Last Updated:
ಡಾಲಿ ಧನಂಜಯ್ ಸಿಟ್ಟು ಮಾಡಿಕೊಂಡಿದ್ದಾರೆ. ನೆಗೆಟಿವ್ ಕಾಮೆಂಟ್ ಹೊಡೆಯೊರಿಗೆ ಏನು ಹೇಳೋಣ ಅಂತಲೂ ಬೇಸರದಲ್ಲಿಯೇ ಹೇಳಿದ್ದಾರೆ. ದರ್ಶನ್ ಫ್ಯಾನ್ಸ್ ಬೇಸರದ ಕುರಿತು ಕೇಳಿದ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಾಲಿ ಧನಂಜಯ್ (Daali Dhananjay) ಬೇಸರ ಮಾಡಿಕೊಂಡಿದ್ದಾರೆ. ಮದರ್ ಪ್ರಾಮಿಸ್ ಚಿತ್ರ (Mother Promise Movie) ಚೆನ್ನಾಗಿದೆ. ಇದಕ್ಕೂ ನೆಗೆಟಿವ್ (Negative) ಮಾಡ್ತಾರಲ್ಲ ಅಂತಲೇ ಸಿಟ್ಟು ಹೊರಗೆ ಹಾಕಿದ್ದಾರೆ. ಮಾತಿನ ಭರದಲ್ಲಿ ಇನ್ಮುಂದೆ ನಾನು ನಿರ್ಮಾಣ ಮಾಡೋದೇ ಇಲ್ಲ ಅಂತ ಹೇಳಿರೋದು ಇದೆ. ಇದರ ಹೊರತಾಗಿ ದರ್ಶನ್ ಫ್ಯಾನ್ಸ್ (Darshan Fans) ಸಿಟ್ಟು ಮಾಡಿಕೊಂಡಿರೋ ಬಗ್ಗೆನೂ ಕ್ಲಾರಿಟಿ ಕೊಟ್ಟಿದ್ದಾರೆ. ಡಾಲಿ ಧನಂಜಯ್ ಪ್ರೆಸ್ ಮೀಟ್ ಅಲ್ಲಿ ಮಾತನಾಡಿರೋ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟೈಮ್ ಟ್ರಾವೆಲ್ ಇದ್ದರೆ…?
ಆದರೆ, ಆವಾಗ ನಾವು ಬಂದು ಒಳ್ಳೆ ಸಿನಿಮಾ ಮಾಡಿದ್ದೇವೆ ಅಂತ ಹೇಳಿಯೇ ಇಲ್ಲ. ಆದರೆ, ಮದರ್ ಪ್ರಾಮಿಸ್ ಒಂದು ಒಳ್ಳೆ ಚಿತ್ರವೇ ಆಗಿದೆ. ಥಿಯೇಟರ್ ಖಾಲಿ ಇರೋ ವಿಡಿಯೋ ಮಾಡಿ ತೋರಿಸಿದ್ರೆ ಹೇಗೆ?
ಜನ ಹೊರಗೆ ಹೋದ್ಮೇಲೆ ಇದನ್ನ ಮಾಡಿ ತೋರಿಸಬಹುದು ಅಲ್ವೇ? ಕೋಟಿ ಗಟ್ಟಲೆ ದುಡ್ಡು ಮಾಡ್ತಿರೋ ಚಿತ್ರಗಳ ಬಗ್ಗೇನೂ ಹೀಗೆ ತೋರಿಸಬಹುದು ಅಲ್ವೇ? ಅಂತಲೂ ಪ್ರಶ್ನೆ ಮಾಡಿದ್ದಾರೆ.
ಪಕ್ಕಕ್ಕೆ ಕುಳಿತಾಗ ಒಳ್ಳೆ ಸಿನಿಮಾ ಅಂತ ಹೇಳೋದು. ಆ ಮೇಲೆ ಅದೇ ಕೆಲವು ಇನ್ಫ್ಲುಯೆನ್ಸರ್ ಸೋಷಿಯಲ್ ಮೀಡಿಯಾದಲ್ಲಿ ಮದರ್ ಪ್ರಾಮಿಸ್ ಚೆನ್ನಾಗಿಲ್ಲ ಅಂತಲೆ ಹೇಳೋದು.
ಇಂತಹವರಿಗೆ ಏನು ಹೇಳ್ತೀರಿ ಅಂತಲೇ ಡಾಲಿ ಧನಂಜಯ್ ಅವರಿಗೆ ಪತ್ರಕರ್ತರು ಪ್ರಶ್ನೆ ಮಾಡ್ತಾರೆ. ಆಗ ಡಾಲಿ ಧನಂಜಯ್ ತಮ್ಮ ಅಭಿಪ್ರಾಯ ಹೇಳ್ತಾರೆ. ಈ ರೀತಿ ಆದರೆ ಏನು ಹೇಳೋದು? ವಯುಕ್ತಿಕವಾಗಿ ಹೋಗಿ ಏನು ಹೇಳೋದು ಅಂತವರಿಗೆ? ಇದೊಂತರ ಕಾಯಿಲೆನೇ ಬಿಡಿ ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ.
ಡಾಲಿ ಧನಂಜಯ್ ಅವರು ಮದರ್ ಪ್ರಾಮಿಸ್ ಚಿತ್ರದ ರಿಲೀಸ್ ಮುಂಚೆ ಟಿವಿ-9ಗೆ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ಒಂದು ಪ್ರಶ್ನೆ ಬರುತ್ತದೆ. ದರ್ಶನ್ ಜೈಲಿಗೆ ಹೋದ್ರು. ಅದು ಇಂಡಸ್ಟ್ರಿಗೆ ಒಂದು ದೊಡ್ಡ ಪಟ್ಟೆ ಬಿದ್ದಂತೆನೆ ಆಗುತ್ತದೆ.
ಖಾಲಿ ಥಿಯೇಟರ್ ತೋರಿಸೋರಿಗೆ ಏನ್ ಹೇಳೋಣ?
ಪುನೀತ್ ಅವರು ಎಲ್ಲರನ್ನ ಬಿಟ್ಟು ಹೋದ್ರು. ಇದು ಕೂಡ ಇಂಡಸ್ಟ್ರಿಗೆ ಒಂದು ಪೆಟ್ಟೆ ಬಿಡಿ. ಹಾಗಾಗಿ ಈಗಿರೋ ಕಲಾವಿದರಿಗೆ ಜವಾಬ್ದಾರಿ ಹೆಚ್ಚಾಯ್ತು ಅಲ್ಲವೇ ಅಂತಲೇ ಈ ಸಂದರ್ಶನದಲ್ಲಿ ಪ್ರಶ್ನೆ ಬರುತ್ತದೆ. ಇದಕ್ಕೆ ಡಾಲಿ ಉತ್ತರ ಕೊಟ್ಟಿದ್ದಾರೆ.
ನನಗೆ ಟ್ರೈಮ್ ಟ್ರಾವೆಲ್ ಮಾಡುವ ಅವಕಾಶ ಇದ್ದರೆ, ಈ ಎರಡು ಘಟನೆಯನ್ನ ತಡೆಯುತ್ತಿದ್ದೆ. ಪುನೀತ್ ಹೋಗಿರೋದನ್ನ ಮತ್ತು ದರ್ಶನ್ ಘಟನೆಯನ್ನೆ ತಡೆಯುತ್ತಿದ್ದೆ ಅಂತಲೇ ಡಾಲಿ ಧನಂಜಯ್ ಮೇಲೆ ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ಕೊಡ್ತಾರೆ.
ನನಗೂ ದರ್ಶನ್ ಅವರ ಬಗ್ಗೆ ಅಭಿಮಾನ ಇದೆ. ನಾನು, ಶಿವಣ್ಣ, ಸುದೀಪ್ ಎಲ್ಲರೂ ಈ ರೀತಿ ಆಗ್ಬಾರದಿತ್ತು ಅಂತಲೇ ಯೋಚನೆ ಮಾಡಿದ್ದೇವೆ ಹೊರತು ಬೇರೆ ಏನೂ ಇಲ್ಲ ಅಂತಲೇ ಡಾಲಿ ಧನಂಜಯ್ ಪತ್ರಕರ್ತರ ಪ್ರಶ್ನೆಗೆ ಹೀಗೆ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














