Devil Movie: ಕೃಷ್ಣನಾಗಿ ಪ್ರೇರಣೆ, ಡೆವಿಲ್ ಆಗಿ ಅಬ್ಬರ; ದರ್ಶನ್ ಸಿನಿಮಾದ ಮೇಕಿಂಗ್ ಔಟ್! | | ACTPnews

ಕೃಷ್ಣನಾಗಿ ಪ್ರೇರಣೆ, ಡೆವಿಲ್ ಆಗಿ ಅಬ್ಬರ; ಮೇಕಿಂಗ್ ಔಟ್!


Last Updated:

ದರ್ಶನ್ ಅಭಿನಯದ ಡೆವಿಲ್ ಚಿತ್ರದ ಮೇಕಿಂಗ್ ಹೊರ ಬಂದಿವೆ. ಡೈರೆಕ್ಟರ್ ಮಿಲನ ಪ್ರಕಾಶ್ ಇವುಗಳನ್ನ ಹಂಚಿಕೊಂಡಿದ್ದಾರೆ. ಕೃಷ್ಣನಾಗಿ ಪ್ರೇರಣೆ, ಡೆವಿಲ್ ಆಗಿ ಅಬ್ಬರ ಅಂತಲೂ ದರ್ಶನ್ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕೃಷ್ಣನಾಗಿ ಪ್ರೇರಣೆ, ಡೆವಿಲ್ ಆಗಿ ಅಬ್ಬರ; ಮೇಕಿಂಗ್ ಔಟ್!
ಕೃಷ್ಣನಾಗಿ ಪ್ರೇರಣೆ, ಡೆವಿಲ್ ಆಗಿ ಅಬ್ಬರ; ಮೇಕಿಂಗ್ ಔಟ್!

ದರ್ಶನ್ (Darshan) ಅಭಿನಯದ ಡೆವಿಲ್ ಚಿತ್ರ (Devil Movie) ಒಟಿಟಿಗೆ ಬರ್ತಿದೆ. ಜೀ-5 ಅಲ್ಲಿಯೇ (Zee-5) ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದ ಪ್ರಚಾರವೂ ಜೋರಾಗಿಯೇ ಆಗುತ್ತಿದೆ. ಅದು ಸೋಷಿಯಲ್ ಮೀಡಿಯಾದಲ್ಲಿಯೇ ನೋಡಿ. ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಅವರು ತಮ್ಮ ಈ ಚಿತ್ರದ ಮೇಕಿಂಗ್ ವಿಡಿಯೋವನ್ನ ಅಧಿಕೃತವಾಗಿಯೇ ಹಂಚಿಕೊಳ್ಳುತ್ತಿದ್ದಾರೆ. ಡೆವಿಲ್ ಚಿತ್ರದಲ್ಲಿ ‘ಕೃಷ್ಣ’ ನಾಗಿ ಪ್ರೇರಣೆ ಹಾಗೂ ‘ಡೆವಿಲ್’ ಆಗಿ ದರ್ಶನ್ (Darshan) ಅಬ್ಬರಿಸಿದ್ದಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಡೆವಿಲ್ ಅಬ್ಬರ ಜೋರು

ಡೆವಿಲ್ ಚಿತ್ರ ಕಳೆದ ವರ್ಷ 2025 ಡಿಸೆಂಬರ್-11 ರಂದು ರಿಲೀಸ್ ಆಗಿತ್ತು. ಈ ಚಿತ್ರ ಥಿಯೇಟರ್ ಅಲ್ಲಿ ಭಾರೀ ಸೌಂಡ್ ಕೂಡ ಮಾಡ್ತು. ದರ್ಶನ್ ಇಲ್ಲದೆ ಚಿತ್ರ ತಂಡ ಈ ಸಿನಿಮಾವನ್ನ ಪ್ರಮೋಟ್ ಮಾಡಿರೋದು ಗೊತ್ತೇ ಇದೆ.
darshan devil film director milana prakash share film making video on social media

ಜುಲೈ-17ಕ್ಕೆ ಸ್ಟ್ರೀಮಿಂಗ್

(ಚಿತ್ರ ಕೃಪೆ: ಶ್ರೀ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಮ್)

ಒಟಿಟಿ ವಿಚಾರದಲ್ಲೂ ಹಾಗೆ ಆಗಿದೆ. ದರ್ಶನ್ ಇನ್ನು ಜೈಲಿನಲ್ಲಿಯೇ ಇದ್ದಾರೆ. ಆದರೆ, ಇವರ ಸಿನಿಮಾ ಒಂದು ವರ್ಷದ ಬಳಿಕ ಒಟಿಟಿಗೆ ಬರ್ತಿದೆ. ಜೀ-5 ಅಲ್ಲಿ ಇದು ಜುಲೈ-17 ರಂದು ಸ್ಟ್ರೀಮಿಂಗ್ ಆಗುತ್ತಿದೆ.

ಮೇಕಿಂಗ್ ವಿಡಿಯೋ ಔಟ್

ಡೆವಿಲ್ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಇದನ್ನ ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಅವರು ಶ್ರೀ ಜೈಮಾತಾ ಕಂಬೈನ್ಸ್ ಪೇಜ್ ಅಲ್ಲಿಯೇ ತಮ್ಮ ಡೆವಿಲ್ ಚಿತ್ರದ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.

ಡೆವಿಲ್ ಚಿತ್ರದಲ್ಲಿ ದರ್ಶನ್ ಡಬಲ್ ರೋಲ್ ಮಾಡಿದ್ದಾರೆ. ಹಾಗಾಗಿಯೇ ಮಿಲನ ಪ್ರಕಾಶ್ ಅವರು ಅದನ್ನ ವಿಶೇಷವಾಗಿಯೇ ಹೇಳಿಕೊಂಡಿದ್ದಾರೆ.

ಕೃಷ್ಣನಾಗಿ ಪ್ರೇರಣೆ…

ಕೃಷ್ಣನಾಗಿಯೇ ದರ್ಶನ್ ಇಲ್ಲಿ ಪ್ರೇರಣೆ ನೀಡಿದ್ದಾರೆ. ಆದರೆ, ಡೆವಿಲ್ ಆಗಿಯೇ ಇಲ್ಲಿ ಅಬ್ಬರಿಸಿದ್ದಾರೆ. ಈ ಒಂದು ಅಬ್ಬರವನ್ನ ಬೆಳ್ಳಿ ತೆರೆ ಮೇಲೆ ಅನೇಕರು ನೋಡಿ ಆಗಿದೆ.

ದರ್ಶನ್ ಫ್ಯಾನ್ಸ್ ಇದನ್ನ ಮೆಚ್ಚಿಕೊಂಡಿರೋದು ಇದೆ. ದರ್ಶನ್ ವೈಫ್ ವಿಜಯಲಕ್ಷ್ಮಿ ಅವರಿಗೆ ಈ ಎರಡು ಪಾತ್ರದಲ್ಲಿ ಕೃಷ್ಣನ ಪಾತ್ರವೇ ತುಂಬಾನೆ ಇಷ್ಟ ಆಗಿದೆ. ಅದನ್ನ ಚಿತ್ರ ರಿಲೀಸ್ ಆದ ಮೊದಲ ದಿನವೇ ಹೇಳಿಕೊಂಡಿದ್ದಾರೆ.

darshan devil film director milana prakash share film making video on social media

ಕೃಷ್ಣನಾಗಿ ಪ್ರೇರಣೆ…

(ಚಿತ್ರ ಕೃಪೆ: ಶ್ರೀ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಮ್)

ಜುಲೈ-17ಕ್ಕೆ ಸ್ಟ್ರೀಮಿಂಗ್

ಡೆವಿಲ್ ಚಿತ್ರದ ಜೀ-5 ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಮಿಲನ ಪ್ರಕಾಶ್ ತಮ್ಮ ಈ ಚಿತ್ರದ ಮೇಕಿಂಗ್ ವಿಡಿಯೋವನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಡೆವಿಲ್ ಚಿತ್ರದ ಇತರ ಮಾಹಿತಿ

ಡೆವಿಲ್ ಚಿತ್ರವನ್ನ ಮಿಲನ ಪ್ರಕಾಶ್ ಡೈರೆಕ್ಷನ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಸುಧಾಕರ್ ಎಸ್.ರಾಜ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಚಿತ್ರದಲ್ಲಿ ದರ್ಶನ್‌ಗೆ ರಚನಾ ರೈ ಜೋಡಿ ಆಗಿದ್ದಾರೆ. ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಈ ಚಿತ್ರ ಜೀ-5 ಅಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed