America-Iran Crisis: ಇರಾನ್‌ ಪ್ರತಿದಾಳಿ ಬೆನ್ನಲ್ಲೇ ಟ್ರಂಪ್‌ಗೆ ಮತ್ತೆ ಕದನ ವಿರಾಮದ ನೆನಪು, ಖಡಾಖಂಡಿತವಾಗಿ ತಿರಸ್ಕರಿಸಿದ ಟೆಹ್ರಾನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಈ ಸಂಪೂರ್ಣ ಬೆಳವಣಿಗೆಯ ನಡುವೆ, ಇರಾಕ್‌ನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಒಂದೆಡೆ, ಅದು ಅಮೆರಿಕದೊಂದಿಗೆ ಭದ್ರತಾ ಸಹಕಾರವನ್ನು ಕಾಪಾಡಿಕೊಳ್ಳಲು ಬಯಸುತ್ತದೆ, ಮತ್ತೊಂದೆಡೆ, ಇರಾನ್ ಬೆಂಬಲಿತ ಗುಂಪುಗಳು ಅದರ ರಾಜಕೀಯ ಮತ್ತು ಮಿಲಿಟರಿ ರಚನೆಗಳ ಮೇಲೆ ಆಳವಾದ ಹಿಡಿತವನ್ನು ಹೊಂದಿವೆ. ಆದ್ದರಿಂದ ಇರಾಕಿಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.


Last Updated:

Iran USA Diplomatic Tensions: ಇರಾನ್ ಜೊತೆಗಿನ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಇರಾನ್ ಟ್ರಂಪ್ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

ಈ ಸಂಪೂರ್ಣ ಬೆಳವಣಿಗೆಯ ನಡುವೆ, ಇರಾಕ್‌ನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಒಂದೆಡೆ, ಅದು ಅಮೆರಿಕದೊಂದಿಗೆ ಭದ್ರತಾ ಸಹಕಾರವನ್ನು ಕಾಪಾಡಿಕೊಳ್ಳಲು ಬಯಸುತ್ತದೆ, ಮತ್ತೊಂದೆಡೆ, ಇರಾನ್ ಬೆಂಬಲಿತ ಗುಂಪುಗಳು ಅದರ ರಾಜಕೀಯ ಮತ್ತು ಮಿಲಿಟರಿ ರಚನೆಗಳ ಮೇಲೆ ಆಳವಾದ ಹಿಡಿತವನ್ನು ಹೊಂದಿವೆ. ಆದ್ದರಿಂದ ಇರಾಕಿಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಈ ಸಂಪೂರ್ಣ ಬೆಳವಣಿಗೆಯ ನಡುವೆ, ಇರಾಕ್‌ನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಒಂದೆಡೆ, ಅದು ಅಮೆರಿಕದೊಂದಿಗೆ ಭದ್ರತಾ ಸಹಕಾರವನ್ನು ಕಾಪಾಡಿಕೊಳ್ಳಲು ಬಯಸುತ್ತದೆ, ಮತ್ತೊಂದೆಡೆ, ಇರಾನ್ ಬೆಂಬಲಿತ ಗುಂಪುಗಳು ಅದರ ರಾಜಕೀಯ ಮತ್ತು ಮಿಲಿಟರಿ ರಚನೆಗಳ ಮೇಲೆ ಆಳವಾದ ಹಿಡಿತವನ್ನು ಹೊಂದಿವೆ. ಆದ್ದರಿಂದ ಇರಾಕಿಗೆ ಇದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ವಾಷಿಂಗ್ಟನ್: ಕೆಲ ದಿನಗಳ ಕಾಲ ಸ್ವಲ್ಪ ತಣ್ಣಗಾಗಿದ್ದ ಇರಾನ್ ಮತ್ತು ಅಮೆರಿಕಾ (America-Iran Crisis) ನಡುವಿನ ಯುದ್ಧಕ್ಕೆ ಟ್ರಂಪ್ ಮತ್ತೆ ತುಪ್ಪ ಸುರಿದಿದ್ದರು. ಇರಾನ್ ಮೇಲೆ ಪುನಃ ದಾಳಿ ಮಾಡಿ ಟೆಹ್ರಾನ್ (Tehran) ಕೆಂಗಣ್ಣಿಗೆ ಗುರಿಯಾಗಿದ್ದರು. ಟ್ರಂಪ್ ಹುಚ್ಚಾಟಕ್ಕೆ ತಕ್ಕ ಉತ್ತರ ನೀಡಿದ ಇರಾನ್‌ ಅಮೆರಿಕಾದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇರಾನ್ ದಾಳಿ ಮಾಡ್ತಿದ್ದಂತೆ ಟ್ರಂಪ್‌ಗೆ ಮತ್ತೆ ಕದನ ವಿರಾಮದ (Ceasefire) ನೆನಪಾಗಿದೆ.

ಮತ್ತೆ ಶಾಂತಿ ಒಪ್ಪಂದದ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ‘ಈ ವಾರಾಂತ್ಯದಲ್ಲಿ ಅಮೆರಿಕ ಮತ್ತು ಇರಾನ್ ಯುರೋಪ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ’ ಗುರುವಾರ ಘೋಷಿಸಿದ್ದಾರೆ, ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಾಷಿಂಗ್ಟನ್ ಅನ್ನು ಪ್ರತಿನಿಧಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ, ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಿರ್ಣಾಯಕ ಜಲಮಾರ್ಗವನ್ನು ತೆರೆಯಲಾಗುವುದು ಎಂದು ಟ್ರಂಪ್ ಹೇಳಿದ್ದು, ಇರಾನ್ ನಮ್ಮಿಂದ ‘ಹೊಡೆತ’ ಎದುರಿಸಿದ ಕಾರಣ ಮಾತ್ರ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿತು ಎಂದು ಹೇಳಿದರು. ಅಸಲಿಗೆ ಇರಾನ್ ಅಮೆರಿಕಾ ವಿರುದ್ಧ ಪ್ರತಿದಾಳಿ ನಡೆಸಿದ ನಂತರ ಟ್ರಂಪ್‌ಗೆ ಕದನ ವಿರಾಮದ ನೆನಪಾಗಿದೆ ಅನ್ನೋದು ಗಮನಾರ್ಹ. ಯಾಕೆಂದರೆ ಟ್ರಂಪ್ ಪ್ರಸ್ತಾಪವನ್ನು ಇರಾನ್ ಖಡಾಖಂಡಿತವಾಗಿ ತಿರಸ್ಕರಿಸಿದೆ.

ಇರಾನ್ ಜೊತೆಗಿನ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಇರಾನ್ ಟ್ರಂಪ್ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಾಘೈ ಅವರು, ಉಭಯ ದೇಶಗಳ ನಡುವೆ ಯಾವುದೇ ಅಂತಿಮ ಒಪ್ಪಂದಕ್ಕೆ ಬಂದಿಲ್ಲ ಮತ್ತು ಅಂತಹ ವರದಿಗಳು ಕೇವಲ ಊಹಾಪೋಹಗಳಾಗಿವೆ ಎಂದು ಹೇಳಿದ್ದಾರೆ. ಭಾರತೀಯ ವಾಣಿಜ್ಯ ಹಡಗುಗಳ ಮೇಲಿನ ಇತ್ತೀಚಿನ ಅಮೆರಿಕದ ದಾಳಿಯನ್ನು ಅವರು ಖಂಡಿಸಿದ್ದು, ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.

ಇರಾನಿನ ಮಾಧ್ಯಮಗಳು ಸಹ ಆ ವರದಿಗಳನ್ನು ನಿರಾಕರಿಸಿದೆ. ಕಳೆದ ಎರಡು ತಿಂಗಳಲ್ಲಿ ಅಮೆರಿಕ ಅಧ್ಯಕ್ಷರು ಶಾಂತಿ ಒಪ್ಪಂದದ ಬಗ್ಗೆ ಕನಿಷ್ಠ 38 ಬಾರಿ ಹೇಳಿಕೊಂಡಿದ್ದಾರೆ ಎಂದು ಹೇಳಿ ವ್ಯಂಗ್ಯವಾಡಿವೆ. ‘ಸಂಭಾವ್ಯ ತಿಳುವಳಿಕೆಯ ವಿಷಯವನ್ನು ಇರಾನ್ ಪ್ರಕಟಿಸುವವರೆಗೆ, ಈ ವಿಷಯದ ಕುರಿತು ಟ್ರಂಪ್‌ನಿಂದ ಬರುವ ಯಾವುದೇ ಸುದ್ದಿಯನ್ನು ಅವರ ಹಿಂದಿನ ಸಂದೇಶದಂತೆಯೇ ಪರಿಗಣಿಸಬೇಕು’ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಎಚ್ಚರಿಸಿದೆ.

ಇದನ್ನೂ ಓದಿ: Vaibhav Sooryavanshi: 4,4,4,4,4,4,4,4,4! 50 ಓವರ್‌ಗಳ ಪಂದ್ಯದಲ್ಲೂ T20 ಶೈಲಿಯಲ್ಲಿ ವೈಭವ್ ಬ್ಯಾಟಿಂಗ್! ಟೀಂ ಇಂಡಿಯಾ ಜೆರ್ಸಿಯಲ್ಲಿ ಮತ್ತದೇ ತಪ್ಪು ಮಾಡಿದ ಸೂರ್ಯವಂಶಿ

ಕಳೆದ ಫೆಬ್ರವರಿ 28 ರಂದು ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾಯಿತು. ಅಂದಿನಿಂದ, ಎರಡೂ ಕಡೆಯವರು ಶಾಂತಿ ಒಪ್ಪಂದಕ್ಕೆ ಪ್ರಯತ್ನಗಳನ್ನು ಮಾಡಿದ್ದಾರೆ, ಆದರೆ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಹಾರ್ಮುಜ್ ನಿಯಂತ್ರಣವು ನಿರಂತರ ವಿವಾದಾತ್ಮಕ ವಿಷಯವಾಗಿಯೇ ಉಳಿದಿದೆ. ಇರಾನ್ ಹಾರ್ಮುಜ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಬಯಸುತ್ತದೆ ಮತ್ತು ತನ್ನ ಪರಮಾಣು ಕಾರ್ಯಕ್ರಮವು ನಾಗರಿಕ ಬಳಕೆಗಾಗಿ ಎಂದು ಸಮರ್ಥಿಸಿಕೊಂಡಿದೆ.

ಆದರೆ, ಅಮೆರಿಕ, ಇಸ್ರೇಲ್ ಜೊತೆಗೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಬಯಸುತ್ತದೆ, ಟೆಹ್ರಾನ್ ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed