Last Updated:
ದುಲೀಪ್ ಟ್ರೋಫಿ ಫೈನಲ್ನಲ್ಲಿ ಪೂರ್ವ ವಲಯದ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. 708 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ವಲಯ 3ನೇ ದಿನದಂದು 242 ರನ್ಗಳಿಸಲಷ್ಟೇ ಶಕ್ತವಾಗಿ 6 ವಿಕೆಟ್ ಕಳೆದುಕೊಂಡಿದೆ.
ಇಶಾನ್ ಕಿಶನ್ (Ishan Kishan) ನೇತೃತ್ವದ ಪೂರ್ವ ವಲಯ, 2026ರ ದುಲೀಪ್ ಟ್ರೋಫಿ ಫೈನಲ್ನಲ್ಲಿ (Duleep Trophy) ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 708 ರನ್ಗಳ ಬೃಹತ್ ಮೊತ್ತವನ್ನು ದಾಖಲಿಸಿದ ನಂತರ, ಪೂರ್ವ ವಲಯ ತಂಡ ಬೌಲಿಂಗ್ನಲ್ಲೂ ದಕ್ಷಿಣ ವಲಯದ ಮೇಲೆ ಪ್ರಾಬಲ್ಯ ಸಾಧಿಸಿತು. ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3ನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ 6 ವಿಕೆಟ್ ಕಳೆದುಕೊಂಡು 242 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.














