ಪುಟ್ಟಣ್ಣನ ಕತ್ತೆ ಸಿನಿಮಾದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಇದರಲ್ಲಿರೋ ವಿಷಯ ಆಳವಾಗಿದೆ. ಕತ್ತೆ ಹಾಲಿನ ಉಪಯೋಗವನ್ನು ಕೂಡ ಇದರಲ್ಲಿ ಹೇಳಲಾಗಿದೆ.
ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಆಯ್ಕೆ
ಆದರೆ, ಈ ಚಿತ್ರದಲ್ಲಿ ಸುಮಾರು ವಿಚಾರ ಇದೆ. ಕತ್ತೆ ಹಿಡಿದುಕೊಂಡು ಬಂದ ಯುವಕನ ಕಟ್ಟಿ ಹಾಕುವ ಸ್ಟೋರಿನೂ ಇದರಲ್ಲಿದೆ. ತನ್ನ ಕತ್ತೆಯನ್ನ ಬಿಟ್ಟು ಪುಟ್ಟಣ್ಣ ಹೋಗಿದ್ದೆಲ್ಲಿಗೆ ಅನ್ನುವ ಪ್ರಶ್ನೆನೂ ಇದೆ.
ಈ ಒಂದು ಚಿತ್ರ ರೆಡಿ ಆಗಿದೆ. ಚಿತ್ರೋತ್ಸವಕ್ಕೂ ಆಯ್ಕೆ ಆಗಿದೆ. ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಈ ಚಿತ್ರ ಆಯ್ಕೆ ಆಗಿರೋದು ಹೆಮ್ಮೆಯ ವಿಷಯವೇ ಆಗಿದೆ.
ಈ ಚಿತ್ರ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. 2027 ಫೆಬ್ರವರಿ ತಿಂಗಳಲ್ಲಿಯೇ ಇದನ್ನ ರಿಲೀಸ್ ಮಾಡ್ಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ. ಅಂದ್ಹಾಗೆ ಈ ಚಿತ್ರ ಡೈರೆಕ್ಟರ್ ಯಾರು? ಕಲಾವಿದರ ವಿವರ ಏನು ಅನ್ನೋದಕ್ಕೆ ಒಂದಷ್ಟು ಮಾಹಿತಿ ಮುಂದೆ ಇದೆ ಓದಿ.
ಪುಟ್ಟಣ್ಣನ ಕತ್ತೆ ಕನ್ನಡದ ವಿಶೇಷ ಸಿನಿಮಾ
ಈ ಚಿತ್ರವನ್ನ ಸಿಂಕ್ ಸೌಂಡ್ ಅಲ್ಲಿಯೇ ಮಾಡಿದ್ದಾರೆ. ಅಂದ್ರೆ ಪಾತ್ರಧಾರಿಗಳು ಡಬ್ಬಿಂಗ್ ಏನೂ ಮಾಡಿಲ್ಲ. ಬದಲಾಗಿ ಚಿತ್ರೀಕಣದ ವೇಳೆ ಏನು ಡೈಲಾಗ್ ಹೇಳಿದ್ದಾರೋ ಅದೇ ಡೈಲಾಗ್ ಇದೆ. ಹಾಗಾಗಿಯೇ ಇದಕ್ಕೆ ಮತ್ತಷ್ಟು ಸಹಜತೆ ಮತ್ತು ನೈಜತೆ ಬಂದಿದೆ.
‘ಪುಟ್ಟಣ್ಣನ ಕತ್ತೆ’ ದೊಡ್ಡ ಬಜೆಟ್‌ನ ಚಿತ್ರವೇನು ಅಲ್ಲ. ಚಿಕ್ಕ ಬಜೆಟ್ ಅಲ್ಲಿಯೇ ಇದನ್ನ ತೆಗೆದಿದ್ದಾರೆ. ಹೊಸ ಕಲಾವಿದರೇ ಈ ಚಿತ್ರದಲ್ಲಿದ್ದಾರೆ.
ಈ ಚಿತ್ರದಲ್ಲಿ ಕತ್ತೆ ಕತೆ ಮಾತ್ರ ಇಲ್ಲ. ಕತ್ತೆಯ ಸುತ್ತ ಸುಮಾರು ವಿಚಾರಗಳಿವೆ. ಬದುಕಿನ ಸತ್ಯಗಳೂ ಇವೆ. ಕೊನೆಯಲ್ಲಿ ಪುಟ್ಟಣ್ಣನ ಅಸಲಿ ಚಿತ್ರಣವೂ ತೆರೆದುಕೊಳ್ಳುತ್ತದೆ.
ಡೈರೆಕ್ಟರ್ ಸಿದ್ದು ಪೂರ್ಣಚಂದ್ರ ಹೇಳುವುದೇನು
ಸಾಕು ಮಗಳು ಕೊಡುವ ಸಂದೇಶ ಹೃದಯದ ಆಳಕ್ಕೂ ಇಳಿಯುತ್ತದೆ. ಆ ರೀತಿಯ ಈ ಚಿತ್ರ ಮುಂದಿನ ವರ್ಷ ತೆರೆ ಕಾಣುತ್ತಿದೆ. ಅದೆಷ್ಟು ಥಿಯೇಟರ್‌ಗಳಲ್ಲಿ ಇದು ಬಿಡುಗಡೆ ಆಗುತ್ತದೆ ಅನ್ನೋದು ಸದ್ಯದ ಕುತೂಹಲವು ಆಗಿದೆ.
ನಮ್ಮ ಚಿತ್ರ ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆ ಆಗಿದೆ. ಇತ್ತೀಚಿಗೆ ರಿಷಬ್ ಶೆಟ್ರು ಹೋಗಿದ್ದ ಅದೇ ಫಿಲ್ಮ್ ಫೆಸ್ಟಿವಲ್ ಇದಾಗಿದೆ.
ಇಲ್ಲಿ ನಮ್ಮ ಚಿತ್ರ ಆಯ್ಕೆ ಆಗಿದೆ ಅನ್ನೋದು ತುಂಬಾನೆ ಹೆಮ್ಮೆ ವಿಷಯವೇ ಆಗಿದೆ. ಸೆಪ್ಟೆಂಬರ್-15 ರ ನಂತರವೇ ನಮ್ಮ ಚಿತ್ರ ಪ್ರದರ್ಶನ ಆಗುತ್ತದೆ. ನಮ್ಮದು ಚಿಕ್ಕ ಬಜೆಟ್‌ನ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಿಂಕ್ ಸೌಂಡ್ ಬಳಕೆ ಮಾಡಿದ್ದೇವೆ. ಕಲಾವಿದರೆಲ್ಲ ಹೊಸಬರೇ ಇದ್ದಾರೆ.
ಕತ್ತೆಯನ್ನ ಇಟ್ಟುಕೊಂಡು ಚಿತ್ರೀಕರಣ ಮಾಡೋದು ಸುಲಭವೇನು ಇರಲಿಲ್ಲ. ಚಿತ್ರದ ಕತೆ ಚೆನ್ನಾಗಿ ಇದೆ. ಚಿತ್ರವು ಚೆನ್ನಾಗಿ ಬಂದಿದೆ. ಇದನ್ನ ನೋಡ್ತಾ ಹೋದ್ರೆ ಮಜಾ ಇದೆ. ಕೊನೆಗೆ ಒಂದು ಸಂದೇಶವೂ ಇದೆ ಅಂತಲೇ ಸಿದ್ದು ಪೂರ್ಣಚಂದ್ರ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.













