Darshan Case: ಮಾಫಿ ಸಾಕ್ಷಿ ಪ್ರದೋಷ್​ಗೆ ಬಿಗ್ ಶಾಕ್! ದರ್ಶನ್ ಅರ್ಜಿ ಅಂಗೀಕರಿಸಿ ಕೋರ್ಟ್​ನಿಂದ ಮಹತ್ವದ ಸೂಚನೆ | | ACTPnews

ದರ್ಶನ್​ - ಪ್ರದೋಷ್​


Last Updated:

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ 59ನೇ ಸೆಷನ್ಸ್ ಕೋರ್ಟ್ ಶಾಕ್ ಕೊಟ್ಟಿದೆ. ಆರೋಪಿ ದರ್ಶನ್ ಅರ್ಜಿ ಅಂಗೀಕರಿಸುವ ನ್ಯಾಯಾಲಯ ಮಹತ್ವ ಸೂಚನೆ ನೀಡಿದೆ.

ದರ್ಶನ್​ - ಪ್ರದೋಷ್​
ದರ್ಶನ್​ – ಪ್ರದೋಷ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನ (Renukaswamy Murder Case) ಆರೋಪಿ ದರ್ಶನ್, ಮಾಫಿ ಸಾಕ್ಷಿ ಪ್ರದೋಷ್​ಗೆ (Pradosh) ಎಸ್ಕಾರ್ಟ್ ಹಾಗೂ ಭೇಟಿ ಬಗ್ಗೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಸಾಕ್ಷಿ ಜೊತೆ ಇತರರ ಭೇಟಿಗೆ ಅವಕಾಶ ನೀಡದಂತೆ ದರ್ಶನ್ (Darshan) ಮನವಿ ಮಾಡಿಕೊಂಡಿದ್ದರು. ಪ್ರದೋಷ್ ಜೊತೆ ಕೆಲವು ವ್ಯಕ್ತಿಗಳು ಮಾತುಕತೆ ನಡೆಸಿದ್ದರು ಎಂದು ದರ್ಶನ್​ ಪರ ವಕೀಲರು ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು.

ಪೊಲೀಸರು ಎಸ್ಕಾರ್ಟ್ ನೀಡುವುದು ಬೇಡ

ಸದ್ಯ, ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಅಂಗೀಕರಿಸಿದ ನ್ಯಾಯಾಲಯ, ಇನ್ನು ಮುಂದೆ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ನೀಡುವುದು ಬೇಡ ಎಂದು ಹೇಳಿದೆ. ಮಾಫಿ ಸಾಕ್ಷಿ ಪ್ರದೋಷ್​ಗೆ ಸಿಎಆರ್ ಪೊಲೀಸರಿಂದ ಎಸ್ಕಾರ್ಟ್ ಮತ್ತು ಭದ್ರತೆಗೆ ಸೂಚನೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ತರುವುದು ಮತ್ತು ಕೋರ್ಟ್​ಗೆ ಹಾಜರುಪಡಿಸುವುದು ಸಿಎಆರ್ ಡಿಸಿಪಿ ಜವಾಬ್ದಾರಿಯಾಗಿದೆ. ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಅಳವಡಿಸಿರಬೇಕು. ಸೂಕ್ತ ಭದ್ರತೆಯಲ್ಲಿ ಕರೆತರಲು 59ನೇ ಸೆಷನ್ಸ್ ಕೋರ್ಟ್, ಸಿಎಆರ್ ಡಿಸಿಪಿಗೆ ಸೂಚನೆ ನೀಡಿದೆ.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed