Last Updated:
ಮೀರತ್ ನೀಲಿ ಡ್ರಮ್ ಕೇಸ್ಗೆ ಸಂಬಂಧಪಟ್ಟಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ ಮೀರತ್ನಲ್ಲಿ (Meerut) ನಡೆದಿದ್ದ ನೀಲಿ ಡ್ರಮ್ (Blue Drum) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮುಸ್ಕಾನ್ (Muskan) ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಬಳಿಕ ಸಿಮೆಂಟ್ ತುಂಬಿದ್ದ ನೀಲಿ ಬಣ್ಣದ ಡ್ರಮ್ಗೆ ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಳು. ಸದ್ಯ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಮೀರತ್ ಕೋರ್ಟ್ ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಹಾಗೆಯೇ, ಶಿಕ್ಷೆಯ ಪ್ರಕಟಣೆ 14 ದಿನಗಳ ನಂತರ ನಡೆಯಲಿದ್ದು, ಕೋರ್ಟ್ ಅಕ್ಟೋಬರ್ 14 ರ ದಿನಾಂಕವನ್ನು ನಿಗದಿಪಡಿಸಿದೆ.
ಸೌರಭ್ ರಜ್ಪೂತ್ ಹತ್ಯೆ ಪ್ರಕರಣದ ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಅವರ ಬಂಧನದ ನಂತರ ಕೋರ್ಟ್ನಲ್ಲಿ 126 ಬಾರಿ ವಿಚಾರಣೆ ನಡೆಯಿತು. 22 ಜನರು ಈ ಹತ್ಯಾಕಾಂಡದ ಸಾಕ್ಷಿಗಳಾದರು ಮತ್ತು ಸುಮಾರು 19 ತಿಂಗಳ ಸುದೀರ್ಘ ವಿಚಾರಣೆಯ ನಂತರ ಇಬ್ಬರನ್ನೂ ದೋಷಿಗಳೆಂದು ಘೋಷಿಸಲಾಗಿದೆ.
ಸೌರಭ್ ಮತ್ತು ಮುಸ್ಕಾನ್ ಪ್ರೇಮ ವಿವಾಹವಾಗಿದ್ದರು. ಇಬ್ಬರಿಗೂ ಒಂದು ಹೆಣ್ಣು ಮಗುವಿತ್ತು.
- 2025ರ ಫೆಬ್ರವರಿ 24: ಸೌರಭ್ ರಜ್ಪೂತ್ ಲಂಡನ್ನಿಂದ ಮೀರತ್ಗೆ ತಮ್ಮ ಮನೆಗೆ ವಾಪಸ್ ಬಂದಿದ್ದರು.
- ಫೆಬ್ರವರಿ 25: ಮನೆಯಲ್ಲಿಯೇ ಪತ್ನಿ ಮುಸ್ಕಾನ್ ಹುಟ್ಟುಹಬ್ಬ ಆಚರಿಸಲಾಯಿತು.
- ಫೆಬ್ರವರಿ 28: ಮಗಳು ಪಿಯೂ ಹುಟ್ಟುಹಬ್ಬ ಆಚರಿಸಲಾಯಿತು.
- ಮಾರ್ಚ್ 3: ಮುಸ್ಕಾನ್ ಸೌರಭ್ಗೆ ನಿದ್ರೆ ಮಾತ್ರೆ ನೀಡಿದ. ಸಾಹಿಲ್ ಅವರನ್ನು ಕರೆಸಿ ಸೌರಭ್ ಹತ್ಯೆಯನ್ನು ಮಾಡಲಾಯಿತು.
- ಮಾರ್ಚ್ 4: ಮುಸ್ಕಾನ್ ತನ್ನ ಮಗಳನ್ನು ತವರು ಮನೆಯಲ್ಲಿ ಬಿಟ್ಟು, ಪ್ರೇಮಿ ಸಾಹಿಲ್ ಜತೆ ಶಿಮ್ಲಾಕ್ಕೆ ಹೊರಟುಹೋದರು.
- ಮಾರ್ಚ್ 17: ಶಿಮ್ಲಾದಿಂದ ವಾಪಸ್ ಬಂದು ಮುಸ್ಕಾನ್ ತನ್ನ ತವರು ಮನೆಗೆ ತೆರಳಿ ಮನೆಯವರಿಗೆ ಸೌರಭ್ ಬಗ್ಗೆ ತಿಳಿಸಿದರು.
- ಮಾರ್ಚ್ 18: ಪೊಲೀಸರು ಸೌರಭ್ ಅವರ ಮನೆಗೆ ತಲುಪಿದರು. ಅಲ್ಲಿಂದ ಸೌರಭ್ ಅವರ ಶವವಿದ್ದ ನೀಲಿ ಡ್ರಮ್ ಅನ್ನು ವಶಪಡಿಸಿಕೊಳ್ಳಲಾಯಿತು.
- ಮಾರ್ಚ್ 18: ಸಾಹಿಲ್ ಮತ್ತು ಮುಸ್ಕಾನ್ ಅವರನ್ನು ಪೊಲೀಸರು ಬಂಧಿಸಿದರು.














