Bigg Boss: ‘ಬಿಗ್ ಬಾಸ್’ ಹೋಸ್ಟ್ ಮಾಡ್ತಾರೆ ಖ್ಯಾತ ಕ್ರಿಕೆಟಿಗ! ಪ್ರೋಮೋ ನೋಡಿ ಫ್ಯಾನ್ಸ್ ಫಿದಾ | | ACTPnews

ಬಿಗ್ ಬಾಸ್​


Last Updated:

Bigg Boss: ಬೆಂಗಾಲಿ ಪ್ರೇಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಒಂದು ದಶಕದ ವಿರಾಮದ ಬಳಿಕ ಬಿಗ್ ಬಾಸ್ ಬಾಂಗ್ಲಾ (Bigg Boss Bangla) ತನ್ನ ಮೂರನೇ ಸೀಸನ್ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದೆ.

ಬಿಗ್ ಬಾಸ್​
ಬಿಗ್ ಬಾಸ್​

ಭಾರತದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರಸಾರವಾಗಿರುವ ಈ ಕಾರ್ಯಕ್ರಮ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿದೆ. ಇದೀಗ ಬೆಂಗಾಲಿ ಪ್ರೇಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಒಂದು ದಶಕದ ವಿರಾಮದ ಬಳಿಕ ಬಿಗ್ ಬಾಸ್ ಬಾಂಗ್ಲಾ (Bigg Boss Bangla) ತನ್ನ ಮೂರನೇ ಸೀಸನ್ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದೆ. ವಿಶೇಷವೆಂದರೆ, ಈ ಬಾರಿ ಶೋನ ನಿರೂಪಕರಾಗಿ ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ (Sourav Ganguly) ಕಾಣಿಸಿಕೊಳ್ಳುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಬಿಗ್ ಬಾಸ್ ಬಾಂಗ್ಲಾ ಸೀಸನ್ 3 ಕುರಿತು ಸ್ಟಾರ್ ಜಲ್ಶಾ ವಾಹಿನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಅಧಿಕೃತ ಘೋಷಣೆ ಮಾಡಿದೆ. ಶೋನ ಮೊದಲ ಟೀಸರ್ ಮತ್ತು ಪ್ರೋಮೋ ಬಿಡುಗಡೆಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.

ಟೀಸರ್‌ನಲ್ಲಿ ಕಾಣುವಂತೆ ಮೊದಲು ಹುಲಿಯ ಎಂಟ್ರಿ ಮತ್ತು ಅದ್ಧೂರಿ ಸೆಟ್‌ಗಳ ನಡುವೆ ಸೌರವ್ ಗಂಗೂಲಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೌರವ್ ಅವರ ಖದರ್ ಲುಕ್ ಮತ್ತು ನಿರೂಪಣಾ ಶೈಲಿ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: Actress: ಖ್ಯಾತ ನಟಿಗೆ ಭೀಕರ ಅಪಘಾತ! ಸಿನಿಮಾ ಪ್ರಚಾರಕ್ಕೆ ತೆರಳಿದಾಗ ಆಗಿದ್ದೇನು?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕ್ರೀಡಾ ಲೋಕದಲ್ಲಿ ಮಾತ್ರವಲ್ಲ, ದೂರದರ್ಶನ ಕ್ಷೇತ್ರದಲ್ಲಿಯೂ ಜನಪ್ರಿಯ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಹಲವು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಅವರು ಇದೀಗ ಬಿಗ್ ಬಾಸ್ ಬಾಂಗ್ಲಾ ಮೂಲಕ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ವರದಿಗಳ ಪ್ರಕಾರ, ಈ ರಿಯಾಲಿಟಿ ಶೋ ನಿರೂಪಣೆಗೆ ಸೌರವ್ ಗಂಗೂಲಿ ಸುಮಾರು 125 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನಂತರ ಬಂದ ಎರಡನೇ ಸೀಸನ್ ಅನ್ನು ನಟ ಜೀತ್ ನಿರೂಪಣೆ ಮಾಡಿದ್ದು, ಅದು ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈ ಸೀಸನ್‌ನಲ್ಲಿ ಹಲವು ವಿವಾದಗಳು ಮತ್ತು ಭಾವನಾತ್ಮಕ ಕ್ಷಣಗಳು ಸುದ್ದಿಯಾಗಿದ್ದವು. ಅಂತಿಮವಾಗಿ ನಟ ಜಾಯ್ಜಿತ್ ಬ್ಯಾನರ್ಜಿ ಟ್ರೋಫಿ ಗೆದ್ದಿದ್ದರು. ನಟಿ ರಿ ಸೇನ್‌ಗುಪ್ತಾ ಸೇರಿದಂತೆ ಹಲವು ಜನಪ್ರಿಯ ಸ್ಪರ್ಧಿಗಳು ಭಾಗವಹಿಸಿದ್ದರಿಂದ ಆ ಸೀಸನ್ ವಿಶೇಷ ಗಮನ ಸೆಳೆದಿತ್ತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports