Last Updated:
ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ವಿಭಿನ್ನ ಏವಿಯೇಷನ್ ಥೀಮ್ನಲ್ಲಿ ಸಿದ್ಧವಾಗಿರುವ ದೊಡ್ಮನೆಯ ಝಲಕ್ ಈಗಾಗಲೇ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಗ್ರ್ಯಾಂಡ್ ಪ್ರೀಮಿಯರ್ಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಹೊಸ ಸೀಸನ್ ಅದ್ಧೂರಿಯಾಗಿ ಆರಂಭವಾಗಲಿದ್ದು, ಈ ಬಾರಿ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಪರ್ಧಿಗಳ ಬಗ್ಗೆ ಒಂದೊಂದೇ ಸುಳಿವು ಸಿಗುತ್ತಿರುವ ಬೆನ್ನಲ್ಲೇ, ಈ ಬಾರಿಯ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ವಿಭಿನ್ನ ಏವಿಯೇಷನ್ ಥೀಮ್ನಲ್ಲಿ ಸಿದ್ಧವಾಗಿರುವ ದೊಡ್ಮನೆಯ ಝಲಕ್ ಈಗಾಗಲೇ ಗಮನ ಸೆಳೆಯುತ್ತಿದೆ.














