Last Updated:
ಬಿಗ್ ಬಾಸ್ ನೀಡಿರುವ ಡೈಮಂಡ್ ಹುಡುಕಾಟದ ಟಾಸ್ಕ್ ಮನೆಯಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ಆರಂಭವಾಗಿ ಕೇವಲ ಎರಡು ದಿನಗಳಷ್ಟೇ ಕಳೆದಿವೆ. ಆದರೆ ಮನೆಯೊಳಗಿನ ಸ್ಪರ್ಧಿಗಳ ನಡುವೆ ಈಗಾಗಲೇ ಅಸಲಿ ಆಟದ ಕಾವು ಹೆಚ್ಚಾಗಿದೆ. ಟಾಸ್ಕ್, ಅನುಮಾನ, ಹಾಗೂ ಮಾತಿನ ಚಕಮಕಿ ಮೂಲಕ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ತೋರಿಸಲು ಆರಂಭಿಸಿದ್ದಾರೆ. ಇದರ ನಡುವೆ ಬಿಗ್ ಬಾಸ್ ನೀಡಿರುವ ಡೈಮಂಡ್ ಹುಡುಕಾಟದ ಟಾಸ್ಕ್ ಮನೆಯಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿದೆ.














