Last Updated:
Ketan: ಕೇತನ್ ಸಾವಿನ ನಂತರ ಮೆಟ್ರೋ ಒಂದರಲ್ಲಿ ಬೆಚ್ಚಿ ಬೀಳಿಸೋ ದೃಶ್ಯ ಕಂಡು ಬಂದಿದೆ. ಆ ದೃಶ್ಯವೇನು ಗೊತ್ತಾ? ಅಲ್ಲಿದ್ದ ಯುವಕರು ಶಾಕ್ ಆಗಿದ್ದು ಯಾಕೆ?
ಕೇತನ್ ಸಾವು (Ketan Case) ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೇತನ್ ಹಾಗೂ ಸಿಯಾ (Siya Goyal) ಅವರ ಸ್ಟೋರಿ ದೇಶದಲ್ಲಿ ಸದ್ಯ ಹಾಟ್ ಟಾಪಿಕ್ ಆಗಿದೆ. ಎಲ್ಲರ ಬಾಯಲ್ಲಿಯೂ ಇವರಿಬ್ಬರದ್ದೇ ಕಥೆ. ಇನ್ನು ಈ ಘಟನೆ ಬಹಳಷ್ಟು ಜನರನ್ನು ಬೆಚ್ಚಿ ಬೀಳಿಸಿದೆ. ವಿಶೇಷವಾಗಿ ಮದುವೆ ಯೋಚನೆ ಮಾಡುತ್ತಿರುವವರಂತೂ ಬೆಚ್ಚಿ ಬಿದ್ದಿದ್ದಾರೆ. ಹೀಗಿರುವಾಗಲೇ ಶಾಕಿಂಗ್ ಅಪ್ಡೇಟ್ ಒಂದು ಕಂಡು ಬಂದಿದೆ.
ಈಗಾಗಲೇ ಯುವಕರು ಮದುವೆ ಅಂದರೆ ಭಯ ಪಡೋ ವಾತಾವರಣ ಸೃಷ್ಟಿಯಾಗಿದೆ. ಹೀಗಿರುವಾಗಲೇ ಮೆಟ್ರೋದಲ್ಲಿ ಯುವತಿಯೊಬ್ಬಳ ದೃಶ್ಯ ಎಲ್ಲರನ್ನೂ ಶಾಕ್ಗೊಳಿಸಿದೆ. ಏನದು ಅಂತೀರಾ?
ಹೌದು, ಯುವತಿಯೊಬ್ಬಳು ರಶ್ ಆಗಿರುವ ಮೆಟ್ರೋದಲ್ಲಿ ಹವ್ ಟು ಕಿಲ್ ಮೆನ್ ಎನ್ನುವಂತಹ ಪುಸ್ತಕವನ್ನು ತುಂಬಾ ಸಾಧಾರಣವಾಗಿ ಓದುತ್ತಿರುವ ದೃಶ್ಯ ವೈರಲ್ ಆಗಿದೆ. ಈಗ ಇರುವ ಸಂದರ್ಭವೂ ಈ ಯುವತಿ ಓದುತ್ತಿರುವ ಪುಸ್ತಕವೂ ಸರಿಯಾಗಿದೆ ಬಿಡಿ, ಯುವಕರು ಓಡಿ ಬಿಡ್ತಾರೆ ಎಂದು ತಮಾಷೆಯಾಗಿ ಹಲವರು ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಯುವತಿ ಯಾಕೆ ಇಂಥಹ ಪುಸ್ತಕ ಓದುತ್ತಿದ್ದಾರೆ ಎಂದಿದ್ದಾರೆ. ಇನ್ನು ಯುವತಿ ತುಂಬಾ ತಲ್ಲೀನತೆಯಿಂದ ಪುಸ್ತಕ ಓದುತ್ತಿರುವ ದೃಶ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆಕೆ ಶಾಂತವಾಗಿ ಪುಸ್ತಕ ಒದುತ್ತಿದ್ದರೆ ಮೆಟ್ರೋದಲ್ಲಿದ್ದವರು ಶಾಕ್ ಆಗಿ ಪುಸ್ತಕ ನೋಡಿದ್ದಾರೆ. ಪುಸ್ತಕದ ಹೆಸರನ್ನು ನೋಡಿಯೇ ಯುವಕರು ಹೆದರಿಕೊಂಡಿದ್ದಾರೆ.
ನಿಶ್ಚಿತಾರ್ಥದ ನಂತರ ಸಿಯಾ ಗೋಯಲ್ ತನ್ನ ಗೆಳೆಯನ ಜೊತೆ ಸೇರಿ ತನ್ನ ಭಾವೀ ವರ ಕೇತನ್ ಅವರನ್ನು ಕೊಲೆ ಮಾಡಿದ ನಂತರ ಈ ಘಟನೆ ದೊಡ್ಡ ಸುದ್ದಿಯಾಯಿತು. ಮದುವೆ ಇಷ್ಟವಿಲ್ಲ ಎಂದಾದರೆ ನೋ ಹೇಳುವ ಬದಲು ಕೊಲೆಯೇ ಮಾಡಬೇಕಾಯ್ತೇ ಎಂದು ಬಹಳಷ್ಟು ಜನರು ಈ ಘಟನೆಯನ್ನು ಪ್ರಶ್ನೆ ಮಾಡಿದ್ದಾರೆ.
ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಅಂತಿಮ ತೀರ್ಮಾನ ಹೊರಬರಲಿದೆ. ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಅವರ ಸಹೋದರ ಹೇಳುವಂತೆ, ಅವರು ನಿಜವಾಗಿಯೂ ಕೇತನ್ ಜೊತೆ ಹೊಸ ಜೀವನ ಆರಂಭಿಸಲು ಬಯಸಿದ್ದರೋ ಅಥವಾ ಪೊಲೀಸ್ ತನಿಖೆಯ ಪ್ರಕಾರ ಚೇತನ್ ಜೊತೆ ವಾಸಿಸಲು ಸಂಬಂಧ ಮುರಿದುಕೊಳ್ಳಲು ಬಯಸಿದ್ದರೋ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ.
Bangalore,Karnataka













