Last Updated:
Darshan: ನಟ ದರ್ಶನ್ ಅವರು ಜೈಲಿನಲ್ಲಿ ತಮ್ಮನ್ನು ಭೇಟಿಯಾದ ಪತ್ನಿಯ ಬಳಿ ಹೆತ್ತ ತಾಯಿಗಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನು ಆ ಮೆಸೇಜ್? ಇಲ್ಲಿ ಓದಿ.
ಸ್ಯಾಂಡಲ್ವುಡ್ನ (Sandalwood) ಸುಲ್ತಾನ ಅಂತ ಕರೆಸಿಕೊಂಡ ದರ್ಶನ್ (Darshan) ಈಗ ಜೈಲಲ್ಲಿದ್ದಾರೆ. ಆಚೆ ಇದ್ದಾಗ ದರ್ಶನ್ ಜೀವನವೇ ಬೇರೆಯಾಗಿತ್ತು. ದರ್ಶನ್ ಸುತ್ತ ಮುತ್ತ ಬೌನ್ಸರ್ಗಳು, ಜೊತೆಗಾರರು ಸದಾ ಓಡಾಡುತ್ತಿದ್ದರು. ಅಬ್ಬಾ ಅವರು ಹೊರಗಡೆ ಕಾಲಿಟ್ಟರೆ ಒಂದು ಡಜನ್ ಜನ ಸುತ್ತ ಇರುತ್ತಿದ್ದರು. ಆದರೆ ಈಗ , ಪತ್ನಿ ಮಗನನ್ನೂ ಭೇಟಿ ಮಾಡಲು ಕೊರ್ಟ್ ಅನುಮತಿ ನೀಡಬೇಕಾದ ಅನಿವಾರ್ಯತೆ ದರ್ಶನ್ ಗೆ ಎದುರಾಗಿದೆ. ತಾಯಿ ಮೀನ ಅವರನ್ನು ನೋಡಿ ತಿಂಗಳುಗಳೇ ಕಳೆದಿವೆ.
ದರ್ಶನ್ ಈಗ ಅಮ್ಮನ ನೆನಪಲ್ಲಿದ್ಧಾರೆ. ಕಷ್ಟ ಕಾಲದಲ್ಲಿ ತಂದೆ ಇಲ್ಲವಾದಾಗ ತಮ್ಮನ್ನು ಸಾಕಿ ಸಲುಹಿದ ತಾಯಿಯನ್ನು ಭೇಟಿ ಮಾಡೋದಕ್ಕೂ ಆಗದ ಪರಿಸ್ಥಿತಿಯಲ್ಲಿದ್ದಾರೆ. ವಯಸ್ಸಾಗಿರೋ ತಾಯಿ ಕಾಲು ನೋವಿನ ಸಮಸ್ಯೆಯಿಂದ ದಾಸನನ್ನ ನೋಡೋಕೆ ಬರಲಾಗದ ಸ್ಥಿತಿಯಲ್ಲಿದ್ದಾರೆ. ತಾಯಿಯ ಹುಟ್ಟುಹಬ್ಬದ ದಿನ ಅಮ್ಮನನ್ನ ನೆನೆದು ಭಾವುಕರಾಗಿದ್ದಾರೆ ನಟ.
ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಹೋದ ನಂತರ ಅಮ್ಮನ ಮಿಸ್ ಮಾಡಿಕೊಳ್ತಾ ಇದ್ದೇನೆ ಅಂತ ಸಹೋದರ ದಿನಕರ್ ಹತ್ತಿರ ಅಳಲು ತೋಡಿಕೊಂಡಿದ್ದರು. ಅದಾದ ನಂತರ ಮೀನಾ ತೂಗುದೀಪ್ ಮಗನನ್ನ ಸೆರೆಮನೆಯಲ್ಲಿ ಭೇಟಿಯಾಗಿದ್ದರು.
ದರ್ಶನ್ ಅವರು ಮಧ್ಯಂತರ ಬೇಲ್ ಸಿಕ್ಕ ತಕ್ಷಣ ದರ್ಶನ್ ತಾನು ತಾಯಿ ಮನೆಗೆ ಹೋಗಬೇಕು. ಮೈಸೂರಿನ ಮನೆಯಲ್ಲಿ ಕಾಲ ಕಳೆಯಬೇಕು ಅನ್ನೋ ಸಲುವಾಗಿಯೇ ಮೈಸೂರಿಗೆ ಭೇಟಿ ನೀಡೋಕೆ ಕೋರ್ಟ್ನಿಂದ ಅಪ್ಪಣೆ ಪಡೆದಿದ್ದರು. ದರ್ಶನ್ ಸೀದಾ ತಮ್ಮ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದಲ್ಲದೆ ಅಮ್ಮನ ಜೊತೆಗೆ ಸೇರಿ ಸಂಕ್ರಾಂತಿ ಹಬ್ಬವನ್ನ ಆಚರಿಸಿದ್ದರು.
ಇದೀಗ ತಾಯಿಯ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ತಿಳಿಸೋದಕ್ಕೂ ಆಗದ ಪರಿಸ್ಥಿತಿಯಲ್ಲಿರೊ ದಾಸನಿಗೆ ಬೆಂಬಲವಾಗಿ ವಿಜಯಲಕ್ಷ್ಮಿ ನಿಂತಿದ್ದಾರೆ. ಮಗನೊಂದಿಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಬಂದಿದ್ದಲ್ಲದೆ ದರ್ಶನ್ಗೆ ಸಮಾಧಾನ ಹೇಳಿದ್ದಾರೆ. ಪತ್ನಿ ಮಗನನ್ನ ನೊಡಿ ಭಾವುಕರಾಗಿರೊ ದರ್ಶನ್ ಮತ್ತಷ್ಟು ಮೌನಕ್ಕೆ ಜಾರಿದ್ದಾರೆ.
ಸದ್ಯಕ್ಕೆ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನಿಂದ ಹೊರ ಬರೋಕೆ ಸಾಧ್ಯವೇ ಇಲ್ಲ. ಇದೇ ಸಲುವಾಗಿ ದರ್ಶನ್ ಅವರ ಲಕ್ಷಾಂತರ ಅಭಿಮಾನಿಗಳು ಸುಪ್ರೀಂ ತೀರ್ಪು ಹೊರ ಬಿದ್ದ ಬೆನ್ನಲ್ಲೇ ಭಾವುಕರಾಗಿದ್ದರು. ಅಭಿಮಾನಿಗಳು ಈಗ ಮಾತು ಕಡಿಮೆ ಮಾಡಿ ಮೌನಕ್ಕೆ ಜಾರಿದ್ದಾರೆ. ಇತ್ತ ವಿಜಯಲಕ್ಷ್ಮಿಯ ಬಳಿ ತಮ್ಮ ನೋವನ್ನ ಹೇಳಿಕೊಂಡಿರೋ ಅಭಿಮಾನಿಗಳಿಗೆ ದರ್ಶನ್ ಆದಷ್ಟು ಬೇಗ ಬರ್ತಾರೆ ಧೈರ್ಯವಾಗಿರಿ ಅನ್ನೋ ಮಾತನ್ನ ವಿಜಯಲಕ್ಷ್ಮಿ ಹೇಳಿದ್ದಾರೆ.
-ಗೀತ ನ್ಯೂ ಸ್ 18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore,Karnataka













