Last Updated:
ಐಟಿ ಕಾರಿಡಾರ್ನಲ್ಲಿರುವ ಟೆಕ್ಕಿಗಳು ಇದರಿಂದ ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣದಿಂದಲೇ ಐಟಿ ಉದ್ಯೋಗಿಗಳಿಗೆ ಅನುಕೂಲ ಆಗುವಂತೆ ಬಿಎಂಟಿಸಿ ಮಹತ್ವದ ಕ್ರಮಕೈಗೊಂಡಿದೆ.
ಬೆಂಗಳೂರು (Bengaluru) ಎಂದರೇ ಮೊದಲು ನೆನಪು ಆಗೋದು ಐಟಿ ಕ್ಷೇತ್ರ (IT Industry). ಇಲ್ಲಿ ಸಾವಿರಾರು ಟೆಕ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅಂತರಾಷ್ಟ್ರೀಯ ಕಂಪನಿಗಳು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಲಕ್ಷಾಂತರ ಮಂದಿ ಕೆಲಸ ಮಾಡ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಯೊಂದಿಗೆ (Development and Traffic) ಜನಸಂಖ್ಯೆ, ವಾಹನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರೊಂದಿಗೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಎಂದು ಹೇಳಬಹುದು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಸರ್ಕಾರ ಕೂಡ ಟ್ರಾಫಿಕ್ ನಿಯಂತ್ರಣಕ್ಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಆದರೂ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಅದರಲ್ಲೂ ನಿತ್ಯ ಆಫೀಸ್ಗೆ ತೆರಳುವ ಉದ್ಯೋಗಿಗಳು ಟ್ರಾಫಿಕ್‌ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಇದರೊಂದಿಗೆ ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿತ್ತು. ಸ್ಯಾಟಿಲೈಟ್ ಟೌನ್ ಮೂಲಕ ಈ ಬಸ್ ಸರ್ವೀಸ್ ನಡೆಯುತ್ತಿದ್ದು, ಈ ಎಸಿ ಬಸ್ಗಳ ಮೂಲಕ ಐಟಿ ಉದ್ಯೋಗಿಗಳು ಬೇಗ ಕಚೇರಿಗೆ ತಲುಪಬಹುದಾಗಿದೆ. ಈ ಮಾರ್ಗದಲ್ಲಿ ಐಟಿ ಉದ್ಯೋಗಿಗಳು ಸಂಚಾರ ಮಾಡಿದರೆ ಒಂದು ಗಂಟೆಯೊಳಗೆ ಗಮ್ಯ ಸ್ಥಾನ ತಲುಪಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ಹೇಳ್ತಿದ್ದಾರೆ ಎಂದು ನ್ಯೂಸ್18 ಇಂಗ್ಲೀಷ್ ವರದಿ ಮಾಡಿದೆ.
ಈ ಬಸ್ ಬೆಳಗ್ಗೆ 7 ಗಂಟೆ 45 ನಿಮಿಷಕ್ಕೆ ತುಮಕೂರಿನಲ್ಲಿ ಸಂಚಾರ ಆರಂಭಿಸಿ 9 ಗಂಟೆ 45 ನಿಮಿಷಗಳ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ತಲುಪಲಿದೆ. ಸಂಜೆ ಐಟಿ ಉದ್ಯೋಗಿಗಳು ವಾಪಸ್ ತೆರಳುವ ಸಮಯದ ವೇಳೆ ಮತ್ತೆ ಬಸ್ ಸೇವೆ ಆರಂಭವಾಗಲಿದೆ. ಸಂಜೆ 5 ಗಂಟೆ 45 ನಿಮಿಷಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಆರಂಭವಾಗುವ ಬಸ್, ರಾತ್ರಿ 9 ಗಂಟೆ ವೇಳೆಗೆ ತುಮಕೂರು ತಲುಪಲಿದೆ. ಈ ಬಸ್‌ನಲ್ಲಿ ಒಂದು ಕಡೆ ಪ್ರಯಾಣಕ್ಕೆ 200 ರೂಪಾಯಿ ದರ ನಿಗದಿ ಮಾಡಲಾಗಿದೆ.
ತುಮಕೂರು ಎಲೆಕ್ಟ್ರಾನಿಕ್ ಮಾರ್ಗವಾಗಿ ಸಂಚರಿಸುವ ಈ ಬಸ್, ತುಮಕೂರು, ನೆಲಮಂಗಲ, ಮಾದವರ, ನೈಸ್ ರೋಡ್ನಲ್ಲಿ ಸ್ಟಾಪ್ ಕೊಡುತ್ತದೆ. ಜನರ ಬೇಡಿಕೆಗೆ ಅನುಗುಣವಾಗಿ ಹೊಸ ಎಸಿ ಬಸ್ ಸರ್ವೀಸ್ ಆರಂಭಿಸಲಾಗಿದೆ ಎಂದು ಬಿಎಂಟಿಸಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಜಿಟಿ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ತುಮಕೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ ಪ್ರಯಾಣಿಕರ ದಟ್ಟಣೆ ಪ್ರಸ್ತುತ ತುಂಬಾ ಉತ್ತಮವಾಗಿದೆ ಎಂದು ಅವರು ವಿವರಿಸಿದರು. ಇದಕ್ಕೂ ಮುನ್ನ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಪ್ರಯಾಣಿಸಲು ಹಲವು ಬಸ್ ಗಳನ್ನು ಬದಲಾವಣೆ ಮಾಡಬೇಕಿತ್ತು. ಆದರೆ ಈಗ ಒಂದೇ ಬಸ್ ಮೂಲಕ ಪ್ರಯಾಣ ಮಾಡುವುದರಿಂದ ಸುಮಾರು 45 ನಿಮಿಷದಿಂದ ಒಂದು ಗಂಟೆ ಸಮಯ ಉಳಿಯುತ್ತದೆ. ಈ ಹಿಂದೆ ನೆಲಮಂಗಲ ಮತ್ತು ಹೊಸಕೋಟೆ ನಡುವೆ 80 ಕಿ.ಮೀ ಮಾರ್ಗವನ್ನು ಬಿಎಂಟಿಸಿ ಆರಂಭ ಮಾಡಿತ್ತು.
Bangalore [Bangalore],Bangalore,Karnataka














