Last Updated:
Pradosh: ಪ್ರದೋಷ್ ಮಾಫಿ ಸಾಕ್ಷಿಯಾದ ನಂತರ ಹೇಗಿದೆ ಕಂಡೀಷನ್? ಜೈಲಿನಲ್ಲಿ ಹೈ ಅಲರ್ಟ್ ಆಗಿದ್ದಾರೆ ಪೊಲೀಸ!
ದರ್ಶನ್ನನ್ನು (Darshan) ಒಳಗೊಂಡ ಹೈಪ್ರೊಫೈಲ್ ಕೇಸ್ ಆಗಿ ಬದಲಾಗಿರೋ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಮಾಫಿ ಸಾಕ್ಷಿ ಪ್ರದೂಷ್ (Pradosh) ಮೇಲೆ ಪುಲ್ ನಿಗಾ ಇಡಲಾಗುತ್ತದೆ ಎನ್ನಲಾಗಿದೆ. ಪ್ರದೂಷ್ ಇರುವ ಸೆಲ್ ಮೇಲೆ 24/7 ನಿಗಾ ಇಡಲು ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.
ಕೊಲೆ ಕೇಸಿನಲ್ಲಿ ಪ್ರದೂಷ್ ಮಾಫಿ ಸಾಕ್ಷಿಯಾದ ಹಿನ್ನೆಲೆ ಜೈಲಾಧಿಕಾರಿಗಳು ತೀವ್ರ ನಿಗಾ ವಹಿಸಿ ಭದ್ರತೆ ನೀಡಿದ್ದಾರೆ. ಪ್ರದೂಷ್ ಇರುವ ಸೆಲ್ ಮೇಲೆ ಸಿಸಿಟಿವಿ ಕಣ್ಗಾವಲು ಇದ್ದು ಪ್ರದೂಷ್ ಗೆ ಬರುವ ಹೊರಗಿನ ಊಟ ತಿಂಡಿ ನೀರಿನ ಮೇಲೂ ನಿಗಾ ಇಡಲಾಗುತ್ತದೆ.
ಪ್ರದೂಷ್ ಭೇಟಿಗೆ ಬರುವ ವ್ಯಕ್ತಿಗಳ ಬಗ್ಗೆಯೂ ಗಮನ ನೀಡಲಾಗುತ್ತದೆ. ಭೇಟಿಗೆ ಬರುವ ವ್ಯಕ್ತಿಗಳ ಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ಪ್ರದೂಷ್ ಮಾಫಿ ಸಾಕ್ಷಿಯಾಗಿರೋದ್ರಿಂದ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಜೈಲಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಹದ್ದಿನ ಕಣ್ಣು ಇಡಲಾಗಿದೆ. ಸದ್ಯ ಇದು ಭಾರೀ ಕುತೂಹಲ ಮೂಡಿಸಿದ್ದಷ್ಟೇ ಅಲ್ಲದೆ ಎಲ್ಲರ ಚಿತ್ತ ಸದ್ಯ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸೋ ದಿನದ ಕಡೆ ಇದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ಮುಂದೆ ಆರೋಪಿ 14 ಆಗಿದ್ದ ಪ್ರದೋಷ್ ಪ್ರಾಸಿಕ್ಯೂಷನ್ ವಿಟ್ನೆಸ್ ಸಾಕ್ಷಿಯಾಗಲಿದ್ದಾನೆ. ಚಾರ್ಜ್ ಶೀಟ್ ನಲ್ಲಿ ಆರೋಪಿ ಸ್ಥಾನದಿಂದ ಪ್ರದೂಷ್ ಹೆಸರು ತೆಗೆಯಲು ಸೂಚನೆ ನೀಡಲಾಗಿದೆ.
ಎ14 ಆರೋಪಿ ಎಂಬುದನ್ನು ಡಿಲಿಟ್ ಮಾಡಲು ಕೋರ್ಟ್ ಸೂಚನೆ ನೀಡಿದ್ದು, ಇನ್ಮುಂದೆ ಪ್ರದೋಷ್ ಪ್ರಕರಣದ ಸಾಕ್ಷಿಯಾಗಲಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ನನ್ನು ಮಾಫಿ ಸಾಕ್ಷಿಯನ್ನಾಗಿ ಪ್ರದೂಷ್ ಪರಿಗಣಿಸಿದ ಹಿನ್ನಲೆ ಆರೋಪಿ ಎಂದಿರುವ ಹೆಸರು ಡಿಲೀಟ್ ಮಾಡಲು ಪ್ರದೋಷ್ ಲಾಯರ್ ಮನವಿ ಮಾಡಿದ್ದರು. ಚಾರ್ಜ್ ಶೀಟ್ ನಲ್ಲಿ ಆರೋಪಿ 14 ಪ್ರದೂಷ್ ಎಂದಿರುವ ಹೆಸರು ಡಿಲೀಟ್ ಆಗಲಿದೆ.
ಇದೀಗ ಸೆಪ್ಟೆಂಬರ್ 28ರಂದು ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ ಎಂಬ ಬೆಳವಣಿಗೆ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ಪ್ರದೋಷ್ ನ್ಯಾಯಾಲಯದ ಮುಂದೆ ಯಾವ ರೀತಿಯ ಹೇಳಿಕೆ ನೀಡುತ್ತಾರೆ, ಅದನ್ನು ವಿಚಾರಣೆಯಲ್ಲಿ ಹೇಗೆ ಪರಿಗಣಿಸಲಾಗುತ್ತದೆ ಮತ್ತು ನಂತರ ದರ್ಶನ್ ಪರ ವಕೀಲರು ಯಾವ ರೀತಿಯ ಪ್ರತಿಪ್ರಶ್ನೆ ನಡೆಸುತ್ತಾರೆ ಎಂಬುದು ಮುಂದಿನ ಹಂತದಲ್ಲಿ ತಿಳಿಯಬೇಕಿದೆ.
ವರದಿ: ಮುನಿರಾಜು ಕೆ.ಜಿ, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














