Last Updated:
72 ನೇಯ ರಾಷ್ಟ್ರೀಯ ಪ್ರಶಸ್ತಿ ಪ್ರಕಟಗೊಂಡಿದೆ. ಈ ಸಲ ಅತ್ಯುತ್ತಮ ನಟ ಪ್ರಶಸ್ತಿ ಇಬ್ಬರಿಗೆ ಹೋಗಿದೆ. ಮಲೆಯಾಳಂ ನಟ ಮಮ್ಮುಟ್ಟಿ ‘ಭ್ರಮಯುಗಂ’ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಚಂದು ಚಾಂಪಿಯನ್ ಚಿತ್ರಕ್ಕಾಗಿಯೇ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆರ್ಟಿಕ್-370 ಚಿತ್ರಕ್ಕಾಗಿ ನಟಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ ಮಿಥ್ಯ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಇದರ ವಿವರ ಇಲ್ಲಿದೆ ಓದಿ.
72 ನೇಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಜನವರಿ 1,2024 ಡಿಸೆಂಬರ್-31,2024 ನಡುವೆ ಸಿಬಿಎಫ್ಸಿ ಪ್ರಮಾಣೀಕರಿಸಲ್ಪಟ್ಟ ಚಿತ್ರಗಳಿಗೆ ಈ ಪ್ರಶಸ್ನಿ ನೀಡಲಾಗಿದೆ. ಕನ್ನಡದ ಮಿಥ್ಯ ಚಿತ್ರ ಅತ್ಯುತ್ತುಮ ಕನ್ನಡ ಚಿತ್ರವಾಗಿದೆ. ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನ ಬಾಲ ನಟ ಅತಿಶ್ ಶೆಟ್ಟಿಗೆ ಬಂದಿದೆ. ಇದೇ ಚಿತ್ರದ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಅಂತ ಬಂದ್ರೆ ಅಲ್ಲಿ ರೂಪಾ ವರ್ಕಾಡಿ ಅವರಿಗೆ ಬಂದಿದೆ. ಕನ್ನಡ ಚಿತ್ರ ಅಲ್ಲದೆ ಮತ್ಯಾವ ಚಿತ್ರಗಳಿಗೆ ಅವಾರ್ಡ್ ಬಂದಿವೆ ಅನ್ನೋದು ಇಲ್ಲಿದೆ ಓದಿ.
ಅತ್ಯುತ್ತಮ ಕನ್ನಡ ಚಿತ್ರ ಅಂತ ಬಂದ್ರೆ, ಮಿಥ್ಯ ಚಿತ್ರ ಈ ಒಂದು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ. ಈ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಅತಿಶ್ ಶೆಟ್ಟಿ ಅವರು ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಕನ್ನಡ ಸಿನಿಮಾ
ಇದೇ ಚಿತ್ರದ ಪೋಷಕ ನಟನೆಗೆ ರೂಪಾ ವರ್ಕಾಡಿ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆ ಈ ಚಿತ್ರವನ್ನ ರಕ್ಷಿತ್ ಶೆಟ್ಟಿ ಅವರ ಪರಮ್ವಃ ಸ್ಟುಡಿಯೋಸ್ ಹಾಗೂ ಕೆಆರ್ಜಿ ಈ ಚಿತ್ರವನ್ನ ನಿರ್ಮಿಸಿದೆ. ಸುಮಂತ್ ಭಟ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿ ಅಂತ ಬಂದರೆ, ಮಲೆಯಾಳಂ ಭ್ರಮಯುಗಂ ಚಿತ್ರಕ್ಕೆ ಮಮ್ಮುಟ್ಟಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಪಡೆದುಕೊಂಡಿದ್ದಾರೆ. ಇವರು ಚಂದು ಚಾಂಪಿಯನ್ ಚಿತ್ರಕ್ಕಾಗಿಯೇ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ನಾಯಕ ನಟಿ
ಬೆಸ್ಟ್ ತುಳು ಸಿನಿಮಾ ಅಂತ ಬಂದ್ರೆ ಈ ಸಲ ಇಂಬು ಚಿತ್ರಕ್ಕೆ ಈ ಪ್ರಶಸ್ತಿ ಬಂದಿದೆ. ಪಿಚ್ಚರ್ ಸ್ಟುಡಿಯೋ ಇದನ್ನ ನಿರ್ಮಾಣ ಮಾಡಿದೆ. ಶಿವಧ್ವಜ್ ಶೆಟ್ಟಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.
ಇತರ ಸಿನಿಮಾಗಳ ವಿವರ
ಅತ್ಯುತ್ತಮ ನಟಿ: ‘ಆರ್ಟಿಕಲ್ 370’ ಚಿತ್ರಕ್ಕಾಗಿ ಯಾಮಿ ಗೌತಮ್
ಅತ್ಯುತ್ತಮ ನಟ ಯಾರು
ಅತ್ಯುತ್ತಮ ನಿರ್ದೇಶನ: ‘ಅಮರನ್’ ಚಿತ್ರಕ್ಕಾಗಿ ರಾಜ್ಕುಮಾರ್ ಪೆರಿಯಸಾಮಿ
ಅತ್ಯುತ್ತಮ ಮಕ್ಕಳ ಸಿನಿಮಾ: ‘ನಂದಕಿಶೋರ್’ (ತೆಲುಗು)
ಅತ್ಯುತ್ತಮ ಜನಪ್ರಿಯ ಸಿನಿಮಾ: ‘ಕಲ್ಕಿ 2898 AD’ (ತೆಲುಗು)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರಕ್ಕಾಗಿ ರಣದೀಪ್ ಹೂಡಾ














