Last Updated:
ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಹೊಸ ಪೋಸ್ಟರ್ ಹೊರ ಬಂದಿದೆ. ಇದು ಎಲ್ಲರ ಗಮನ ಸೆಳೆಯುವಂತೆ ಇದೆ. ಇದರಲ್ಲಿ ಕೆಲವು ವಿಷಯಗಳೂ ಇವೆ. ಅದರ ವಿವರ ಇಲ್ಲಿದೆ ಓದಿ.
ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baasha Movie) ಬರ್ತ್ ಡೇ ಪೋಸ್ಟರ್ ರಿಲೀಸ್ (Birthday Poster Release) ಆಗಿದೆ. ಹೊಸ ಲೋಕ, ಹೊಸ ಅವತಾರ, ಹೊಸ ಯುಗದ ಆರಂಭ ಇಲ್ಲಿಂದಲೇ ಅನ್ನುವ ಸಾಲು ಇವೆ. ಈ ಪೋಸ್ಟರ್ ಇಂಟ್ರಸ್ಟಿಂಗ್ ಅನಿಸುತ್ತದೆ. ಚಿತ್ರದ ಒಟ್ಟು ಥೀಮ್ ಏನಿದೆ ಅದರ ಚಿತ್ರಣ ಇಲ್ಲೂ ಇದೆ. ಹಿಮಚ್ಛಾದಿತ ಪ್ರದರ್ಶನದಲ್ಲಿ ಬೈಕ್ ತೆಗೆದುಕೊಂಡು ಸ್ಪೀಡ್ ಆಗಿ ಹೋಗ್ತಿರೋ ಕಿಚ್ಚ ಸುದೀಪ್ (Kichcha Sudeepa) ಇಲ್ಲಿ ಕಾಣಿಸುತ್ತಿದ್ದಾರೆ. ಹಿಂದೆ ಬ್ಲಾಸ್ಟ್‌ಗಳು, ವಿಮಾನಗಳ ಹಾರಾಟ ಇದೆ. ಆದರೆ, ಕಿಚ್ಚನ (Kichcha) ಮುಖದಲ್ಲಿ ಟೆನ್ಷನ್ ಇಲ್ಲ. ರಿಲ್ಯಾಕ್ಸ್ ಆಗಿಯೇ ಇದ್ದಾರೆ. ಈ ಪೋಸ್ಟರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.














