Chandan Shetty: ಚಂದನ್ ಶೆಟ್ಟಿ ‘ಡಯಾನಾಮೈಟ್’ ಕನ್ನಡದಲ್ಲೂ ಬರುತ್ತೆ! ಹೇಳಿದ್ಯಾರು ಗೊತ್ತಾ? | | ACTPnews

chandan shetty dynamite kannada music video release soon


ಕನ್ನಡದಲ್ಲೂ ಡಯಾನಾಮೈಟ್ ಸಾಂಗ್

ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ಕನ್ನಡದಲ್ಲೂ ಬರುತ್ತದೆ. ಇದನ್ನ ನೋಡಿದವರು ಒಂದೇ ಮಾತು ಹೇಳುತ್ತಿದ್ದಾರೆ. ಮ್ಯೂಸಿಕ್ ಚೆನ್ನಾಗಿದೆ.

ಕನ್ನಡದಲ್ಲೂ ಡಯಾನಾಮೈಟ್ ಸಾಂಗ್

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಆದರೆ, ಅರ್ಥ ಆಗ್ತಿಲ್ಲ. ಅದಕ್ಕೇನೆ ಇದನ್ನ ಕನ್ನಡದಲ್ಲೂ ಮಾಡಿ ಅಂತಿದ್ದಾರೆ. ಹಾಗಾಗಿ ಇದನ್ನ ಕನ್ನಡಲ್ಲೂ ಬಿಡುಗಡೆ ಮಾಡುತ್ತೇವೆ. ಈ ಒಂದು ಹಾಡಿನಲ್ಲಿ ಒಳ್ಳೆ ಸಾಲುಗಳಿವೆ.

ಡಯಾನಾ ಇಂಟ್ರಡಕ್ಷನ್ ಸಾಂಗ್

ಡಯಾನಾಮೈಟ್ ಅಲ್ಲಿ ಡಯಾನಾ ಇಂಟ್ರಡಕ್ಷನ್ ಇದೆ. ಆದರೆ, ಇದರಲ್ಲಿ ಹೆಣ್ಣು ಮಕ್ಕಳು ಅದೆಷ್ಟು ಸ್ಟ್ರಾಂಗ್ ಆಗಿದ್ದಾರೆ ಅನ್ನೋದು ಇದೆ.

ಇಂಗ್ಲಿಷ್ ಅಲ್ಲಿ ಇದನ್ನ ರಿಲೀಸ್ ಮಾಡಿದ್ದೇವೆ. ಆದರೆ,ಸದ್ಯಕ್ಕೆ ನಾನು ಇಂಗ್ಲಿಷ್ ಮ್ಯೂಸಿಕ್ ವಿಡಿಯೋ ಲೋಕದಲ್ಲಿ ಏನೂ ಅಲ್ಲ. ಎಂದಿನಂತೆ ಕನ್ನಡದಲ್ಲಿಯೇ ಎಂದಿನಂತೆ ಹಾಡು ಮಾಡ್ತಾನೇ ಇರುತ್ತೇನೆ. ಆಗಾಗ ಒಂದು ಇಂಗ್ಲಿಷ್ ಸಾಂಗ್ ಮಾಡುತ್ತೇನೆ. ಈ ಮೂಲಕ ಇಂಗ್ಲಿಷ್ ಮ್ಯೂಸಿಕ್ ಲೋಕದಲ್ಲಿ ನನ್ನ ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ.

ಹೊಸ ಟ್ಯೂನ್ ಎಲ್ಲರಿಗೂ ಕೇಳಿಸುವೆ

ಸಾಮಾನ್ಯವಾಗಿ ಒಂದು ಹಾಡು ಮಾಡಿದ್ರೆ ಆಯಿತು. ಅದನ್ನ ಎಲ್ಲರಿಗೂ ಕೇಳಿಸುತ್ತೇನೆ. ಕಾರ್ ಅಲ್ಲಿ ಹೋಗುವಾಗ ನನ್ನ ಹಾಡುಗಳನ್ನ ಪ್ಲೇ ಮಾಡುತ್ತೇನೆ. ಅದರಲ್ಲಿಯೇ ನನ್ನ ಒಂದು ಹೊಸ ಹಾಡು ಹಚ್ಚುತ್ತೇನೆ.

ಆಗ ಸ್ನೇಹಿತರ ರಿಯಾಕ್ಷನ್ ಸ್ಟಡಿ ಮಾಡುತ್ತೇನೆ. ಯಾವ ಲೈನ್‌ಗೆ ಹೇಗೆಲ್ಲ ಯಾರು ರಿಯಾಕ್ಟ್ ಮಾಡ್ತಾರೆ ಅಂತ ನೋಡ್ತಾ ಇರುತ್ತೇನೆ. ಹೀಗೆ ಒಂದು ಹಾಡನ್ನ ರಿಲೀಸ್ ಮಾಡೋ ಮೊದಲು ಇಷ್ಟೆಲ್ಲ ಕೆಲಸಗಳು ಆಗಿರುತ್ತವೆ.

chandan shetty dynamite kannada music video release soon

ಡಯಾನಾ ಇಂಟ್ರಡಕ್ಷನ್ ಸಾಂಗ್

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಹೊಸ ಹಾಡನ್ನ ಕೇಳ್ತಾನೇ ಇರುತ್ತೇನೆ

ಒಂದು ಸಾಂಗ್ ಮಾಡಿದ್ರೆ ಆಯಿತು. ಓಕೆ ಅಂತ ಶೂಟಿಂಗ್‌ಗೂ ಹೋಗೋದಿಲ್ಲ. ಬದಲಾಗಿ ಆ ಗೀತೆಯನ್ನ ಮತ್ತೆ ಮತ್ತೆ ಕೇಳುತ್ತೇನೆ. ಅದು ಎಷ್ಟು ಸಲ ಕೇಳಿದರೂ ಮೊದಲ ಸಿಕ್ಕ ಮಜಾನೇ ಸಿಕ್ಕರೆ ಅದನ್ನ ಫೈನಲ್ ಮಾಡುತ್ತೇನೆ.

ಪ್ರತಿ ದಿನ ನಾನು ಮ್ಯೂಸಿಕ್ ಮಾಡ್ತಿನೋ ಬಿಡ್ತಿನೋ? ಸಿಸ್ಟಮ್ ಮುಂದೆ ಕುಳಿತುಕೊಳ್ಳುತ್ತೇನೆ. ಆದರೆ, ನಾಲ್ಕೈದು ಗಂಟೆ ಕುಳಿತರು ಎರಡ್ಮೂರು ಸಲ ಮಾತ್ರ ಮ್ಯೂಸಿಕ್ ಮಾಡ್ಬೇಕು ಅನಿಸುತ್ತದೆ. ಆಗಲೇ ಹಾಡುಗಳನ್ನ ಬರೆಯುತ್ತೇನೆ. ಕೆಲವೊಮ್ಮೆ ಎಷ್ಟು ಯೋಚನೆ ಮಾಡಿದರೂ ಅಷ್ಟೇನೆ, ಏನು ಹೊಳೆಯೋದೇ ಇಲ್ಲ.

ಕೆಲಸ ಮಾಡ್ತಾನೇ ಏನೋ ಹೊಳೆಯುತ್ತೆ

ಮೈಸೂರಿನಲ್ಲಿಯೇ ಸದ್ಯ ಇರೋದು. ಇಲ್ಲಿ ನನ್ನ ಕೆಲಸ ನಾನೇ ಮಾಡುತ್ತೇನೆ. ಇದರಿಂದ ಖುಷಿ ಆಗುತ್ತದೆ. ಕೆಲಸ ಮಾಡ್ತಾನೇ ಏನೋ ಒಂದು ಹೊಸ ವಿಚಾರ ಹೊಳೆಯುತ್ತದೆ.

ಹೊಸಬರು ಜಾಸ್ತಿ ದುಡ್ಡು ಹಾಕ್ಬೇಡಿ

ಹೊಸದಾಗಿ ಈ ಒಂದು ಕ್ಷೇತ್ರಕ್ಕೆ ಬರೋರು ಕಡಿಮೆ ದುಡ್ಡಿನಲ್ಲಿಯೇ ಮೊದಲು ಪ್ರಯತ್ನ ಮಾಡಿದರೆ ಒಳ್ಳೆಯದು. ಒಂದು ವೇಳೆ ಜಾಸ್ತಿ ದುಡ್ಡು ಖರ್ಚು ಮಾಡಿರೋ ಹಾಡು ಓಡದೇ ಇದ್ದರೆ ಕಷ್ಟ ಆಗುತ್ತದೆ.

ಇದರಿಂದ ವಾಪಾಸ್ ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೇನೆ ಹೆಚ್ಚಿನ ದುಡ್ಡು ಹಾಕದೆ ಸಾಂಗ್ ಮಾಡಿ ಅಂತಲೇ ಚಂದನ್ ಶೆಟ್ಟಿ ಸಲಹೆ ಕೊಟ್ಟಿದ್ದಾರೆ. ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್‌ಕಾಸ್ಟ್ ಅಲ್ಲಿ ತಮ್ಮ ಈ ಎಲ್ಲ ಅನುಭವ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports