ರು. ಇದೀಗ ಡಿಕೆಶಿ ಪ್ರಮಾಣವಚನಕ್ಕೆ ಆಹ್ವಾನ ಕೊಟ್ಟರೆ ವಿಜಯ್ ಕಾರ್ಯಕ್ರಮಕ್ಕೆ​ ಬರ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಮಹಾದಾಯಿ ಗದ್ದಲದ ನಡುವೆ ತಮಿಳುನಾಡು ಸಿಎಂ ವಿಜಯ್​, ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ತೀರ ಕಡಿಮೆ ಎನ್ನಲಾಗ್ತಿದೆ.

ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಆಹ್ವಾನ

ರಾಜಭವನದಲ್ಲಿ ನಡೆಯೋ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದೇಶದ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಡಿಕೆ ಶಿವಕುಮಾರ್ ಅವರು ಖುದ್ದಾಗಿ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದ. ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್ ಸುಖು, ಕೇರಳ ಸಿಎಂ ವಿ ಡಿ ಸತೀಶನ್​ ಹಾಗೂ ತೆತೆಲಂಗಾಣ ಸಿಎಂ ರೇವಂತ ರೆಡ್ಡಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪದಗ್ರಹದಲ್ಲಿ ಹಲವು ಮಠದ ಸ್ವಾಮೀಜಿಗಳು ಭಾಗಿ

ನಾಳೆಯ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ಸಿನಿಮಾ ತಾರೆಯರು, ಶಾಸಕರು, ಮಾಜಿ ಸಚಿವರು ಸೇರಿ ಗಣ್ಯರು ಭಾಗಿಯಾಗಲಿದ್ದು, ಕಾರ್ಯಕ್ರಮಕ್ಕೆ ಬರುವರಿಗೆ ಮೂರು ರೀತಿ ಪಾಸ್ ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಗಾಜಿನ ಮನೆಯಲ್ಲಿ 1100 ರಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಗಳು, ಧರ್ಮಗುರುಗಳು, ನ್ಯಾಯಾಧೀಶರು, ವಿಶೇಷ ಆಹ್ವಾನಿತರು, ಬೇರೆ ರಾಜ್ಯಗಳ ಸಿಎಂಗಳಿಗೆ ಸೇರಿದಂತೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.

(ವರದಿ: ಚಿದಾನಂದ ಪಟೇಲ್​, ಪೊಲಿಟಿಕಲ್​ ಬ್ಯೂರೋ ಹೆಡ್​​, ನ್ಯೂಸ್​18 ಕನ್ನಡ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed