IND vs AFG: ಭಾರತದ ವಿರುದ್ಧದ ಸೋಲಿಗೆ ನಾನೇ ಕಾರಣ! ಅಚ್ಚರಿ ಹೇಳಿಕೆ ನೀಡಿದ ಅಫ್ಘಾನಿಸ್ತಾನ ನಾಯಕ | ಕ್ರೀಡಾ ಸುದ್ದಿ | ACTPnews

ಹಶ್ಮತುಲ್ಲಾ ಶಾಹಿದಿ


Last Updated:

ತಂಡವು ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲೇ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲಿಗೆ ತಮ್ಮಿಂದಲೇ ತಪ್ಪುಗಳು ಆರಂಭವಾದವು ಎಂದು ಒಪ್ಪಿಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದ ಗೆಲುವಿನೊಂದಿಗೆ, ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಹಶ್ಮತುಲ್ಲಾ ಶಾಹಿದಿ
ಹಶ್ಮತುಲ್ಲಾ ಶಾಹಿದಿ

ಶನಿವಾರ ಧರ್ಮಶಾಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ (India vs Afghanistan) ತಂಡ 7 ವಿಕೆಟ್​​​ಗಳ ಸುಲಭ ಜಯ ಸಾಧಿಸಿತು. ಆದರೆ ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ 48 ಎಸೆತಗಳಲ್ಲಿ ಶತಕ ಸಿಡಿಸಿದ ಹೊರತಾಗಿಯೂ ಅಫ್ಘಾನಿಸ್ತಾನ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ತಮ್ಮನ್ನೂ ಸೇರಿ ತಂಡದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂದು ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ಹೇಳಿದ್ದಾರೆ. ತಂಡವು ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲೇ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲಿಗೆ ತಮ್ಮಿಂದಲೇ ತಪ್ಪುಗಳು ಆರಂಭವಾದವು ಎಂದು ಒಪ್ಪಿಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದ ಗೆಲುವಿನೊಂದಿಗೆ, ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನನ್ನಿಂದಲೇ ತಪ್ಪುಗಳ ಆರಂಭ

ಪಂದ್ಯದ ನಂತರದ ಸೋಲಿನ ಬಗ್ಗೆ ಮಾತನಾಡಿದ, ಹಶ್ಮತುಲ್ಲಾ ಸೋಲನ್ನು ಕಲಿಕೆಯ ಅನುಭವ ಎಂದು ತಿಳಿಸಿದರು. ” ಇದು ನಮಗೆ ತುಂಬಾ ಕಠಿಣ ಪಂದ್ಯವಾಗಿತ್ತು. ನಮ್ಮ ಸೋಲಿಗೆ ಪ್ರಮುಖ ಕಾರಣ ಸತತವಾಗಿ ವಿಕೆಟ್ ಕಳೆದುಕೊಂಡಿದ್ದು. ರಹಮಾನಲ್ಲಾ ಗುರ್ಬಾಜ್ ಬ್ಯಾಟಿಂಗ್ ಸ್ಫೋಟಕವಾಗಿ ಮಾಡುತ್ತಿದ್ದಾಗ, 220-230 ಸ್ಕೋರ್ ಉತ್ತಮ ಗುರಿ ಎಂದು ನಾನು ಭಾವಿಸಿದ್ದೆ. ಆದರೆ, ನಾವು ವೇಗವಾಗಿ ವಿಕೆಟ್ ಕಳೆದುಕೊಂಡೆವು, ನಾವು ಸುಮಾರು 30 ರನ್‌ಗಳ ಕೊರತೆ ಅನುಭವಿಸಿದೆವು ಎಂದು ತಿಳಿಸಿದ್ದಾರೆ.

ಆ ಕಡೆಯ ಬೌಂಡರಿ ಸ್ವಲ್ಪ ಕಡಿಮೆ ಇದ್ದ ಕಾರಣ ಎಡಗೈ ಸ್ಪಿನ್ನರ್‌ನನ್ನು ಗುರಿಯಾಗಿಸಲು ಬೌಂಡರಿ ಪಡೆಯಲು ನಾನು ಯೋಜಿಸಿದ್ದೆ. ಮಿಸ್ ಹಿಟ್ ಆಗಿ ಕ್ಯಾಚ್ ಆಯಿತು. ಆದರೆ ಗುರ್ಬಾಜ್ ಅದ್ಭುತವಾಗಿ ಆಡಿದರು, ಆದರೆ ನಾವು ಕೆಲವು ತಪ್ಪುಗಳನ್ನು ಮಾಡಿದೆವು. ಆ ತಪ್ಪುಗಳು ನನ್ನಿಂದಲೇ ಪ್ರಾರಂಭವಾದವು, ಮತ್ತು ಇತರ ಬ್ಯಾಟ್ಸ್‌ಮನ್‌ಗಳು ಅದನ್ನೇ ಅನುಸರಿಸಿದರು. ಅದಕ್ಕಾಗಿಯೇ ನಾವು 30 ರನ್ಸ್ ಹಿನ್ನಡೆ ಅನುಭವಿಸಿದೆವು.

ಅಲ್ಲದೆ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ನಮ್ಮ ಬೌಲಿಂಗ್‌ನಲ್ಲಿಯೂ ಶಿಸ್ತಿನ ಕೊರತೆ ಇತ್ತು. ಈ ಸೋಲಿನಿಂದ ನಾವು ಪಾಠ ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ” ಎಂದು ಶಾಹಿದಿ ಹೇಳಿದರು.

ಗುರ್ಬಾಜ್ ಶತಕ ವ್ಯರ್ಥವಾಯಿತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಆಯಿತು. ರಹಮಾನಲ್ಲಾ ಗುರ್ಬಾಜ್ ಶತಕ (51 ಎಸೆತಗಳಲ್ಲಿ 8 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದಂತೆ 102) ಬಾರಿಸಿದರು, ನಾಯಕ ಹಶ್ಮತುಲ್ಲಾ ಶಾಹಿದಿ (27) ಮತ್ತು ಅಜ್ಮತುಲ್ಲಾ ಒಮರ್ಜಾಯ್ (26) ಮಾತ್ರ ಎರಡಂಕಿಯ ಸ್ಕೋರ್‌ಗಳನ್ನು ತಲುಪಿದರು. ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಸ್ಕೋರ್‌ಗಳಿಗೆ ಸೀಮಿತರಾದರು. ಭಾರತೀಯ ಬೌಲರ್‌ಗಳಲ್ಲಿ, ಗುರ್ನೂರ್ ಬ್ರಾರ್ (3/27) ಮತ್ತು ಹರ್ಷ್ ದುಬೆ (3/47) ತಲಾ ಮೂರು ವಿಕೆಟ್‌ಗಳನ್ನು ಪಡೆದರು, ಆದರೆ ಅರ್ಶ್ದೀಪ್ ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ (2/31) ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಸುಲಭ ಗೆಲುವು ತಂದುಕೊಟ್ಟ ಗಿಲ್-ರಾಹುಲ್

ನಂತರ ಭಾರತ ತಂಡ 22.5 ಓವರ್‌ಗಳಲ್ಲಿ 3 ವಿಕೆಟ್‌ಗೆ 195 ರನ್ ಗಳಿಸಿ ಗೆಲುವು ಸಾಧಿಸಿತು. ನಾಯಕ ಶುಭ್​ಮನ್ ಗಿಲ್ ಅಜೇಯ ಅರ್ಧಶತಕ (66 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 84 ನಾಟ್ ಔಟ್), ಇಶಾನ್ ಕಿಶನ್ 22 ಎಸೆತಗಳಲ್ಲಿ 34 ನಾಟ್ ಔಟ್, ಮತ್ತು ಕೆಎಲ್ ರಾಹುಲ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 39 ರನ್ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿ ಗೆಲುವು ತಂದುಕೊಟ್ಟರು. ಅಫ್ಘಾನಿಸ್ತಾನ ಪರ, ಜಿಯಾವುರ್ ರೆಹಮಾನ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed