Bengaluru: ದೇಶದ ಅತೀ ದೊಡ್ಡ ರೈಲ್ವೆ ಹಬ್, ಎರಡು ಅಂತಸ್ತುಗಳಲ್ಲಿ ಟ್ರ್ಯಾಕ್; ಯಲಹಂಕ ಪ್ರಾಜೆಕ್ಟ್ ಕಂಪ್ಲೀಟ್ ಡಿಟೇಲ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್!


Last Updated:

ಬೆಂಗಳೂರು ಯಲಹಂಕದಲ್ಲಿ ಇಂಡಿಯನ್ ರೈಲ್ವೇಸ್ 5754 ಕೋಟಿ ವೆಚ್ಚದ ಟು ಲೆವೆಲ್ ಮೆಗಾ ಟರ್ಮಿನಲ್ ನಿರ್ಮಾಣ, 16 ಪ್ಲಾಟ್‌ಫಾರ್ಮ್, ಭವಿಷ್ಯದ ಬೇಡಿಕೆಗೆ 2045ರ ದೃಷ್ಟಿ ಯೋಜನೆ ಇದಾಗಿದೆ.

ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್!
ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್!

ಐಟಿ ನಗರ ಬೆಂಗಳೂರಿನಲ್ಲಿ (Bengaluru) ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ, ಜನದಟ್ಟಣೆ ನಿಭಾಯಿಸಲು ಅನುಕೂಲ ಆಗುವಂತೆ ರೈಲ್ವೆ ಇಲಾಖೆ (Indian Railways) ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ ರೈಲ್ವೆ ಟರ್ಮಿನಲ್ ಅನ್ನು ಯಲಹಂಕದಲ್ಲಿ (Yelahanka) ನಿರ್ಮಾಣ ಮಾಡಲಿದೆ.

ಈ ಹೊಸ ಟರ್ಮಿನಲ್‌ನಲ್ಲಿ ಗ್ರೌಂಡ್​ ಫ್ಲೋರ್​ ನೊಂದಿಗೆ ಮೊದಲ ಅಂತಸ್ತಿನಲ್ಲಿಯೂ ರೈಲ್ವೆ ಟ್ರ್ಯಾಕ್‌ಗಳನ್ನು, ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಭಾರತದಲ್ಲಿ ಇಂತಹ ಟು-ಲೆವೆಲ್ ಪ್ಲಾಟ್‌ಫಾರ್ಮ್ ಹೊಂದಿರುವ ರೈಲ್ವೆ ನಿಲ್ದಾಣ ಮಾಡುತ್ತಿರುವುದು ಇದೇ ಮೊದಲು. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಶನಿವಾರ, ಸೌತ್ ವೆಸ್ಟ್ರನ್ ರೈಲ್ವೆ, ಗ್ರೇಟರ್ ಬೆಂಗಳೂರು ಅಥಾರಿಟಿಯ ಉನ್ನತ ಅಧಿಕಾರಿಗಳೊಂದಿಗೆ ಮೆಗಾ ಪ್ರಾಜೆಕ್ಟ್​ನ ಸಮೀಕ್ಷೆಯನ್ನು ನಿರ್ವಹಿಸಿದ್ದಾರೆ.

ಬರೋಬ್ಬರಿ 16 ಪ್ಲಾಟ್‌ಫಾರ್ಮ್, 5,754 ಕೋಟಿ ಬಜೆಟ್!

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 2 ಲಕ್ಷ ಮಂದಿ ರೈಲ್ವೆ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಈಗಾಗಲೇ ನಿರ್ಮಾಣ ಆಗಿರುವ ರೈಲ್ವೆ ನಿಲ್ದಾಣಗಳನ್ನು ವಿಸ್ತರಣೆ ಮಾಡೋದು ದೊಡ್ಡ ಸಮಸ್ಯೆ ಆಗುತ್ತದೆ. ಇದರಿಂದ ಹೊಸ ಟರ್ಮಿನಲ್ ನಿರ್ಮಿಸೋದು ಇರುವುದು ಏಕೈಕ ಮಾರ್ಗ ಎಂದು ಸೋಮಣ್ಣ ಹೇಳಿದ್ದಾರೆ.

ಈ ಮೆಗಾ ಟರ್ಮಿನಲ್ ಸುಮಾರು 5,754 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ರೈಲ್ವೆ ವೀಲ್ ಫ್ಯಾಕ್ಟರಿ ಸಮೀಪ ಯಲಹಂಕ ಜಂಕ್ಷನ್‌ನಿಂದ ಧರ್ಮಾವರಂಗೆ ತೆರಳುವ ಮಾರ್ಗದಲ್ಲಿ 7.5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಸದ್ಯ ಇರುವ ಯಲಹಂಕ ಸ್ಟೇಷನ್ ಕೂಡ ಇದರಲ್ಲಿ ವಿಲೀನ ಆಗಲಿದೆ. ಹೊಸ ಟರ್ಮಿನಲ್ 16 ಪ್ಲಾಟ್‌ಫಾರ್ಮ್, 18 ಪಿಟ್ ಲೈನ್, 14 ಸ್ಟೆಬ್ಲಿಂಗ್ ಲೈನ್ ನಿರ್ಮಾಣ ಮಾಡಲಾಗುತ್ತದೆ. ಬೆಸ್ಮೆಂಟ್, ಗ್ರೌಂಡ್, ಫಸ್ಟ್, ಸೆಕೆಂಡ್ ಫ್ಲೋರ್‌ಗಳಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಅತ್ಯಾಧುನಿಕ ಲಗ್ಜರಿ ಸೌಲಭ್ಯಗಳನ್ನು ನಿರ್ಮಿಸಲಿದ್ದಾರೆ.

ವಿಮಾನ ನಿಲ್ದಾಣ ಮಾದರಿ ರೈಲ್ವೆ ನಿಲ್ದಾಣ, 2045ರ ಭಾರತಕ್ಕಾಗಿ ಪ್ಲ್ಯಾನ್!

ಈ ವಿಮಾನ ನಿಲ್ದಾಣ ಅತ್ಯಂತ ಸ್ಮಾರ್ಟ್ ಡಿಸೈನ್ ಹೊಂದಿರಲಿದೆ. ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ, ನಿರ್ಗಮಿಸುವವರಿಗೆ ಪ್ರತ್ಯೇಕ ಮಾರ್ಗಗಳು ಇರಲಿದೆ. ಅಲ್ಲದೇ, ಪ್ರಯಾಣಿಕರಿಗೆ 100 ಮೀಟರ್‌ಗಿಂತ ಹೆಚ್ಚು ನಡೆಯುವ ಅಗತ್ಯ ಇಲ್ಲದಂತೆ ಪ್ಲ್ಯಾನ್ ಮಾಡುತ್ತಿದ್ದಾರೆ.

ಸದ್ಯ ಬೆಂಗಳೂರು ವಿಭಾಗದಲ್ಲಿ ದಿನಕ್ಕೆ 300 ರೈಲುಗಳು ಸಂಚಾರ ಮಾಡುತ್ತವೆ. ವರ್ಷದಲ್ಲಿ 12 ಕೋಟಿ ಮಂದಿ ಪ್ರಯಾಣಿಕರು ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೂ ಬೆಂಗಳೂರಿಗೆ ಇನ್ನು 25-30 ರೈಲುಗಳ ಅಗತ್ಯವಿದೆ. 2045ರ ವೇಳೆಗೆ ಈ ಪ್ರಯಾಣಿಕರ ಸಂಖ್ಯೆ 30 ಕೋಟಿಗೆ ಹೆಚ್ಚಾಗುವ ನಿರೀಕ್ಷೆ ಇದೆ. ಆಗ ಕನಿಷ್ಠ 500 ರೈಲುಗಳು ಓಡಾಟ ಮಾಡಬೇಕಾಗುತ್ತದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಟು-ಲೆವೆಲ್ ಪ್ಲಾಟ್‌ಫಾರ್ಮ್ ಪ್ಲ್ಯಾನ್ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಫೈನಲ್ ಲೋಕೇಷನ್ ಸರ್ವೆ ಟೆಂಡರ್‌ಗಳನ್ನು ಮೇ 22ರಂದು ಆರಂಭ ಮಾಡಲಿದೆ.

ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ಬ್ರೇಕ್!

ಇದೇ ಸಂದರ್ಭದಲ್ಲಿಯೇ ಸಚಿವ ಸೋಮಣ್ಣ ಅವರು ಮತ್ತೊಂದು ಪ್ರಮುಖ ಘೋಷಣೆ ಮಾಡಿದ್ದು, ಬೆಂಗಳೂರು ಸುತ್ತಮುತ್ತ 100 ಕಿಲೋ ಮೀಟರ್ ದೂರದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆರವು ಮಾಡಿ, ಅವುಗಳ ಸ್ಥಾನದಲ್ಲಿ ರೋಡ್ ಓವರ್ ಬ್ರಿಡ್ಜ್​, ಅಂಡರ್ ಬ್ರಿಡ್ಜ್​ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: GK: ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್​​​ಫಾರ್ಮ್​ ಯಾವುದು?

ಈಗಾಗಲೇ 46 ಗೇಟ್‌ಗಳ ಬಳಿ ಬ್ರಿಡ್ಜ್ ಕೆಲಸಗಳಿಗೆ ಅನುಮತಿ ಸಿಕ್ಕಿದೆ. ಅಲ್ಲದೇ 24 ಗೇಟ್‌ಗಳಿಗೆ ಡಿಪಿಎಸ್ ಸಿದ್ಧಪಡಿಸಲಾಗುತ್ತಿದೆ. ರಾಮೋಹಳ್ಳಿ ಗೇಟ್ ಬಳಿಕ ಅಂಡರ್ ಬ್ರಿಡ್ಜ್ ಕೆಲಸಗಳು ಜೂನ್ 30ರ ವೇಳೆಗೆ ಪೂರ್ಣಗೊಳ್ಳಲಿದೆ. ಭೀಮಸಂದ್ರ ಬ್ರಿಡ್ಜ್ ಜೂನ್‌ನಲ್ಲಿ, ಬಿಳಿಪಾಳ್ಯ ಬ್ರಿಡ್ಜ್ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚೆಗೆ ಘೋಷಣೆ ಮಾಡಿರುವ ಬೆಂಗಳೂರು-ಮುಂಬೈ ಬೈ-ವೀಕ್ಲಿ ರೈಲಿನ ವೇಗ ಕಡಿಮೆ ಇದೆ ಅಂತ ಪ್ರಯಾಣಿಕರಿಂದ ದೂರುಗಳು ಬಂದಿದೆ, ಈ ರೈಲನ್ನು ಹಂತ ಹಂತವಾಗಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ ಬದಲಾವಣೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed