Last Updated:
ಸುದೀಪ್ ಜನ್ಮ ದಿನಕ್ಕೆ ಸಮುದ್ರಕನಿ ಚಿತ್ರದ ಸುದ್ದಿ ಹೊರ ಬಂದಿದೆ. ಸೆಪ್ಟೆಂಬರ್-1 ರಂದು ರಾತ್ರಿ 12 ಗಂಟೆಗೆ ಈ ಚಿತ್ರದ ಫಸ್ಟ್ ಕಟ್ ವಿಡಿಯೋ ಹೊರ ಬಂದಿದೆ. ಇದರ ಮಾಹಿತಿ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeep) ಜನ್ಮ ದಿನಕ್ಕೆ ತಮಿಳು ಡೈರೆಕ್ಟರ್ ಸಮುದ್ರಕನಿ (Director Samuthirakani) ಚಿತ್ರ ಅನೌನ್ಸ್ ಆಗಿದೆ. ರಾಕ್‌ಲೈನ್ ವೆಂಕಟೇಶ್ ಅವರ ನಿರ್ಮಾಣ ಸಂಸ್ಥೆ ಈ ಚಿತ್ರವನ್ನ ಪ್ರಸೆಂಟ್ ಮಾಡ್ತಿದೆ. ಲೆನಿನ್ ಕ್ರಿಯೇಷನ್ ಕೂಡ ಸಾಥ್ ಕೊಟ್ಟಿದೆ. ಚಿತ್ರಕ್ಕೆ ‘ಸ್ಕೂಲ್ ಬಸ್’ (School Bus) ಅನ್ನುವ ಟೈಟಲ್ ಇಟ್ಟಿದ್ದಾರೆ. ಈ ಚಿತ್ರದ ಟೀಸರ್ ರೂಪದ ವಿಡಿಯೋ ಹೊರ ಬಂದಿದೆ. ಇದರಲ್ಲಿ ಸುದೀಪ್ (Sudeepa) ಎಂಟ್ರಿನೇ ಸೂಪರ್ ಆಗಿದೆ. ಇಡೀ ವಿಷ್ಯೂಲ್ ಅಷ್ಟೆ ಶ್ರೀಮಂತವಾಗಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ.














