West Bengal Politics: ಸಂಸದೆ ಕೋಯಲ್ ಮಲಿಕ್ ರಾಜೀನಾಮೆ, ಮಮತಾ ಬ್ಯಾನರ್ಜಿಗೆ ಮತ್ತೊಂದು ಬಿಗ್​ ಶಾಕ್​ / West Bengal Politics Shock: Koel Mallick Resigns as MP | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಂಸದೆ ಕೋಯಲ್ ಮಲಿಕ್ ರಾಜೀನಾಮೆ


Last Updated:

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮತ್ತೊಂದು ಹಿನ್ನಡೆ ಅನುಭವಿಸಿದೆ. ಪಶ್ಚಿಮ ಬಂಗಾಳದ ಟಿಎಂಸಿ ರಾಜ್ಯಸಭಾ ಸಂಸದೆ ಕೋಯಲ್ ಮಲಿಕ್ ರಾಜೀನಾಮೆ ನೀಡಿದ್ಧಾರೆ. ಇದರಿಂದ ದೀದಿಗೆ ದೊಡ್ಡ ಆಘಾತವಾಗಿದೆ.

ಸಂಸದೆ ಕೋಯಲ್ ಮಲಿಕ್ ರಾಜೀನಾಮೆ
ಸಂಸದೆ ಕೋಯಲ್ ಮಲಿಕ್ ರಾಜೀನಾಮೆ

ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ (TMC) ಮತ್ತೊಂದು ಹಿನ್ನಡೆ ಅನುಭವಿಸಿದೆ. ಪಶ್ಚಿಮ ಬಂಗಾಳದ ಟಿಎಂಸಿ ರಾಜ್ಯಸಭಾ ಸಂಸದೆ, ನಟಿ-ರಾಜಕಾರಣಿ ಕೋಯಲ್ ಮಲ್ಲಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಿಂದ ಕೆಳಗಿಳಿದ ನಾಲ್ಕನೇ ಸಂಸದೆ ಇವರಾಗಿದ್ದಾರೆ. ಇವರಿಗಿಂತ ಮೊದಲೇ ಮೂವರು ಸಂಸದರು ಪಕ್ಷದ ಸದಸ್ಯತ್ವವನ್ನು ತೊರೆದಿದ್ದಾರೆ. ಇದೀಗ ಮತ್ತೊಬ್ಬರು ರಾಜೀನಾಮೆ ಕೊಟ್ಟಿದ್ದು, ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತವಾಗಿದೆ.

ಹೌದು, ನಟಿ ಮತ್ತು ರಾಜಕಾರಣಿ ರುಕ್ಮಿಣಿ ಮಲ್ಲಿಕ್ (ವೃತ್ತಿಪರವಾಗಿ ಕೋಯೆಲ್ ಮಲ್ಲಿಕ್ ಎಂದು ಪ್ರಸಿದ್ಧರು) ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದೆ.

ಸಂಸದೆ ಕೋಯಲ್ ಮಲ್ಲಿಕ್ ರಾಜೀನಾಮೆ!

ರುಕ್ಮಿಣಿ ಮಲ್ಲಿಕ್ (ಕೋಯೆಲ್ ಮಲ್ಲಿಕ್)ರಾಜ್ಯಸಭೆ ಅಧ್ಯಕ್ಷರಾದ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ. ‘ನಾನು ರಾಜ್ಯಸಭಾ ಸದಸ್ಯತ್ವಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಪ್ರಿಲ್ 2026ರಲ್ಲಿ ನಾಮನಿರ್ದೇಶನ

2026ರ ವಿಧಾನಸಭಾ ಚುನಾವಣೆಗೆ ಮುನ್ನ ಏಪ್ರಿಲ್‌ನಲ್ಲಿ ಟಿಎಂಸಿ ಪಕ್ಷ ರುಕ್ಮಿಣಿ ಮಲ್ಲಿಕ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಬಂಗಾಳಿ ಚಲನಚಿತ್ರರಂಗದಲ್ಲಿ ಜನಪ್ರಿಯತೆ ಹೊಂದಿರುವ ಅವರನ್ನು ಪಕ್ಷದ ಜನಸಂಪರ್ಕಕ್ಕೆ ಬಳಸಿಕೊಳ್ಳುವ ಉದ್ದೇಶವಿತ್ತು. ರಂಜಿತ್ ಮಲ್ಲಿಕ್ ಅವರ ಪುತ್ರಿ ಎಂಬ ಕಾರಣದಿಂದಲೂ ಅವರು ಗಮನ ಸೆಳೆದಿದ್ದರು. ರಾಜ್ಯಸಭೆಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports