Last Updated:
ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೆಗೆ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಯಾಗ್ರಾಜ್ನಲ್ಲಿ (Prayagraj) ನಡೆದ ಮಹಾಕುಂಭಮೇಳದಲ್ಲಿ (Mahakumbha mela) ಕಾಣಿಸಿಕೊಂಡು ಫೇಮಸ್ ಆಗಿದ್ದ ನಿಲಗಣ್ಣಿನ ಸುಂದರಿ ಮೊನಾಲಿಸಾ (Monalisa) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರುದ್ರಾಕ್ಷಿ ಮಣಿಗಳನ್ನು ಮಾರಿಕೊಂಡಿದ್ದ ಹುಡುಗಿ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ (Social Media) ಸಂಚಲನ ಮೂಡಿಸಿ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೆಗೆ, ಇದೀಗ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.
ಇಂದೋರ್ ಬೆಂಚ್ನ ಮಧ್ಯಪ್ರದೇಶ ಹೈಕೋರ್ಟ್, ಮೊನಾಲಿಸಾ ವಯಸ್ಸಿನ ವಿವಾದಕ್ಕೆ ತೆರೆ ಎಳೆದಿದೆ. ಕಳೆದ ಕೆಲ ತಿಂಗಳ ಹಿಂದೆ ಮೊನಾಲಿಸಾ, ಕೇರಳದಲ್ಲಿ ಫರ್ಹಾನ್ ಎಂಬ ಯುವಕನನ್ನು ವಿವಾಹವಾಗಿ ವಿವಾದಕ್ಕೆ ಸಿಲುಕಿದ್ದಳು. ಮದುವೆಗೆ ಮುನ್ನ ಆಕೆ ಅಪ್ರಾಪ್ತಳಾಗಿದ್ದಳು ಎಂದು ಆರೋಪಿಸಿ ಆಕೆಯ ಪೋಷಕರು ಮಹೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೊನಾಲಿಸಾ ಅವರ ವಯಸ್ಸಿನ ದೃಢೀಕರಣ ಮತ್ತು ಮದುವೆಯ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ಸ್ಥಳೀಯ ನಗರಾಧಿಕಾರಿಗಳು ಕಠಿಣ ಆದೇಶವೊಂದನ್ನು ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಮೊನಾಲಿಸಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ನಗರಾಧಿಕಾರಿಯ ಆದೇಶವನ್ನು ಕಾನೂನುಬಾಹಿರ ಎಂದು ಘೋಷಿಸಿ ರದ್ದುಪಡಿಸಿದೆ. ಮೊನಾಲಿಸಾ ಸದ್ಯ ಮೇಜರ್ (ವಯಸ್ಕ ಒಪ್ಪಿಗೆ) ಆಗಿರುವುದರಿಂದ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.
ಕಳೆದ ಮಾರ್ಚ್ 11, 2026 ರಂದು ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಅವರು ಅರುಮನೂರಿನ ಶ್ರೀ ನೈನಾರ್ ದೇವ್ ದೇವಸ್ಥಾನದಲ್ಲಿ ನಡೆದ ಈ ವಿವಾಹದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನಸಮೂಹ ಭಾಗವಹಿಸಿತ್ತು. ಫರ್ಮಾನ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಅವರ ವಿವಾಹವು ಇಷ್ಟು ಅದ್ಧೂರಿಯಾಗಿ ನಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದನು. ಶಿಕ್ಷಣ ಸಚಿವರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೊನಾಲಿಸಾ ಕೂಡ ಕೇರಳ ಸರ್ಕಾರವನ್ನು ಶ್ಲಾಘಿಸಿದರು. ‘ಎಲ್ಲಾ ಧರ್ಮಗಳು ಸಮಾನ, ನಾನು ಎಲ್ಲಾ ಧರ್ಮಗಳನ್ನು ನಂಬುತ್ತೇನೆ’ ಎಂದು ಮೊನಾಲಿಸಾ ಹೇಳಿದ್ದಳು.
ಈ ಮದುವೆಯು ಕೇರಳ ಮದುವೆ ನಿಯಮಗಳು, 2008 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿತ್ತು. ಈ ಜೋಡಿಯು ವಿವಾಹವಾದ ಬಳಿಕ, ಕಮ್ಯುನಿಟಿ ಹೆಲ್ತ್ ಸೆಂಟರ್ (ಸಮುದಾಯ ಆರೋಗ್ಯ ಕೇಂದ್ರ) ದಾಖಲೆಗಳ ಪ್ರಕಾರ ಮೋನಿಸಾ ಅಪ್ರಾಪ್ತ ವಯಸ್ಸಿನವಳು ಎಂದು ಆಕೆಯ ತಂದೆ ದೂರು ನೀಡಿದ್ದರು. ಸದ್ಯ, ಇಂದೋರ್ ನ್ಯಾಯಾಲಯದ ಮಹತ್ವದ ತೀರ್ಪಿನಿಂದಾಗಿ ಅರ್ಜಿದಾರರ ವಯಸ್ಸಿನ ಗೊಂದಲ ಬಗೆಹರಿದಿದೆ.














