Last Updated:
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಒಟಿಟಿಗೆ ಬರ್ತಿದೆ. ಜುಲೈ ತಿಂಗಳಲ್ಲಿಯೇ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೆವಿಲ್ ಚಿತ್ರ (Devil Movie) ರಿಲೀಸ್ ಆಗಿ ಒಂದು ವರ್ಷದ ಮೇಲೆ ಆಗಿದೆ. ಇತ್ತೀಚಿಗೆ ಇದು ಜೀ ಕನ್ನಡ (Zee Kannada) ಚಾನೆಲ್ ಅಲ್ಲಿ ಪ್ರೀಮಿಯರ್ ಕೂಡ ಆಗಿದೆ. ಆದರೆ, ಈಗ ಈ ಚಿತ್ರ ಒಟಿಟಿಗೂ (Ott) ಕಾಲಿಟ್ಟಿದೆ. ಜೀ-5 ಅಲ್ಲಿಯೇ ಇದು ಸ್ಟ್ರೀಮಿಂಗ್ (Streaming) ಆಗುತ್ತಿದೆ. ಚಿತ್ರ ನಿರ್ಮಾಣ ಸಂಸ್ಥೆ ಈ ವಿಷಯವನ್ನ ಅಧಿಕೃತವಾಗಿ ಹೇಳಿದೆ. ಈ ಜುಲೈ ತಿಂಗಳಲ್ಲಿಯೇ ಇದು ಸ್ಟ್ರೀಮಿಂಗ್ ಕೂಡ ಆಗುತ್ತಿದೆ. ಈ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೆವಿಲ್ ಚಿತ್ರ ಒಟಿಟಿಗೆ ಬರ್ತಿದೆ. ಇತ್ತೀಚಿಗೆ ಈ ಚಿತ್ರ ಜೀ-5 ಅಲ್ಲೂ ಪ್ರೀಮಿಯರ್ ಆಗಿದೆ. ಇದರ ನಡುವೆ ಈ ಚಿತ್ರ ಒಟಿಟಿಗೆ ಬರ್ತಿದೆ ಅಂತ ಚಿತ್ರ ನಿರ್ಮಾಣ ಸಂಸ್ಥೆ ಶ್ರೀ ಜೈಮಾತಾ ಕಂಬೈನ್ಸ್ ಹೇಳಿಕೊಂಡಿದೆ. ಒಂದು ಪ್ರೋಮೋ ಕೂಡ ಶೇರ್ ಮಾಡಿಕೊಂಡಿದೆ.
ಜುಲೈ-17 ರಂದು ಸ್ಟ್ರೀಮಿಂಗ್
(ಚಿತ್ರ ಕೃಪೆ: ಶ್ರೀ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಮ್)
ಡೆವಿಲ್ ಚಿತ್ರದ ಸ್ಟ್ರೀಮಿಂಗ್ ಡೇಟ್ ಕೂಡ ಅನೌನ್ಸ್ ಆಗಿದೆ. ಜುಲೈ ತಿಂಗಳಲ್ಲಿಯೇ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಒಂದು ಡೇಟ್ ಕೂಡ ಅನೌನ್ಸ್ ಆಗಿದೆ.
ಡೆವಿಲ್ ಚಿತ್ರ ಜೀ-5 ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ-17 ರಂದು ಇದು ಪ್ರಸಾರ ಆಗುತ್ತಿದೆ. ಈ ಚಿತ್ರದ ಒಟಿಟಿ ಸ್ಟ್ರೀಮಿಂಗ್ ತುಂಬಾನೆ ಲೇಟ್ ಆಗಿದೆ. ಅಂದ್ರೆ ಒಂದು ವರ್ಷದ ಮೇಲೇನೆ ಆಗಿದೆ.
ಆದರೆ, ಕೃಷ್ಣ ಅನ್ನುವ ಪಾತ್ರದಲ್ಲಿ ಉದಯೋನ್ಮುಖ ಸಿನಿಮಾ ಕಲಾವಿದನಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕೃಷ್ಣನ ಪಾತ್ರ ಬಲು ಇಷ್ಟ ಆಗುತ್ತದೆ. ಚಿತ್ರ ರಿಲೀಸ್ ಆದ ದಿನವೇ ಇದನ್ನ ಹೇಳಿಕೊಂಡಿದ್ದರು.
ಒಟಿಟಿಗೆ ಬರ್ತಿದೆ ದರ್ಶನ್ ‘ಡೆವಿಲ್’ ಸಿನಿಮಾ
(ಚಿತ್ರ ಕೃಪೆ: ಶ್ರೀ ಜೈಮಾತಾ ಕಂಬೈನ್ಸ್ ಇನ್‌ಸ್ಟಾಗ್ರಾಮ್)
ಮಿಲನಾ ಪ್ರಕಾಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರೂ ಆಗಿದ್ದಾರೆ. ದೊಡ್ಡ ಬಜೆಟ್ ಅಲ್ಲಿಯೇ ಈ ಚಿತ್ರ ತಯಾರಾಗಿದೆ.
ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸುಧಾಕರ್ ಎಸ್.ರಾಜ್ ಕ್ಯಾಮರಾವರ್ಕ್ ಮಾಡಿದ್ದಾರೆ. ದರ್ಶನ್, ರಚನಾ ರೈ, ಮಹೇಶ್ ಮಾಂಜ್ರೇಕರ್, ವಿನಯ್ ಗೌಡ, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
ಡೆವಿಲ್ ಚಿತ್ರದಲ್ಲಿ ರಾಜಕೀಯವೂ ಇದೆ. ಆ್ಯಕ್ಷನ್ ಕೂಡ ಇವೆ.ಇದರೊಟ್ಟಿಗೆ ಥ್ರಿಲ್ಲಿಂಗ್ ಎಲಿಮೆಂಟ್ಸ್ ಸಹ ಇವೆ. ಇಷ್ಟೆಲ್ಲ ಇರೋ ಈ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಜುಲೈ-17 ರಂದು ಇದು ಸ್ಟ್ರೀಮಿಂಗ್ ಕೂಡ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka












