Last Updated:
Dhurandhar: ರಣವೀರ್ ಸಿಂಗ್ ಅವರ ಧುರಂಧರ್ ಸಿನಿಮಾ ಟಿವಿಯಲ್ಲಿ ಬರಲಿದೆ. ಮನೆಯಲ್ಲೇ ಕುಳಿತು ಕನ್ನಡದಲ್ಲೇ ಸಿನಿಮಾ ನೋಡಬಹುದಾಗಿದೆ. ಯಾವಾಗ? ಎಲ್ಲಿ?
ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ ಸಿನಿಮಾಗಳು ರಿಲೀಸ್ (Cinema) ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು. ಬಾಲಿವುಡ್ನ (Bollywood) ಖ್ಯಾತ ನಟ ರಣವೀರ್ ಸಿಂಗ್ ಅವರು ಅಭಿನಯಿಸಿದ, ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ಈಗ ಟಿವಿಯಲ್ಲಿ ಬರಲಿದೆ.
ಈಗ ಮನೆಯಲ್ಲೇ ಕುಳಿತು ಎಲ್ಲರೂ ಧುರಂಧರ್ ಸಿನಿಮಾವನ್ನು ಕನ್ನಡದಲ್ಲಿಯೇ ನೋಡಬಹುದು. ಒಟಿಟಿಯಲ್ಲ, ಟಿವಿಯಲ್ಲೇ ನೀವು ಧುರಂಧರ್ ಸಿನಿಮಾವನ್ನು ಕನ್ನಡದಲ್ಲಿ ನೋಡಬಹುದು.
ಹೌದು, ಧುರಂಧರ್ ಕನ್ನಡದಲ್ಲಿ ಬರಲಿದ್ದು, ಟಿವಿಯಲ್ಲಿ ಪ್ರಸಾರವಾಗಲಿದೆ. ಧುರಂಧರ್ ಸಿನಿಮಾ ಕಲರ್ಸ್ ಕನ್ನಡದಲ್ಲಿ ಬರಲಿದೆ. ಭಾನುವಾರದಂದು ಮಧ್ಯಾಹ್ನ 2:30ಕ್ಕೆ ಸಿನಿಮಾ ಟಿವಿಯಲ್ಲಿ ಬರಲಿದ್ದು ಕಲರ್ಸ್ ಕನ್ನಡ ಈ ಸಂಬಂಧ ಪೋಸ್ಟ್ ಹಾಕಿದೆ. ”ಬರ್ತಿದೆ ಕನ್ನಡ ಟೆಲಿವಿಷನ್ ಪ್ರೀಮಿಯರ್ ಮೂವಿ “ಧುರಂಧರ್”, ಅಬ್ಬರದ ಅಧ್ಯಾಯ ಈಗ ಶುರು” ಎಂದು ಕ್ಯಾಪ್ಶನ್ ಹಾಕಲಾಗಿದೆ.
‘ಧುರಂಧರ 2’ನತ್ತ ಗಮನ ಹರಿಸಿದ್ದಾರೆ, ಇದು ಮಾರ್ಚ್ 2026ರಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆಯಾದ ನಂತರ ಚಿತ್ರದ ಬಜೆಟ್ ಮತ್ತು ರಣವೀರ್ ಸಿಂಗ್ ಅವರ ಹಂಝಾ ಅಲಿ ಮಜಾರಿ ಪಾತ್ರದ ಬಗ್ಗೆ ಚರ್ಚೆಗಳು ಶುರುವಾಗಿದೆ. ‘ಧುರಂಧರ’ನ ಅಧಿಕೃತ ಬಜೆಟ್ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ವರದಿಗಳ ಪ್ರಕಾರ ಮೊದಲ ಭಾಗಕ್ಕೆ ಸುಮಾರು 250-300 ಕೋಟಿ ವೆಚ್ಚವಾಗಿದೆ.
ನಟ ರಣವೀರ್ ಸಿಂಗ್ ಅವರ ಸಿನಿ ಕರಿಯರ್ನಲ್ಲಿ ಅತಿ ದೊಡ್ಡ ಸಿನಿಮಾ ಆಗಿರುವ ಧುರಂಧರ್ ಸಿನಿಮಾ ಕಳೆದ ಡಿಸೆಂಬರ್ 5ರಂದು ಬಿಡುಗಡೆ ಆಗಿತ್ತು. ರಿಲೀಸ್ ಆದ ಮೊದಲ ದಿನ ನಿರೀಕ್ಷೆಗಿಂತ ಸ್ವಲ್ಪ ಮಟ್ಟಿಗೆ ಕಮ್ಮಿ ಹಣ ಗಳಿಸಿದ್ದ ಧುರಂಧರ್ ಸಿನಿಮಾ ಬಳಿಕ ಬಿರುಗಾಳಿಯಂತೆ ಬಾಕ್ಸ್ ಆಫೀಸ್ನಲ್ಲಿ ಮುನ್ನುಗಿದೆ. ಪ್ರತಿ ದಿನ ಕೋಟ್ಯಾಂತರ ರೂ ಗಳಿಸಿದೆ. ಧುರಂಧರ್ 2 ಕೂಡಾ ಭರ್ಜರಿ ಕಲೆಕ್ಷನ್ ಮಾಡಿದ್ದಷ್ಟೇ ಅಲ್ಲದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
Bangalore,Karnataka
Jun 03, 2026 11:04 AM IST













