IND vs SL: ಶ್ರೀಲಂಕಾ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ! ಪಾಕಿಸ್ತಾನದ ವಿರುದ್ಧ ಚಿನ್ನಕ್ಕಾಗಿ ಫೈಟ್! ಯಾವಾಗ ಪಂದ್ಯ? | ಕ್ರೀಡಾ ಸುದ್ದಿ | ACTPnews

ಏಷ್ಯನ್ ಗೇಮ್ಸ್​​ನಲ್ಲಿ ಫೈನಲ್ ಪ್ರವೇಶಿಸಿದ ಭಾರತ


Last Updated:

ಏಷ್ಯನ್ ಗೇಮ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 124 ರನ್​ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಅಕ್ಟೋಬರ್ 3ರಂದು ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.

 ಏಷ್ಯನ್ ಗೇಮ್ಸ್​​ನಲ್ಲಿ ಫೈನಲ್ ಪ್ರವೇಶಿಸಿದ ಭಾರತ
ಏಷ್ಯನ್ ಗೇಮ್ಸ್​​ನಲ್ಲಿ ಫೈನಲ್ ಪ್ರವೇಶಿಸಿದ ಭಾರತ

ಏಷ್ಯನ್ ಗೇಮ್ಸ್​ನ (Asian Games) ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ (India vs Sri Lanka) ತಂಡವನ್ನು 124 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡವು ಫೈನಲ್‌ (Asian Games final) ಪ್ರವೇಶಿಸಿದೆ. ಚಿನ್ನದ ಪದಕಕ್ಕಾಗಿ ಅಕ್ಟೋಬರ್ 3 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಪ್ರಶಸ್ತಿಗಾಗಿ ನಡೆಯುವ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದೆ. ಹ್ಯಾಂಗ್‌ಝೌನಲ್ಲಿ ನಡೆದಿದ್ದ ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಇದೀಗ ಸತತ 2ನೇ ಪದಕ ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ.

ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಕಿಶನ್ ಅವರ (45 ಎಸೆತ, 8 ಬೌಂಡರಿ, 4 ಸಿಕ್ಸರ್​ ಸಹಿತ 80 ರನ್) ಅಜೇಯ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳ ಸವಾಲಿನ ಮೊತ್ತವನ್ನು ದಾಖಲಿಸಿತ್ತು. ಕಠಿಣವಾಗಿದ್ದ ಈ ವಿಕೆಟ್​​ನಲ್ಲಿ ಇಶಾನ್ ಬಿಟ್ಟರೆ 15ರ ಪೋರ ವೈಭವ್ ಸೂರ್ಯವಂಶಿ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿದರು. ವೈಭವ್ ಕೇವಲ 21 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳೊಂದಿಗೆ 38 ರನ್​ಗಳಿಸಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶ್ರೇಯಸ್​ ಅಯ್ಯರ್ 13 ರನ್​ಗಳಿಸಿ ಇಡೀ ತಂಡದಲ್ಲಿ ಎರಡಂಕಿ ಮೊತ್ತ ದಾಖಲಿಸಿದ 3ನೇ ಬ್ಯಾಟರ್ ಎನಿಸಿಕೊಂಡರು.

ಅಭಿಷೇಕ್ ಶರ್ಮಾ (7), ಸಂಜು ಸ್ಯಾಮ್ಸನ್ (7), ಅಕ್ಷರ್ ಪಟೇಲ್ (8), ತಿಲಕ್ ವರ್ಮಾ (2) ಹಾಗೂ ಶಿವಂ ದುಬೆ (3) ದಯನೀಯ ವೈಫಲ್ಯ ಅನುಭವಿಸಿದರು. ವಾಷಿಂಗ್ಟನ್ ಸುಂದರ್ ಅಜೇಯ 7 ರನ್​ಗಳಿಸಿದರು. ಶ್ರೀಲಂಕಾ ಪರ ತರಿಂದು ರತ್ನಾಯಕೆ 32ಕ್ಕೆ2, ಸಲಸಿತ್ ಕ್ರೋಸ್​ಪುಲ್ಲೆ 28ಕ್ಕೆ2 ವಿಕೆಟ್ ಪಡೆದು ಟಾಪ್ ಬೌಲರ್ ಆದರೆ, ವನುಜ ಸಹಾನ್, ಲಸಿತ್ ಕ್ರೋಸ್​ಪುಲ್ಲೆ ಹಾಗೂ ನುವನಿಡು ಫರ್ನಾಂಡೊ ತಲಾ 1 ವಿಕೆಟ್ ಪಡೆದರು.

45ಕ್ಕೆ ಆಲೌಟ್ ಆದ ಶ್ರೀಲಂಕಾ

170 ರನ್​ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಮೊದಲ ಓವರ್‌ನಲ್ಲಿಯೇ ಯಾವುದೇ ರನ್ ಗಳಿಸದೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಸಿಂಹಳೀಯ ಪಡೆ 9.5 ಓವರ್‌ಗಳಲ್ಲಿ ಕೇವಲ 45 ರನ್‌ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ಭಾರತ ಪರ ಮಾರಕ ಬೌಲಿಂಗ್ ಮಾಡಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಮೂವರು ಆಟಗಾರರು ರನೌಟ್ ಆದರೆ, ಪಾರ್ಟ್ ಟೈಮ್ ಸ್ಪಿನ್ನರ್ ಅಭಿಷೇಕ್ ಶರ್ಮಾ ಸತತ ಎರಡು ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾದ ಇನ್ನಿಂಗ್ಸ್​ಗೆ ಅಂತ್ಯವಾಡಿದರು.

ಕಂಚಿನ ಪದಕಕ್ಕಾಗಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಫೈಟ್

ಶ್ರೀಲಂಕಾ ಈಗ ಕಂಚಿನ ಪದಕಕ್ಕಾಗಿ ಪ್ಲೇ-ಆಫ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಹೋರಾಡಲಿದೆ. ಬಾಂಗ್ಲಾ ತಂಡ ಇಂದು ನಡೆದ ಮೊದಲ ಸೆಮಿಫೈನಲ್​​ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು. ನಾಕೌಟ್ ಸೋತಿರುವ ಈ ಎರಡು ತಂಡಗಳು ಶನಿವಾರ ಕಂಚಿನ ಪದಕಕ್ಕಾಗಿ ಹೋರಾಡಲಿವೆ. ಅದೇ ದಿನ ಫೈನಲ್ ಕೂಡ ನಡೆಯಲಿದೆ.

7 ವಿಕೆಟ್​ಗಳಿಂದ ಗೆದ್ದ ಪಾಕಿಸ್ತಾನ

ಅಕ್ಟೋಬರ್ 1 ರಂದು ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಬಾಂಗ್ಲಾದೇಶವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಏಳು ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಾಹಿಬ್‌ಜಾದಾ ಫರ್ಹಾನ್ ನಾಯಕತ್ವದ ಪಾಕಿಸ್ತಾನ ತಂಡ ಒಂಬತ್ತು ಎಸೆತಗಳನ್ನು ಇರುವಂತೆಯೇ ನಾಲ್ಕು ವಿಕೆಟ್‌ಗಳೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು. ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಯಾವುದೇ ಪದಕಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಾಂಗ್ಲಾದೇಶ ವಿರುದ್ಧ ತಂಡ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಕಂಡಿತ್ತು.

ಚಿನ್ನಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಫೈಟ್

ಶನಿವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಚಿನ್ನದ ಪದಕಕ್ಕಾಗಿ ಫೈಟ್ ಮಾಡಲಿವೆ. ಕಳೆದ ವರ್ಷ ಭಾರತ ಚಾಂಪಿಯನ್ ಆಗಿ ಗೋಲ್ಡ್ ಮೆಡಲ್ ತನ್ನದಾಗಿಸಿಕೊಂಡಿತ್ತು. ಇದೀಗ ಸತತ 2ನೇ ಪದಕಕ್ಕಾಗಿ ಸೆಣಸಾಡಲಿದೆ.

ಆದ್ರೆ ಎರಡೂ ತಂಡಗಳು ಈ ಪಂದ್ಯದ ಬಳಿಕವಾದರೂ, ಕೈಕುಲುಕುತ್ತವೆಯೇ ಎಂಬುದರ ಯಕ್ಷ ಪ್ರಶ್ನೆಯಾಗಿದೆ. ಕಳೆದ ವರ್ಷ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಆಪರೇಷನ್ ಸಿಂಧೂರ್ ನಂತರ ಭಾರತೀಯ ಆಟಗಾರರು ಏಷ್ಯಾ ಕಪ್ ಮತ್ತು ಐಸಿಸಿ ಈವೆಂಟ್‌ಗಳಲ್ಲಿ ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಕೈಕುಲುಕುವುದನ್ನು ನಿಲ್ಲಿಸಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಆಡಳಿತ ಮಂಡಳಿ ಈ ನೀತಿಯನ್ನು ಕಾಯ್ದುಕೊಳ್ಳುತ್ತದೆಯೇ ಅಥವಾ ಪ್ರೋಟೋಕಾಲ್ ಅನ್ನು ಅನುಸರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed