Last Updated:
2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಟೇಲರ್, ಐಸಿಸಿ ನಿಯಮಾವಳಿಗಳ ಉಲ್ಲಂಘನೆಗಾಗಿ 3.5 ವರ್ಷಗಳ ನಿಷೇಧವನ್ನು ಎದುರಿಸಿದ್ದರು. ನಿಷೇಧದ ಅವಧಿ ಮುಗಿದ ಬಳಿಕ, 2027ರ ಏಕದಿನ ವಿಶ್ವಕಪ್‌ಗೆ ಜಿಂಬಾಬ್ವೆ ಜಂಟಿ ಆತಿಥ್ಯ ವಹಿಸುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು 2025 ರಲ್ಲಿ ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ್ದರು.
ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಬ್ರೆಂಡನ್ ಟೇಲರ್ (Zimbabwe legend Brendan Taylor), ಪುರುಷರ ಏಕದಿನ (ODI) ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ (ODI Cricket) ಅತ್ಯಂತ ಸುದೀರ್ಘ ವೃತ್ತಿಜೀವನ ಹೊಂದಿದ್ದ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂದು ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ, 40 ವರ್ಷದ ಟೇಲರ್ ತಮ್ಮ ಒನ್ ಡೇ ವೃತ್ತಿಜೀವನದ ಅವಧಿಯನ್ನು 22 ವರ್ಷ ಹಾಗೂ 146 ದಿನಗಳಿಗೆ ವಿಸ್ತರಿಸಿದ್ದಾರೆ. ಇದು ಸಚಿನ್ ತೆಂಡೂಲ್ಕರ್ ಅವರ ಸುದೀರ್ಘ ವೃತ್ತಿಜೀವನದ (22 ವರ್ಷ ಮತ್ತು 91 ದಿನಗಳು) ದಾಖಲೆಗಿಂತ 55 ದಿನಗಳು ಹೆಚ್ಚಾಗಿದೆ.
ಬ್ರೆಂಡನ್ ಟೇಲರ್ ಅವರ ಏಕದಿನ ವೃತ್ತಿಜೀವನವು ಏಪ್ರಿಲ್ 20, 2004 ರಂದು ಇದೇ ಹರಾರೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಿತ್ತು. ಇಂದಿನ ಪಂದ್ಯವು ಅವರ ವೃತ್ತಿಜೀವನದ 208ನೇ ಏಕದಿನ ಪಂದ್ಯವಾಗಿದೆ. ಜಿಂಬಾಬ್ವೆಯ ಅತ್ಯಂತ ನಂಬಿಕಸ್ಥ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಟೇಲರ್, ಇದುವರೆಗೆ ಆಡಿರುವ 207 ಏಕದಿನ ಪಂದ್ಯಗಳಲ್ಲಿ 11 ಶತಕಗಳ ನೆರವಿನಿಂದ 6,704 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಇವರ ದಾಖಲೆ ಉತ್ತಮವಾಗಿದ್ದು, 37 ಪಂದ್ಯಗಳಿಂದ 2,420 ರನ್ ಗಳಿಸಿದ್ದಾರೆ.
2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಟೇಲರ್, ಐಸಿಸಿ ನಿಯಮಾವಳಿಗಳ ಉಲ್ಲಂಘನೆಗಾಗಿ 3.5 ವರ್ಷಗಳ ನಿಷೇಧವನ್ನು ಎದುರಿಸಿದ್ದರು. ನಿಷೇಧದ ಅವಧಿ ಮುಗಿದ ಬಳಿಕ, 2027ರ ಏಕದಿನ ವಿಶ್ವಕಪ್‌ಗೆ ಜಿಂಬಾಬ್ವೆ ಜಂಟಿ ಆತಿಥ್ಯ ವಹಿಸುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು 2025 ರಲ್ಲಿ ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ್ದರು.
ಜಿಂಬಾಬ್ವೆ ತಂಡಕ್ಕೆ ಸಿಗುವ ಪಂದ್ಯಗಳ ಕೊರತೆಯಿಂದಾಗಿ ಟೇಲರ್ ಅವರ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಅವರಿಗಿಂತ ಕಡಿಮೆ ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಪ್ರತಿ ವರ್ಷ ಸರಾಸರಿ 21 ಏಕದಿನ ಪಂದ್ಯಗಳನ್ನು ಆಡುತ್ತಿದ್ದರು. ಆದರೆ, ಬ್ರೆಂಡನ್ ಟೇಲರ್ ವರ್ಷಕ್ಕೆ ಸರಾಸರಿ 10 ಕ್ಕಿಂತ ಕಡಿಮೆ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೇಲರ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಗಸ್ಟ್ 2025 ರಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಆ ಪಂದ್ಯದ ಬಳಿಕ ಮತ್ತೊಂದು ಪಂದ್ಯ ಆಡಲು ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗಿ ಬಂತು.
ಸಚಿನ್ ತೆಂಡೂಲ್ಕರ್ ಅವರು ಗಾಯದ ಸಮಸ್ಯೆಗಳನ್ನು ಹೊರತುಪಡಿಸಿ ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಇಂತಹ ಸುದೀರ್ಘ ಬಿಡುವನ್ನು ಎದುರಿಸಿರಲಿಲ್ಲ. ಆದರೆ, ಸುದೀರ್ಘ ಅವಧಿಯ ದಾಖಲೆಯನ್ನು ಟೇಲರ್ ಮುರಿದಿದ್ದರೂ, ಅತಿ ಹೆಚ್ಚು ಏಕದಿನ ಪಂದ್ಯಗಳು (463 ಪಂದ್ಯಗಳು) ಮತ್ತು ಅತಿ ಹೆಚ್ಚು ರನ್ (18,426 ರನ್) ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಗಳು ಇಂದಿಗೂ ಅಜೇಯವಾಗಿ ಉಳಿದಿವೆ.
ಬ್ರೆಂಡನ್ ಟೇಲರ್ -(ಜಿಂಬಾಬ್ವೆ )>> 22 ವರ್ಷ 148 ದಿನಗಳು* 208*
ಸಚಿನ್ ತೆಂಡೂಲ್ಕರ್ (ಭಾರತ) >> 22 ವರ್ಷ 91 ದಿನಗಳು 463
ಸನತ್ ಜಯಸೂರ್ಯ (ಶ್ರೀಲಂಕಾ)>> 21 ವರ್ಷ 184 ದಿನಗಳು 445
ಜಾವೇದ್ ಮಿಯಾಂದಾದ್ (ಪಾಕಿಸ್ತಾನ)>> 20 ವರ್ಷ 272 ದಿನಗಳು 233
ಸೀನ್ ವಿಲಿಯಮ್ಸ್ (ಜಿಂಬಾಬ್ವೆ) >>>> 20 ವರ್ಷ 187 ದಿನಗಳು 164
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) >>>> 19 ವರ್ಷ 337 ದಿನಗಳು 301
ಶೋಯೆಬ್ ಮಲಿಕ್ (ಪಾಕಿಸ್ತಾನ)>> 19 ವರ್ಷ 245 ದಿನಗಳು 287
ರೋಹಿತ್ ಶರ್ಮಾ (ಭಾರತ)>> >>>> 19 ವರ್ಷ 26 ದಿನಗಳು 288
ಅರವಿಂದ ಡಿಸಿಲ್ವಾ ಶ್ರೀಲಂಕಾ)>>>> 18 ವರ್ಷ 352 ದಿನಗಳು 308
ಮುಶ್ಫಿಕರ್ ರಹೀಮ್ (ಬಾಂಗ್ಲಾದೇಶ)>> 18 ವರ್ಷ 202 ದಿನಗಳು 274














