Bigg Boss -13: ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ! ಬಿಗ್‌ಬಾಸ್‌ ಮನೆಯಲ್ಲಿ ತಾರಕಕ್ಕೇರಿದ ಸ್ಪರ್ಧಿಗಳ ಜಗಳ | | ACTPnews

bigg boss kannada kavya gowda kavi manja nomination fight


ನೀ ಗಂಡಸೇ ಅಲ್ವೋ

ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಜಗಳ ಆಡುವ ರೇಂಜ್‌ಗೆ ಹೋಗಿದೆ. ಅದೆಷ್ಟು ಅನ್ನೋದನ್ನ ಪ್ರೋಮೊದಲ್ಲಿಯೇ ನೋಡಬಹುದು. ಕ್ಯಾರೆಕ್ಟರ್‌ಲೆಸ್ ಅಂತ ಮಾಡರ್ನ್ ಕವಿ ಮಂಜ್ಯಾ ಹೇಳಿದ್ದಾರೆ.

ನೀ ಗಂಡಸೇ ಅಲ್ವೋ

(ಚಿತ್ರ ಕೃಪೆ: ಕಲರ್ಸ್​ ಕನ್ನಡ)

ಇದರಿಂದ ಕೆರಳಿ ಕೆಂಡವಾದ ಕಾವ್ಯ ಗೌಡ ಮನಸೋಯಿಚ್ಛೆ ಬೈದಾಡಿದ್ದಾರೆ. ಮಂಜ್ಯಾ ಏನು ಸುಮ್ನೆ ಇಲ್ಲ ಬಿಡಿ. ಎದ್ದು ಬಂದು ಎದುರಿಗೆ ನಿಂತು ಮಾತ್ ಆಡ್ತಾನೆ ಹೋಗಿದ್ದಾರೆ.

ಆಗಲೇ ಕಾವ್ಯ ಗೌಡ ಈ ಮಾತು ಹೇಳ್ತಾರೆ. “ನಾನೂ ಹೇಳ್ತೀನಿ ನೀನು ಗಂಡ್ಸೇ ಅಲ್ಲ ಅಂತ” ಹೀಗೆ ಇವರ ಮಾತುಗಳೂ ತಾರಕಕ್ಕೆ ಏರ್ತಾನೇ ಹೋಗಿವೆ ನೋಡಿ.

ಆಸಿಯಾ ಕಣ್ಣೀರು 

ಆಸಿಯಾ ಫಿರ್ದೋಸ್ ಕೂಡ ನಾಮಿನೇಟ್ ಆಟದಲ್ಲಿದ್ದಾರೆ. ಅವಿನಾಶ್ ಇಲ್ಲಿ ನಾಮಿನೇಟ್ ಮಾಡಿದ್ದಾರೆ. ನೀವು ಇನ್ನು ಚಿಕ್ಕ ಮಗು ತರವೇ ಆಡ್ತೀರಾ ಅಂತಲೇ ಹೇಳ್ತಾರೆ.

ಆಗಲೇ ಆಸಿಯಾ ಫಿರ್ದೋಸ್ ಕಣ್ಣುಗಳು ತೇವಗೊಳ್ಳುತ್ತವೆ. ಈ ಕ್ಷಣದ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿದೆ. ಸೌದರ್ಯ ಶೆಟ್ಟಿ ಕೂಡ ನಾಮನೇಷನ್ ಪ್ರಕ್ರಿಯೆಯಲ್ಲಿದ್ದಾರೆ.

ಮಾಡರ್ನ್ ಕವಿ ಮಂಜ್ಯಾ ಇಲ್ಲಿ ನಾಮಿನೇಟ್ ಮಾಡಿದ್ದಾರೆ. ಎಂದಿನಂತೆ ಡೈಲಾಗ್ ಹೊಡೆದಿದ್ದಾರೆ. ಈ ಸಮಯದಲ್ಲಿಯೇ ಕ್ಯಾರೆಕ್ಟರ್‌ಲೆಸ್ ಅಂತಲೇ ಮಂಜ್ಯಾ ಹೇಳ್ತಾರೆ.

bigg boss kannada kavya gowda kavi manja nomination fight

ನೀನು ಒಬ್ಬನೇ ಒಳ್ಳೆಯವನಾ

(ಚಿತ್ರ ಕೃಪೆ: ಮಾಡರ್ನ್ ಕವಿ ಮಂಜ್ಯಾ ಇನ್​ಸ್ಟಾಗ್ರಾಮ್)

ನೀನು ಒಬ್ಬನೇ ಒಳ್ಳೆಯವನಾ

ಕ್ಯಾರೆಕ್ಟರ್‌ಲೆಸ್ ಅಂತ ಮಂಜು ಹೇಳಿದ್ಮೇಲೆ ಕಾವ್ಯ ಗೌಡ ಭಯಂಕರ ಸಿಟ್ಟಾಗುತ್ತಾರೆ. ಹಾಗೆ ಮಂಜ್ಯಾನ ಮುಂದೆ ಬಂದು ನೀನು ಒಬ್ಬೇ ಒಳ್ಳೆಯವನು, ಉಳಿದವರೆಲ್ಲ ಕ್ಯಾರೆಕ್ಟರ್‌ಲೆಸ್ ಆಗಿದ್ದಾರಾ? ಅಂತಲೇ ಕೇಳ್ತಾರೆ.

ಪ್ರೋಮೋ ಲೈನ್ ಮಸ್ತ್ ನೋಡಿ

ಈ ಒಂದು ಪ್ರೋಮೋ ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್‌ ಪೇಜ್ ಅಲ್ಲಿಯೇ ಇದೆ. ಈ ಪ್ರೋಮೋದ ಜೊತೆಗೆ ಒಂದು ಲೈನ್ ಇದೆ. ಅದು ಇಡೀ ಪ್ರೋಮೋದ ಚಿತ್ರಣ ಕಟ್ಟಿಕೊಡುತ್ತದೆ.

ಈ ಸಾಲು ಹೀಗೆ ಇದೆ; “ಇದು nominationಗಾಗಿ war? ಅಥವಾ Character ಬಗ್ಗೆ ನಡೀತೀರೋ ಜಗಳನಾ?” ಈ ರೀತಿಯ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.

ಇನ್ನುಳಿದಂತೆ ದೊಡ್ಮನೆಯಿಂದ ಪ್ರಥಮ ಪ್ರಸಾದ್ ಎಲಿಮಿನೇಟ್ ಆಗಿ ಹೋಗಿದ್ದಾರೆ. ಓಂ ಪ್ರಕಾಶ್ ರಾವ್ ಅನಾರೋಗ್ಯದಿಂದ ಬಿಗ್ ಬಾಸ್ ಆಟವನ್ನ ಅರ್ಧಕ್ಕೆ ಬಿಟ್ಟು ಮನೆಯಿಂದ ಹೊರಗೆ ಹೋಗಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed