Ram Gopal Varma: ಸೆನ್ಸಾರ್ ಬ್ಯಾನ್ ಮಾಡಿ! ರಾಮ್ ಗೋಪಾಲ್ ವರ್ಮಾ ಹೇಳಿಕೆ ಫುಲ್ ವೈರಲ್ | | ACTPnews

ರಾಮ್ ಗೋಪಾಲ್ ವರ್ಮಾ


Last Updated:

ಬಾಲಿವುಡ್‌ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಮ್ ಗೋಪಾಲ್ ವರ್ಮಾ, ಸಿನಿಮಾಗಳಿಗೆ ಸೆನ್ಸಾರ್ ಮಾಡುವ ವ್ಯವಸ್ಥೆಯೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ

ಸಿನಿಮಾಗಳಿಗೆ ಸೆನ್ಸಾರ್‌ಶಿಪ್ (Censorship) ಅಗತ್ಯವೇ ಅಥವಾ ಬೇಡವೇ ಎಂಬ ಚರ್ಚೆ ಭಾರತದಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಕಾಲ ಬದಲಾಗುತ್ತಿದ್ದಂತೆ ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದು, ಸಿನಿಮಾಗಳ ಮೇಲಿನ ನಿಯಂತ್ರಣದ ಅಗತ್ಯವಿದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಿಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಇದೇ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಇದೀಗ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬಾಲಿವುಡ್‌ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಮ್ ಗೋಪಾಲ್ ವರ್ಮಾ, ಸಿನಿಮಾಗಳಿಗೆ ಸೆನ್ಸಾರ್ ಮಾಡುವ ವ್ಯವಸ್ಥೆಯೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಸೆನ್ಸಾರ್ ಮಂಡಳಿಯ ಕಾರ್ಯವೈಖರಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾಗಳನ್ನು ಕತ್ತರಿಸುವ ಅಥವಾ ದೃಶ್ಯಗಳನ್ನು ತೆಗೆದುಹಾಕುವ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇಂದಿನ ಕಾಲದಲ್ಲಿ ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಮಕ್ಕಳು ಸಹ ಇಂಟರ್‌ನೆಟ್ ಮೂಲಕ ಜಗತ್ತಿನ ವಿವಿಧ ರೀತಿಯ ಕಂಟೆಂಟ್‌ಗಳನ್ನು ಸುಲಭವಾಗಿ ವೀಕ್ಷಿಸುವ ಅವಕಾಶ ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಕೆಲವು ಪದಗಳನ್ನು ತೆಗೆದುಹಾಕುವುದು ಅಥವಾ ಧೂಮಪಾನದ ದೃಶ್ಯಗಳನ್ನು ಮಸುಕಾಗಿಸುವುದು ಕೇವಲ ನಾಟಕ ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಇಂಟರ್‌ನೆಟ್‌ನಲ್ಲಿ ಯಾವುದೇ ರೀತಿಯ ಕಟ್ಟುನಿಟ್ಟಿನ ಸೆನ್ಸಾರ್ ಇಲ್ಲದಿದ್ದರೂ, ಸಿನಿಮಾಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಕಾಲದ ಅಗತ್ಯಕ್ಕೆ ತಕ್ಕಂತೆ ಸಿನಿಮಾ ಸೆನ್ಸಾರ್ ವ್ಯವಸ್ಥೆಯಲ್ಲೂ ಬದಲಾವಣೆ ಆಗಬೇಕೆಂದು ಒತ್ತಿಹೇಳಿದ್ದಾರೆ.

ಇದನ್ನೂ ಓದಿ: Yogaraj Bhat: ರಾಕಿಂಗ್ ಸ್ಟಾರ್ ಯಶ್‌ರನ್ನ ಉಡಕ್ಕೆ ಹೋಲಿಸಿದ ಯೋಗರಾಜ್ ಭಟ್! ಇದರ ಹಿಂದಿದೆ ಆ ಕಾರಣ!

18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ದೇಶದ ಆಡಳಿತವನ್ನು ನಿರ್ಧರಿಸುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇದೆ. ದೇಶದ ಭವಿಷ್ಯವನ್ನು ನಿರ್ಧರಿಸುವಷ್ಟು ಪ್ರಬುದ್ಧತೆ ಹೊಂದಿರುವ ವ್ಯಕ್ತಿಗೆ ಯಾವ ಸಿನಿಮಾ ನೋಡಬೇಕು, ಯಾವುದು ಸೂಕ್ತ, ಯಾವುದು ಸೂಕ್ತವಲ್ಲ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವೂ ಇದೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಆದ್ದರಿಂದ ಸಿನಿಮಾಗಳನ್ನು ಕತ್ತರಿಸುವ ಬದಲು ವಯೋಮಿತಿ ಆಧಾರಿತ ರೇಟಿಂಗ್ ಹಾಗೂ ಅಗತ್ಯ ಎಚ್ಚರಿಕೆ ಸಂದೇಶಗಳನ್ನು ನೀಡಿದರೆ ಸಾಕು. ಅದರ ನಂತರ ಯಾವ ಸಿನಿಮಾ ನೋಡಬೇಕು ಎಂಬುದನ್ನು ಪ್ರೇಕ್ಷಕರೇ ತೀರ್ಮಾನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಎನ್ನುವುದು ಸಮಾಜದ ವಾಸ್ತವಿಕತೆಯನ್ನು ಪ್ರತಿಬಿಂಬಿಸುವ ಒಂದು ಪ್ರಬಲ ಮಾಧ್ಯಮ. ಅದು ಕೇವಲ ಮನರಂಜನೆ ಮಾತ್ರವಲ್ಲ, ಸಮಾಜದಲ್ಲಿರುವ ಸಮಸ್ಯೆಗಳು, ಭಾವನೆಗಳು ಹಾಗೂ ನೈಜ ಘಟನೆಗಳನ್ನು ತೋರಿಸುವ ಕನ್ನಡಿಯೂ ಹೌದು. ಸಿನಿಮಾ ನೀತಿಪಾಠ ಹೇಳುವ ತರಗತಿ ಅಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed