Last Updated:
ಓಣಂ ಹಬ್ಬಕ್ಕೆ ಕೇರಳಕ್ಕೆ ತೆರಳುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಆಗಸ್ಟ್ 10 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರು-ಎರ್ನಾಕುಳಂ, ತಿರುವನಂತಪುರ ನಾರ್ತ್-ಮಂಗಳೂರು, ಚೆನ್ನೈ ಸೆಂಟ್ರಲ್-ಕೊಲ್ಲಂ ಮಾರ್ಗಗಳಲ್ಲಿ
ಬೆಂಗಳೂರು: ಕೇರಳದ (Kerala) ಸಾಂಸ್ಕೃತಿಕ ಹಬ್ಬ ‘ಓಣಂ’ (Onam) ಸನಿಹದಲ್ಲಿದೆ. ಹಬ್ಬವನ್ನು ಆಚರಿಸಲು ತಮ್ಮ ಊರಿಗೆ ತೆರಳುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ (Indian Railway Department) ಭರ್ಜರಿ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು (Special Trains) ಘೋಷಿಸಿದ್ದು, ಇದೀಗ ಟಿಕೆಟ್ ಬುಕ್ಕಿಂಗ್ (Booking) ಕೂಡ ಆರಂಭವಾಗಿದೆ.
ತಿರುವನಂತಪುರ ನಾರ್ತ್ – ಮಂಗಳೂರು: ಆಗಸ್ಟ್ 12 ರಿಂದ ಸೆಪ್ಟೆಂಬರ್ 3 ರವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲು ವರ್ಕಳ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಳಂ, ತ್ರಿಶೂರ್, ಕಣ್ಣೂರು ಸೇರಿದಂತೆ ಕರಾವಳಿಯ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ವಿಜಯ ಕರ್ನಾಟಕ ವೆಬ್‍ಸೈಟ್ ವರದಿ ಮಾಡಿದೆ.
ಚೆನ್ನೈ ಸೆಂಟ್ರಲ್ – ಕೊಲ್ಲಂ: ಆಗಸ್ಟ್ 13 ರಿಂದ ಸೆಪ್ಟೆಂಬರ್ 5 ರವರೆಗೆ ಚೆನ್ನೈ ಮತ್ತು ಕೊಲ್ಲಂ ನಡುವೆ ವಿಶೇಷ ರೈಲುಗಳು ಸಂಪರ್ಕ ಕಲ್ಪಿಸಲಿವೆ.
ಹಬ್ಬದ ಸಮಯದಲ್ಲಿ ದಟ್ಟಣೆ ವಿಪರೀತವಾಗಿರುವುದರಿಂದ, ಕೊನೆಯ ನಿಮಿಷದ ಗಡಿಬಿಡಿಯನ್ನು ತಪ್ಪಿಸಲು ಆಸಕ್ತ ಪ್ರಯಾಣಿಕರು ಈಗಲೇ ಆನ್‍ಲೈನ್ ಅಥವಾ ರೈಲ್ವೆ ಕೌಂಟರ್‍ಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿಕೊಳ್ಳುವುದು ಉತ್ತಮ. ಈ ವಿಶೇಷ ರೈಲುಗಳ ಸಮಯದ ಪಟ್ಟಿ ಮತ್ತು ನಿಲುಗಡೆಗಳ ಸಂಪೂರ್ಣ ಮಾಹಿತಿ ಈಗಾಗಲೇ ರೈಲ್ವೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
Bangalore [Bangalore],Bangalore,Karnataka
Jul 15, 2026 12:01 PM IST














