Boss Movie: ಬಾಸ್ ಸಿನಿಮಾ ರಿಲೀಸ್ ಮುಂದೆ ಹೋಗಿದ್ಯಾಕೆ? ವಿಜಯಲಕ್ಷ್ಮಿ ದರ್ಶನ್ ಮೀಟ್ ಆಗ್ತೀವಿ ಎಂದ ತನುಷ್ | | ACTPnews

ವಿಜಯಲಕ್ಷ್ಮಿ ದರ್ಶನ್ ಮೀಟ್ ಆಗ್ತೀವಿ ಅಂತ ನಾಯಕ ತನುಷ್ ಹೇಳಿದ್ಯಾಕೆ?


Last Updated:

ಬಾಸ್ ಚಿತ್ರ ಜುಲೈ-17 ರಂದು ಸಂಜೆ ರಿಲೀಸ್ ಆಗುತ್ತದೆ ಅಂತ ಚಿತ್ರ ತಂಡ ಹೇಳಿತ್ತು. ಆದರೆ, ಸಡನ್ ಆಗಿಯೇ ಪ್ರೆಸ್ ಮೀಟ್ ಮಾಡಿದೆ. ಟ್ರೈಲರ್ ಕೂಡ ರಿಲೀಸ್ ಮಾಡಿದೆ. ಹಾಗೆ ರಿಲೀಸ್ ಮುಂದೆ ಹೋಗಿರೋದಕ್ಕೆ ಕಾರಣ ಏನು ಅಂತ ಹೇಳಿದೆ. ರಿಲೀಸ್ ಮುಂಚೆ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಮಾತನಾಡುತ್ತೇವೆ ಅಂತಲೇ ನಾಯಕ-ನಿರ್ಮಾಪಕ ತನುಷ್ ಶಿವಣ್ಣ ಇಲ್ಲಿ ಹೇಳಿರೋದು ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ವಿಜಯಲಕ್ಷ್ಮಿ ದರ್ಶನ್ ಮೀಟ್ ಆಗ್ತೀವಿ ಅಂತ ನಾಯಕ ತನುಷ್ ಹೇಳಿದ್ಯಾಕೆ?
ವಿಜಯಲಕ್ಷ್ಮಿ ದರ್ಶನ್ ಮೀಟ್ ಆಗ್ತೀವಿ ಅಂತ ನಾಯಕ ತನುಷ್ ಹೇಳಿದ್ಯಾಕೆ?

ಬಾಸ್ ಚಿತ್ರ (Boss Movie) ರಿಲೀಸ್‌ಗೆ ಹೈಕೋರ್ಟ್ ಅನುಮತಿ ಕೊಟ್ಟಿದೆ. ಒಂದಷ್ಟು ಕಟ್ ಕೂಡ ಹೇಳಿದೆ. ಎಲ್ಲವನ್ನೂ ಸರಿ ಮಾಡಿಕೊಂಡೇ ಚಿತ್ರ ತಂಡ ಸಿನಿಮಾವನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡ್ತಿದೆ. ಅದಕ್ಕೂ ಮೊದಲು ಚಿತ್ರದ ನಾಯಕ -ನಿರ್ಮಾಪಕ ತನುಷ್ ಶಿವಣ್ಣ (Tanush Shivanna) ಅವರು ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರ ಜೊತೆಗೆ ಮಾತನಾಡುವ ಯೋಚನೆ ಮಾಡಿದ್ದಾರೆ. ಇದನ್ನ ಚಿತ್ರದ ಟ್ರೈಲರ್ ರಿಲೀಸ್ ಪ್ರೆಸ್ ಮೀಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನ ರಿಲೀಸ್ ಮಾಡ್ತೀವಿ ಅಂತ ಡೈರೆಕ್ಟರ್ ಲವಾ (Director Lava) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಬಾಸ್ ಇನ್ನು ರಿಲೀಸ್ ಆಗಿಲ್ಲ..

ಬಾಸ್ ಚಿತ್ರ ರಿಲೀಸ್ ತಡೆಯಬೇಕು ಅಂತ ಹೈಕೋರ್ಟ್‌ಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಈ ಮಲ್ಮನವಿಯನ್ನ ವಜಾಗೊಳಿಸಿದೆ.
why boss movie postponed actor tanush explains plans to meet vijayalakshmi darshan

ಬಾಸ್ ಸಿನಿಮಾ ರಿಲೀಸ್ ಮುಂದೆ ಹೋಗಿದ್ಯಾಕೆ

ಈ ವಿಷಯವನ್ನ ಪಿ.ಆರ್‌.ಓ ಮೂಲಕವೇ ಚಿತ್ರ ತಂಡ ಮಾಧ್ಯಮಕ್ಕೂ ತಿಳಿಸಿದೆ. ಜುಲೈ-17 ರಂದು ಸಂಜೆನೇ ಚಿತ್ರ ರಿಲೀಸ್ ಆಗುತ್ತದೆ ಅಂತಲೂ ಹೇಳಿತ್ತು. ಆದರೆ, ಚಿತ್ರ ತಂಡ ಸಡನ್ ಆಗಿಯೆ ಒಂದು ಪ್ರೆಸ್ ಮೀಟ್ ಮಾಡಿದೆ. ಈ ಪ್ರೆಸ್ ಮೀಟ್ ಅಲ್ಲಿ ಟ್ರೈಲರ್ ಕೂಡ ರಿಲೀಸ್ ಮಾಡಿದೆ.

ಆದಷ್ಟು ಬೇಗ ಚಿತ್ರ ರಿಲೀಸ್

ಚಿತ್ರದ ಡೈರೆಕ್ಟರ್ ಲವಾ ವಿ ಈ ಚಿತ್ರದ ರಿಲೀಸ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ಈ ಚಿತ್ರಕ್ಕೆ ಹೈಕೋರ್ಟ್ ಒಂದಷ್ಟು ಕಟ್ ಮಾಡೊಕೆ ಹೇಳಿದೆ. ಆರ್ಡರ್ ಕಾಪಿ ಇಟ್ಟುಕೊಂಡೇ ಒಂದೊಂದು ಪಾಯಿಂಟ್‌ ಅನ್ನ ನೋಡಿಯೇ ತೆಗೆಯುತ್ತೇವೆ.

ಅದನ್ನ ತೆಗೆದ್ಮೇಲೆ ಈ ಚಿತ್ರವನ್ನ ರಿಲೀಸ್ ಮಾಡುತ್ತೇವೆ. ಜುಲೈ-17 ರಂದು ರಿಲೀಸ್ ಮಾಡುವ ಪ್ಲಾನ್ ಇತ್ತು. 120 ರಿಂದ 130 ಥಿಯೇಟರ್ ಅಲ್ಲಿ ರಿಲೀಸ್ ಕೂಡ ಫಿಕ್ಸ್ ಆಗಿತ್ತು.

ವಕೀಲರ ಸಲಹೆಯಂತೆ

ನಮ್ಮ ವಕೀಲರು ಒಂದು ಸಲಹೆ ಕೊಟ್ಟರು. ಹೈಕೋರ್ಟ್ ಆರ್ಡರ್ ಕಾಪಿ ಬರಲಿ, ಅದು ಬಂದ್ಮೇಲೆ ಎಲ್ಲವನ್ನು ಚೆಕ್ ಮಾಡಿಕೊಂಡು ರಿಲೀಸ್ ಮಾಡಿದ್ರೆ ಒಳ್ಳೆಯದು, ಸುಮ್ನೆ ರಿಲೀಸ್ ಆದ್ಮೇಲೆ ಕಿರಿಕಿರಿ ಯಾಕೆ ಅಂತಲೂ ಹೇಳಿದರು.

why boss movie postponed actor tanush explains plans to meet vijayalakshmi darshan

ಆದಷ್ಟು ಬೇಗ ಚಿತ್ರ ರಿಲೀಸ್

ಈ ಕಾರಣಕ್ಕೇನೆ ನಾವು ನಮ್ಮ ಚಿತ್ರವನ್ನ ಜುಲೈ-17 ರಂದು ರಿಲೀಸ್ ಮಾಡಲಿಲ್ಲ ಅಂತಲೇ ಪ್ರೆಸ್ ಮೀಟ್ ಅಲ್ಲಿಯೇ ಡೈರೆಕ್ಟರ್ ಲವಾ ವಿ ಹೇಳಿಕೊಂಡಿದ್ದಾರೆ.

ತನುಷ್ ಶಿವಣ್ಣ ಏನಂದ್ರು

ಚಿತ್ರದ ನಾಯಕ ಮತ್ತು ನಿರ್ಮಾಪಕ ತನುಷ್ ಶಿವಣ್ಣ ಕೂಡ ಪ್ರೆಸ್ ಮೀಟ್ ಅಲ್ಲಿ ಮಾತನಾಡಿದ್ದಾರೆ. ಈ ಚಿತ್ರದ ರಿಲೀಸ್ ಮುಂಚೇನೆ ಒಮ್ಮೆ ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಮಾತನಾಡುತ್ತೇವೆ.

ಅದಕ್ಕೆನೇ ಒಮ್ಮೆ ಕುಳಿತು ವಿಜಯಲಕ್ಷ್ಮಿ ಅವರ ಜೊತೆಗೆ ಮಾತನಾಡುತ್ತೇವೆ. ಆ ಮೇಲೆನೆ ಚಿತ್ರ ರಿಲೀಸ್ ಮಾಡುತ್ತೇವೆ ಅಂತಲೇ ತನುಷ್ ಶಿವಣ್ಣ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed