Darshan: ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಅವಸರಪಟ್ಟು ಆ ಕೆಲಸ ಮಾಡಿದ್ರಾ? ವಕೀಲ ರಂಗನಾಥ್ ರೆಡ್ಡಿ ಹೇಳಿದ್ದೇನು? | | ACTPnews

ದರ್ಶನ್


Last Updated:

ತೀರ್ಪಿನ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

ದರ್ಶನ್
ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ವಿನಯ್ ಮತ್ತು ಧನರಾಜ್ ಅವರಿಗೆ ಸೆಷನ್ಸ್ ಕೋರ್ಟ್ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಈ ಆರೋಪಿಗಳು ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು. ಆದರೆ ಆ ವಾದವನ್ನು ಹೈಕೋರ್ಟ್ ಸಂಪೂರ್ಣವಾಗಿ ಒಪ್ಪದೇ ಜಾಮೀನು ಆದೇಶವನ್ನು ಎತ್ತಿಹಿಡಿದಿದೆ. ಆರೋಪಿಗಳಾದ ರಾಘವೇಂದ್ರ, ಧನರಾಜ್ ಹಾಗೂ ವಿನಯ್ ಪರವಾಗಿ ಹಿರಿಯ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದ್ದರು.

ಹಾಗೆಯೇ ದರ್ಶನ್ ಕಡೆಯವರಿಗೂ ಸಲಹೆ ಕೋಟ್ಟಿದ್ದೆ, ಅವರ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಬಹುದು. ಆದ್ರೆ ದರ್ಶನ್ ಅವರು ಅವಸರ ಪಟ್ಟು ಸುಪ್ರೀಂಕೋರ್ಟ್ ಗೆ ಹೋದ್ರು ಅನ್ಸುತ್ತೆ. ಹೀಗಾಗಿ ಈಗ ದರ್ಶನ್‌ಗೆ ಇಂದಿನ ಹೈಕೋರ್ಟ್ ಆದೇಶ ಅನ್ವಯ ಆಗುವು ಸಾಧ್ಯತೆ ಕಡಿಮೆ. ಜೊತೆಗೆ ದರ್ಶನ್ ಸುಪ್ರೀಂಕೋರ್ಟ್ ಗೆ ಹೋಗಿರಲಿಲ್ಲ ಅಂದ್ರೆ ಈಗ ದರ್ಶನ್ ಗೆ ಜಾಮೀನು ಪಡೆದುಕೊಳ್ಳಬಹುದಿತ್ತುಎಂದು ಹಿರಿಯ ವಕೀಲ ರಂಗನಾಥ್ ರೆಡ್ಡಿ ತಿಳಿಸಿದ್ದಾರೆ .

ವರದಿ – ಕಾರ್ತಿಕ್, ನ್ಯೂಸ್ 18 ಕನ್ನಡ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports