ಈ ಒಂದು ಮನೆಯಲ್ಲಿ ಮೊದಲು ಸಂಗೀತಾ ಭಟ್ ಕ್ಯಾಪ್ಟನ್ ಆಗಿದ್ದರು. ಆದರೆ, ಈಗ ಕ್ಯಾಪ್ಟನ್ ಯಾರ್ ಆಗ್ತಾರೆ ಅನ್ನುವ ಕುತೂಹಲವು ಇತ್ತು.
ಕಿಚ್ಚನ ಬುದ್ಧಿ ಮಾತು
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಕ್ಯಾಪ್ಟನ್ಸಿ ಟಾಸ್ಕ್ ಕೂಡ ಶುರು ಆಗಿತ್ತು. ಆದರೆ, ಲಿಖಿತ್ ಗೊಂದಿ ಮತ್ತು ಮಾಡರ್ನ್ ಕವಿ ಮಂಜ್ಯಾನ್ ಎಡವಟ್ಟಿನಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ.
ಹೈಜಾಕರ್ ಆಗಿಯೇ ತಾಂಡವ್ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಕ್ಯಾಪ್ಟನ್ ಆಗಿಯೇ ಮನೆ ಒಳಗೆ ಕಾಲಿಟ್ಟಿದ್ದಾರೆ. ಇದರಿಂದ ಎಲ್ಲರಿಗೂ ಶಾಕ್ ಆಗಿದೆ.
ನಾನು ಕಂಪ್ಲೀಟ್ ಚೇಂಜ್ ಆಗಿದ್ದೇನೆ. ನನ್ನಿಂದ ಬೇರೆ ಏನೂ ನಿರೀಕ್ಷೆ ಮಾಡ್ಬೇಡಿ. “ನ್ಯಾಯ ಅಂದ್ರೆ ನ್ಯಾಯ” ಅಷ್ಟೆ ನೋಡಿ. ಬೇರೆ ಏನೂ ಇಲ್ಲ.
ಹೀಗೇನೆ ನೇರವಾಗಿಯೇ ತಾಂಡವ್ ರಾಮ್ ಹೇಳಿದ್ದಾರೆ. ಇದರಿಂದ ಮನೆಯ ಮಂದಿ ಶಾಕ್ ಆಗಿರೋದು ಇದೆ. ಈಗಾಗಲೆ ಹೇಳಿದಂತೆ ಸಂಗೀತಾ ಭಟ್ ಶಾಕ್ ಆಗಿದ್ದಾರೆ.
ಗಗನ್ ಮುಖದಲ್ಲಿ ಆ ರೀತಿಯ ಬದಲಾವಣೆ ಏನು ಕಾಣಲಿಲ್ಲ. ಸಂಗೀತಾ ಭಟ್ ಮುಖದ ಭಾವನೆ ಬದಲಾಗುವುದು ಕಾಣಿಸುತ್ತದೆ.
ತಾಂಡವ್ ರಾಮ್ ಈಗ ಕ್ಯಾಪ್ಟನ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಮನೆಯಲ್ಲಿ ಏನೆಲ್ಲ ಹೊಸ ಹಲ್‌ಚಲ್ ಏಳುತ್ತದೆ ಅನ್ನುವ ಕುತೂಹಲ ಹೆಚ್ಚಾಗಿದೆ.
ನನ್ನಿಂದ ಏನೂ ನಿರೀಕ್ಷೆ……
(ಚಿತ್ರ ಕೃಪೆ: ಕಲರ್ಸ್ ಕನ್ನಡ)
ಕಿಚ್ಚ ಸುದೀಪ್ ಬುದ್ಧಿ ಮಾತು ಹೇಳ್ತಾನೇ ಬಂದಿದ್ದಾರೆ. ಆದರೂ ತಾಂಡವ್ ರಾಮ್ ಅದರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಅದರಿಂದ ಮನೆಯಿಂದ ಹೊರಗೆ ಬಂದಿದ್ದರು.
ಆದರೆ, ಸುದೀಪ್ ಎರಡನೇ ಬಾರಿ ಕಳಿಸುವಾಗ ಕಿವಿ ಹಿಂಡಿ ಹೇಳಿದ್ದಾರೆ. ಈ ಮೊದಲಿನ ತಪ್ಪು ಮಾಡ್ಬೇಡಿ. ಒಳ್ಳೆ ಅವಕಾಶ ಸಿಕ್ಕಿದೆ. ಇದನ್ನ ಹಾಳು ಮಾಡಿಕೊಳ್ಳಬೇಡಿ ಅಂತಲೇ ತಾಂಡವ್ ರಾಮ್ ಅವರಿಗೆ ಹೇಳಿದ್ದಾರೆ. ಹಾಗಾಗಿಯೇ ತಾಂಡವ್ ರಾಮ್ ಇನ್ಮುಂದೆ ಹೇಗೆ ಆಡ್ತಾರೆ ಅನ್ನುವ ಪ್ರಶ್ನೆನೂ ಹುಟ್ಟಿಕೊಂಡಿದೆ.
ತಾಂಡವ್ ರಾಮ್ ಮನೆ ಒಳಗೆ ಹೋಗ್ತಾರೆ ಅನ್ನುವ ಸುದ್ದಿಯನ್ನ ಸುದೀಪ್ ಹೇಳಿದ್ದರು. ಹೇಗೆ ಹೋಗ್ತಾರೆ ಅನ್ನುವ ಬಗ್ಗೆನೂ ಕುತೂಹಲ ಮೂಡಿಸಿದ್ದರು.
ಆ ಕುತೂಹಲ ಇದೀಗ ರಿವೀಲ್ ಆಗಿದೆ. ಕ್ಯಾಪ್ಟನ್ ಆಗಿಯೇ ತಾಂಡವ್ ರಾಮ್ ಮನೆ ಒಳಗೆ ಕಾಲಿಟ್ಟಿದ್ದಾರೆ. ಇದರಿಂದ ಮನೆಯಲ್ಲಿ ಹೊಸ ಉತ್ಸಾಹವೂ ಇದೆ. ಹೊಸ ಕುತೂಹಲ ಕೂಡ ಹುಟ್ಟಿದೆ ಅಂತಲೂ ಹೇಳಬಹುದು.













