Mega-158 Movie: ಮೆಗಾಸ್ಟಾರ್ ಮೆಗಾ-158 ಸಿನಿಮಾ ಲಾಂಚ್, ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು | | ACTPnews

ಮೆಗಾಸ್ಟಾರ್ ಮೆಗಾ 158 ಸಿನಿಮಾ ಲಾಂಚ್; ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು!


Last Updated:

ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರ ಲಾಂಚ್ ಆಗಿದೆ. ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ. ಹೈದ್ರಾಬಾದ್ ಅಲ್ಲಿ ನಡೆದ ಈ ಮುಹೂರ್ತ ಕಾರ್ಯಕ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೆಗಾಸ್ಟಾರ್ ಮೆಗಾ 158 ಸಿನಿಮಾ ಲಾಂಚ್; ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು!
ಮೆಗಾಸ್ಟಾರ್ ಮೆಗಾ 158 ಸಿನಿಮಾ ಲಾಂಚ್; ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು!

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಲಾಂಚ್ ಆಗಿದೆ. ಡೈರೆಕ್ಟರ್ ಬಾಬಿ (Director Bobby) ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಹೈದರಾಬಾದ್ ಅಲ್ಲಿ ಮೇ-21 ರಂದು ಬೆಳಗ್ಗೆ 7.30 ಈ ಚಿತ್ರದ ಮುಹೂರ್ತ ಆಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅಭಿನಯದ ಈ ಚಿತ್ರದ ಮೊದಲ ದೃಶ್ಯಕ್ಕೆ ಸಹೋದರ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಕ್ಲಾಪ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪವನ್ ಕಲ್ಯಾಣ್ ಕ್ಲಾಪ್

ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ 71 ನೇ ವಯಸ್ಸಿನಲ್ಲೂ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಸಖತ್ ಫಿಟ್ ಆ್ಯಂಡ್ ಫೈನ್ ಆಗಿರೋ ಚಿರಂಜೀವಿ ಅವರ ಈ ಚಿತ್ರಕ್ಕೆ ಸದ್ಯ ಮೆಗಾ-158 ಅಂತ ಹೆಸರಿಟ್ಟಿದ್ದಾರೆ.
Chiranjeevi mega 158 launched Hyderabad latest updates

ಬಾಬಿ ಡೈರೆಕ್ಷನ್ ಸಿನಿಮಾ

ಇದೇ ತಾತ್ಕಾಲಿಕ ಹೆಸರಿನಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ. ಸಿನಿಮಾದ ಮೊದಲ ದೃಶ್ಯಕ್ಕೆ ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ.

ದೇವರ ಮುಂದೆ ಮೊದಲ ದೃಶ್ಯ

ಈ ಚಿತ್ರದ ಮೊದಲ ದೃಶ್ಯವನ್ನ ದೇವರ ಮುಂದೇನೆ ತೆಗೆಯಲಾಗಿದೆ. ಯಾವುದೇ ಮೇಕ್‌ಅಪ್‌ ಇಲ್ಲದೆ ಚಿರಂಜೀವಿ ದೇವರ ಮುಂದೆ ನಿಂತಿದ್ದರು.

ಆಗಲೇ ಸಹೋದರ ಪವನ್ ಕಲ್ಯಾಣ್ ಕ್ಲಾಪ್ ಮಾಡಿದರು. ಈ ರೀತಿ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರ ಜೀವನದ 158 ನೇ ಚಿತ್ರ ಲಾಂಚ್ ಆಗಿದೆ.

ಒಟ್ಟಿಗೆ ಬಂದ ಸಹೋದರರು

ಈ ಒಂದು ಚಿತ್ರದ ಮುಹೂರ್ತಕ್ಕೆ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಒಟ್ಟಿಗೆ ಬಂದಿದ್ದಾರೆ. ಆದರೆ, ಅದ್ಯಾಕೋ ಪುತ್ರ ರಾಮ್ ಚರಣ್ ಮಿಸ್ ಆಗಿದ್ದಾರೆ.

Chiranjeevi mega 158 launched Hyderabad latest updates

ಪವನ್ ಕಲ್ಯಾಣ್ ಕ್ಲಾಪ್

ಇನ್ನುಳಿದಂತೆ ಚಿತ್ರದ ನಿರ್ಮಾಪಕ ಕೆ.ವಿ. ವೆಂಕಟನಾರಾಯಣ್ ಸೇರಿದಂತೆ ಇನ್ನು ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದರು. ಹೈದರಾಬಾದ್ ಅಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ.

ಬಾಬಿ ಡೈರೆಕ್ಷನ್ ಸಿನಿಮಾ

ಮೆಗಾಸ್ಟಾರ್ ಚಿರಂಜೀವಿ ಮತ್ತು ಡೈರೆಕ್ಟರ್ ಬಾಬಿ ಕೊಲ್ಲಿ ಮತ್ತೊಮ್ಮೆ ಜೋಡಿ ಆಗಿದ್ದಾರೆ. ಈ ಹಿಂದೆ 2023 ರಲ್ಲಿ ವ್ಯಾಲ್ತೇರು ವೀರಯ್ಯ ಅನ್ನುವ ಚಿತ್ರ ಮಾಡಿದ್ದರು. 125 ಕೋಟಿ ಬಜೆಟ್ ಅಲ್ಲಿ ಇದು ರೆಡಿ ಆಗಿತ್ತು. ಬಾಕ್ಸ್ ಆಫೀಸ್ ಅಲ್ಲಿ 236 ಕೋಟಿ ಬಾಚಿಕೊಂಡಿತ್ತು.

ವಿಜಯ್ ಕಾರ್ತಿಕ್ ಕಣ್ಣನ್ ಈ ಚಿತ್ರಕ್ಕೆ ಕ್ಯಾಮರಾರ್ವಕ್ ಮಾಡಿದ್ದಾರೆ. ಪೆದ್ದಿ ಚಿತ್ರದ ಕಲಾ ನಿರ್ದೇಶಕ ಅವಿನಾಶ್ ಕೊಳ್ಳ ಈ ಚಿತ್ರಕ್ಕೆ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ.

ಮೆಗಾಸ್ಟಾರ್ ಮೆಗಾ ವರ್ಕೌಟ್

ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಿತ್ಯವೂ ವರ್ಕೌಟ್ ಮಾಡಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರೋದ್ರಿಂದಲೇ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕಾಗಿ ಜಿಮ್ ಅಲ್ಲಿ ಬೆವರಿಳಿಸಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed