India Vs Pakistan: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ಆಘಾತ! ತಪ್ಪು ಮಾಡ್ಬಿಟ್ರಾ ಟೀಂ ಇಂಡಿಯಾ ಕ್ಯಾಪ್ಟನ್? | | ACTPnews

ಭಾರತ vs ಪಾಕ್​


Last Updated:

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಇಂಗ್ಲೇಡ್ನ ಬರ್ಮಿಂಗ್ಹ್ಯಾಮ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.

ಭಾರತ vs ಪಾಕ್​
ಭಾರತ vs ಪಾಕ್​

ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ (India Women’s Cricket) ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧ ಕಣಕ್ಕಿಳಿದಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (ICC Women’s T20 World Cup) ಭಾರತ ತಂಡ ಪಾಕಿಸ್ತಾನವನ್ನು ಎದುರಿಸುತ್ತಿದ್ದು. ಟಾಸ್ ಗೆದ್ದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲು ಬ್ಯಾಟಿಂಗ್ (Batting) ಆಯ್ಕೆ ಮಾಡಿಕೊಂಡಿದೆ. ಆದ್ರೆ, ಪಂದ್ಯದ ಆರಂಭದಲ್ಲೇ ಭಾರತಕ್ಕೆ ಆಘಾತ ಉಂಟಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ ಇಂಗ್ಲೇಡ್​ನ ಬರ್ಮಿಂಗ್ಹ್ಯಾಮ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮೊದಲ ಓವರ್‌ನಲ್ಲಿಯೇ ಭಾರತಕ್ಕೆ ಹಿನ್ನಡೆಯಾಗಿದೆ. ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭರ್ಜರಿ ಓಪನಿಂಗ್​ ನೀಡಿದ ಶೆಫಾಲಿ ವರ್ಮಾ, ಅದೇ ಓವರ್​ನ ಐದನೇ ಎಸೆತದಲ್ಲಿ ಔಟ್​ ಆದ್ರು. ಈ ಮೂಲಕ ಭಾರತ ಆರಂಭದಲ್ಲೇ ಹಿನ್ನೆಡೆ ಅನುಭವಿಸಿತು. ಬಳಿಕ ಕ್ರೀಸ್​ಗೆ ಬಂದ ಜೆಮಿಮಾ ರೊಡ್ರಿಗಸ್ ಕೂಡ ಶೆಫಾಲಿ ವರ್ಮಾ ಹಾದಿ ಹಿಡಿದರು. ಏಳು ಎಸೆತಗಳಲ್ಲಿ ಒಂದು ರನ್​ ಗಳಿಸಿ ನಾಲ್ಕನೇ ಓವರ್​ನಲ್ಲಿ ಔಟ್​ ಆದ್ರೂ.
ತಪ್ಪು ಮಾಡ್ಬಿಟ್ರಾ ಟೀಂ ಇಂಡಿಯಾ ಕ್ಯಾಪ್ಟನ್​?

ಸಾಮಾನ್ಯವಾಗಿ ಟಿ20 ಮಾದರಿಯಲ್ಲಿ ಬಹುತೇಕ ತಂಡಗಳು ಟಾಸ್​ ಗೆದ್ದರೇ ಬೌಲಿಂಗ್​​​ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ, ಹೈವೋಲ್ಟೇಜ್​ ಪಂದ್ಯದಲ್ಲಿ ಟಾಸ್​​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​​ ಹರ್ಮನ್​ಪ್ರೀತ್​ ಕೌರ್​, ಅಚ್ಚರಿಯ ನಿರ್ಧಾರ ತೆಗದುಕೊಂಡರು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಡಲು ನಿರ್ಧರಿಸಿದರು.

ಅಲ್ಲದೇ ಬರ್ಮಿಂಗ್ಹ್ಯಾಮ್‌ ಬ್ಯಾಟಿಂಗ್​ ಫ್ರೆಂಡ್ಲಿ ಪಿಚ್​ ಆಗಿದ್ದು, ಬ್ಯಾಟರ್ಸ್​ಗಳಿಗೆ ಉತ್ತಮವಾಗಿ ಆಡಲು ಅನುವು ಮಾಡಿಕೊಡುತ್ತದೆ. ಆದ್ರೆ, ಈ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಟಿ20 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ ಹೆಚ್ಚು ಯಶಸ್ಸನ್ನು ಕಂಡಿವೆ.

ಭಾರತದ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್

ಪಾಕಿಸ್ತಾನದ ಆಡುವ XI: ಮುನೀಬಾ ಅಲಿ (ವಿಕೆಟ್‌ಕೀಪರ್), ಗುಲ್ ಫಿರೋಜಾ, ಆಯೇಶಾ ಜಾಫರ್, ಸಾಯಿರಾ ಜಬೀನ್, ನತಾಲಿಯಾ ಪರ್ವೇಜ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕಿ), ರಮೀಮ್ ಶಮಿಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ತಸ್ಮಿಯಾ ರುಬಾಬ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports