Last Updated:
ಕರ್ನಾಟಕ KSDC ನರ್ಸ್‌ಗಳಿಗೆ ಉಚಿತ JLTE ಜಪಾನಿ ಭಾಷಾ ತರಬೇತಿ ಘೋಷಣೆ, 6 ತಿಂಗಳ JLPT N5 N4 ಕೋರ್ಸ್, 60 ಸೀಟು, SSW ವೀಸಾ ಮೂಲಕ ಜಪಾನ್ ಉದ್ಯೋಗ ಅವಕಾಶ
ಬೆಂಗಳೂರು: ನರ್ಸಿಂಗ್ ಕ್ಷೇತ್ರದಲ್ಲಿರುವ ದಾದಿಯರಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಒಂದು ಅಪರೂಪದ ಅವಕಾಶ ಕಲ್ಪಿಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕರ್ನಾಟಕ ಸರ್ಕಾರ ಪ್ರಾಯೋಜಕತ್ವದಲ್ಲಿ ದಾದಿಯರಿಗಾಗಿ (Nurses) ಸಂಪೂರ್ಣ ಉಚಿತ ಜಪಾನಿ ಭಾಷಾ ತರಬೇತಿ (JLTE) ಕಾರ್ಯಕ್ರಮ ಆರಂಭಿಸಲಾಗಿದ್ದು, ಮೊದಲ 60 ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಲಭ್ಯ.
6 ತಿಂಗಳ ಅವಧಿಯ ಈ ಕೋರ್ಸ್‌ನಲ್ಲಿ ಜಪಾನಿ ಭಾಷಾ ಪ್ರಾವೀಣ್ಯ ಪರೀಕ್ಷೆ (JLPT) ಯ ಲೆವೆಲ್ N5 ಮತ್ತು N4 ತರಬೇತಿ ನೀಡಲಾಗುತ್ತದೆ. ಪ್ರಮಾಣೀಕೃತ ಅಧ್ಯಾಪಕರಿಂದ ಬೋಧನೆ, ಪ್ರಮಾಣಪತ್ರ ನೀಡಿಕೆ, ವಸತಿ ಸೌಕರ್ಯ ಮತ್ತು ಕೋರ್ಸ್ ಮುಗಿದ ನಂತರ ಉದ್ಯೋಗ ನಿಯೋಜನೆ ಸಹಾಯ ಕೂಡ ಒದಗಿಸಲಾಗುತ್ತದೆ. ANM, GNM, B.Sc Nursing ಅಥವಾ ನರ್ಸಿಂಗ್ ಸಂಬಂಧಿತ ಡಿಪ್ಲೊಮಾ ಅಥವಾ ಡಿಗ್ರಿ ಹೊಂದಿರುವ 18-35 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೋಂದಾಯಿಸಿಕೊಳ್ಳಲು ಈ ಲಿಂಕ್ ಮೂಲಕ ಜಾಯಿನ್ ಆಗಿ
Bangalore [Bangalore],Bangalore,Karnataka













