Deepika Padukone: ದೀಪಿಕಾ ಪಡುಕೋಣೆ ಐಶ್ವರ್ಯ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ? ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ರಹಸ್ಯಗಳು | | ACTPnews

ದೀಪಿಕಾ ಪಡುಕೋಣೆ


Last Updated:

ದೀಪಿಕಾ ಅವರನ್ನು ಮೊದಲ ಬಾರಿ ನೋಡಿದ ಕ್ಷಣದಲ್ಲೇ ಅವರು ದೊಡ್ಡ ತಾರೆಯಾಗುತ್ತಾರೆ ಎಂಬ ವಿಶ್ವಾಸ ನನಗೆ ಬಂದಿತ್ತು .ಮೊದಲ ಭೇಟಿಯಲ್ಲೇ ಒಂದು ದಿನ ನೀವು ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತೀರಿ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತೀರಿ ಎಂದು ನಾನು ಹೇಳಿದ್ದೆ ಎಂದು ಇಂದ್ರಜಿತ್ ನೆನಪಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ (Deepika Padukone) ಇಂದು ಬಾಲಿವುಡ್ ಮಾತ್ರವಲ್ಲ, ಹಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜಾಗತಿಕ ತಾರೆಯಾಗಿ ಬೆಳೆದಿದ್ದಾರೆ. ಆದರೆ ಇಂತಹ ದೊಡ್ಡ ಯಶಸ್ಸಿನ ಹಿಂದೆ ಒಂದು ಕುತೂಹಲಕರ ಆರಂಭದ ಕಥೆಯಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.

2006ರಲ್ಲಿ ಬಿಡುಗಡೆಯಾದ ಕನ್ನಡದ ಐಶ್ವರ್ಯ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಆ ಸಮಯದಲ್ಲಿ ಹೊಸ ಮುಖವನ್ನು ಹುಡುಕುತ್ತಿದ್ದರು. ಈಗಾಗಲೇ ಜನಪ್ರಿಯ ನಟಿಯನ್ನು ಆಯ್ಕೆ ಮಾಡುವ ಬದಲು, ಹೊಸ ಪ್ರತಿಭೆಗೆ ಅವಕಾಶ ನೀಡಬೇಕೆಂಬುದು ಅವರ ಉದ್ದೇಶವಾಗಿತ್ತು.

ಈ ವೇಳೆ ಕೆಲವರು ದೀಪಿಕಾ ಪಡುಕೋಣೆ ಅವರ ಹೆಸರನ್ನು ಸೂಚಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದೀಪಿಕಾ ಅವರನ್ನು ಭೇಟಿಯಾಗಲು ಇಂದ್ರಜಿತ್ ಲಂಕೇಶ್ ತೆರಳಿದರು. ಆದರೆ ಆ ಭೇಟಿ ಸಾಮಾನ್ಯವಾಗಿರಲಿಲ್ಲ. ಲಿಫ್ಟ್‌ನಲ್ಲಿ ನಡೆದ ಕೆಲವೇ ನಿಮಿಷಗಳ ಸಂಭಾಷಣೆಯೇ ದೀಪಿಕಾ ಅವರ ಬದುಕಿನ ದಿಕ್ಕನ್ನು ಬದಲಿಸಿತು.

ದೀಪಿಕಾ ಅವರನ್ನು ಮೊದಲ ಬಾರಿ ನೋಡಿದ ಕ್ಷಣದಲ್ಲೇ ಅವರು ದೊಡ್ಡ ತಾರೆಯಾಗುತ್ತಾರೆ ಎಂಬ ವಿಶ್ವಾಸ ನನಗೆ ಬಂದಿತ್ತು .ಮೊದಲ ಭೇಟಿಯಲ್ಲೇ ಒಂದು ದಿನ ನೀವು ವಿಶ್ವದಾದ್ಯಂತ ಖ್ಯಾತಿ ಪಡೆಯುತ್ತೀರಿ, ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತೀರಿ ಎಂದು ನಾನು ಹೇಳಿದ್ದೆ ಎಂದು ಇಂದ್ರಜಿತ್ ನೆನಪಿಸಿಕೊಂಡಿದ್ದಾರೆ.

ಮೊದಲು ದೀಪಿಕಾ ಸಂಪೂರ್ಣವಾಗಿ ಐಶ್ವರ್ಯ ಚಿತ್ರದ ಚಿತ್ರೀಕರಣ ಮುಗಿಸಿದರು. ನಂತರ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿ 100 ದಿನಗಳ ಪ್ರದರ್ಶನ ಕಂಡಿತು. ಕನ್ನಡದಲ್ಲಿ ಅವರ ಅಭಿನಯ ಗಮನಿಸಿದ ನಂತರವೇ ಬಾಲಿವುಡ್‌ನಲ್ಲಿ ಅವಕಾಶ ದೊರೆಯಿತು ಎಂದು ನಿರ್ದೇಶಕರು ವಿವರಿಸಿದ್ದಾರೆ.

ಐಶ್ವರ್ಯ ಚಿತ್ರದ ಯಶಸ್ಸಿನ ನಂತರ ದೀಪಿಕಾ ಪಡುಕೋಣೆ ಅವರ ಪ್ರತಿಭೆ ಎಲ್ಲರ ಗಮನ ಸೆಳೆಯಿತು. ಬಳಿಕ ಅವರಿಗೆ ಬಾಲಿವುಡ್‌ನಲ್ಲಿ ಓಂ ಶಾಂತಿ ಓಂ ಚಿತ್ರದ ಮೂಲಕ ಭರ್ಜರಿ ಅವಕಾಶ ದೊರೆಯಿತು.

ಆ ಚಿತ್ರದ ಯಶಸ್ಸಿನ ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ. ಒಂದರ ಹಿಂದೆ ಒಂದರಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‌ನ ಅಗ್ರ ನಟಿಯಾಗಿ ಹೊರಹೊಮ್ಮಿದರು. ನಂತರ ಹಾಲಿವುಡ್‌ನಲ್ಲೂ ಅವಕಾಶ ಪಡೆದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed