Last Updated:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ 59ನೇ ಸೆಷನ್ಸ್ ಕೋರ್ಟ್ ಶಾಕ್ ಕೊಟ್ಟಿದೆ. ಆರೋಪಿ ದರ್ಶನ್ ಅರ್ಜಿ ಅಂಗೀಕರಿಸುವ ನ್ಯಾಯಾಲಯ ಮಹತ್ವ ಸೂಚನೆ ನೀಡಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನ (Renukaswamy Murder Case) ಆರೋಪಿ ದರ್ಶನ್, ಮಾಫಿ ಸಾಕ್ಷಿ ಪ್ರದೋಷ್ಗೆ (Pradosh) ಎಸ್ಕಾರ್ಟ್ ಹಾಗೂ ಭೇಟಿ ಬಗ್ಗೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಸಾಕ್ಷಿ ಜೊತೆ ಇತರರ ಭೇಟಿಗೆ ಅವಕಾಶ ನೀಡದಂತೆ ದರ್ಶನ್ (Darshan) ಮನವಿ ಮಾಡಿಕೊಂಡಿದ್ದರು. ಪ್ರದೋಷ್ ಜೊತೆ ಕೆಲವು ವ್ಯಕ್ತಿಗಳು ಮಾತುಕತೆ ನಡೆಸಿದ್ದರು ಎಂದು ದರ್ಶನ್ ಪರ ವಕೀಲರು ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು.
ಸದ್ಯ, ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಅಂಗೀಕರಿಸಿದ ನ್ಯಾಯಾಲಯ, ಇನ್ನು ಮುಂದೆ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ನೀಡುವುದು ಬೇಡ ಎಂದು ಹೇಳಿದೆ. ಮಾಫಿ ಸಾಕ್ಷಿ ಪ್ರದೋಷ್ಗೆ ಸಿಎಆರ್ ಪೊಲೀಸರಿಂದ ಎಸ್ಕಾರ್ಟ್ ಮತ್ತು ಭದ್ರತೆಗೆ ಸೂಚನೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಕರೆ ತರುವುದು ಮತ್ತು ಕೋರ್ಟ್ಗೆ ಹಾಜರುಪಡಿಸುವುದು ಸಿಎಆರ್ ಡಿಸಿಪಿ ಜವಾಬ್ದಾರಿಯಾಗಿದೆ. ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಅಳವಡಿಸಿರಬೇಕು. ಸೂಕ್ತ ಭದ್ರತೆಯಲ್ಲಿ ಕರೆತರಲು 59ನೇ ಸೆಷನ್ಸ್ ಕೋರ್ಟ್, ಸಿಎಆರ್ ಡಿಸಿಪಿಗೆ ಸೂಚನೆ ನೀಡಿದೆ.
(ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)














