Peddi Shivanna: ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್! ಎದುರಾಳಿಗೆ ಶಾಕ್ ಮೇಲೆ ಶಾಕ್! | | ACTPnews

ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್; ಎದುರಾಳಿ ಶಾಕ್ ಮೇಲೆ ಶಾಕ್!


Last Updated:

ಪೆದ್ದಿ ಚಿತ್ರದ ಶಿವಣ್ಣ ಡೈಲಾಗ್ ರಿವೀಲ್ ಆಗಿದೆ. ಗೆಲ್ಲೋದು ಅಲ್ಲ, ಬದುಕುವುದೇ ಮುಖ್ಯ ಅನ್ನೋ ಮಾತನ್ನ ಇಲ್ಲಿ ಹೇಳಿದ್ದಾರೆ. ಈ ಮಾತಿನ ಸುತ್ತ ಇರೋ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್; ಎದುರಾಳಿ ಶಾಕ್ ಮೇಲೆ ಶಾಕ್!
ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್; ಎದುರಾಳಿ ಶಾಕ್ ಮೇಲೆ ಶಾಕ್!

ಪೆದ್ದಿ ಚಿತ್ರದಲ್ಲೂ (Peddi Movie) ಶಿವಣ್ಣನ ಪಾತ್ರಕ್ಕೆ (Shivanna Role) ಮಹತ್ವ ಇದೆ. ಖಡಕ್ ಡೈಲಾಗ್‌ಗಳೂ ಇವೆ. ಲುಕ್ ಮತ್ತು ಫೀಲ್ ಎರಡೂ ಚೆನ್ನಾಗಿವೆ. ಕುಸ್ತಿ ಉಸ್ತಾದ್ ಆಗಿ ಹೇಗೆ ಕಾಣಿಸುತ್ತಾರೆ ಅನ್ನೋದು ಗೊತ್ತಾಗಿದೆ. ಆದರೆ, ಇವರ ಮಾತುಗಳು ಹೇಗೆ ಇರ್ತವೆ ಅನ್ನೋ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಈ ಉತ್ತರ ಚಿತ್ರದ ಟ್ರೈಲರ್ ಅಲ್ಲಿಯೇ ರಿವೀಲ್ ಆಗಿವೆ. ಮುಂಬೈ ಅಲ್ಲಿ ಈ ಚಿತ್ರದ ಬಿಗ್ ಇವೆಂಟ್ ನಡೆದಿದೆ. ಅಲ್ಲಿ ಕುಸ್ತಿ ಪೈಲ್ವಾನ್‌ಗಳು ಆಗಮಿಸಿದ್ದರು. ಈ ಎಲ್ಲದರ ನಡುವೆ ಚಿತ್ರದ ಟ್ರೈಲರ್ ರಿಲೀಸ್ (Trailer Release) ಆಗಿದೆ. ಬಹು ಭಾಷೆಯಲ್ಲಿ ಬಂದ ಈ ಟ್ರೈಲರ್ (Trailer) ಅಲ್ಲಿ ಸುಮಾರು ವಿಚಾರ ಇವೆ. ಆದರೆ, ಇಲ್ಲಿ ಶಿವಣ್ಣ ಮಾತು ತುಂಬಾನೆ ವಿಶೇಷ ಅನಿಸುತ್ತಿವೆ. ಅದೇನು ಅನ್ನೋದು ಇಲ್ಲಿದೆ ಓದಿ.

ನನಗೆ ಆಟ ಗೆಲ್ಲೋದಲ್ಲ.

ಶಿವಣ್ಣ ಈ ಮಾತನ್ನ ಹೇಳಿದ್ದಾರೆ. ಯುವಕರಿಗೆ ಕುಸ್ತಿ ಹೇಳಿಕೊಡುವ ಉಸ್ತಾದ್ ಆಗಿಯೇ ಶಿವಣ್ಣ ಇಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಇರೋ ಗತ್ತು ಮತ್ತು ಗಾಂಭೀರ್ಯ ಇಲ್ಲಿ ಬೇರೆ ಇದೆ.
telugu peddi movie trailer reveal shiva rajkumar gourinaidu role

ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್; ಎದುರಾಳಿ ಶಾಕ್ ಮೇಲೆ ಶಾಕ್!

ಅದಕ್ಕೆ ಸೂಕ್ತ ಅನಿಸೋ ತೂಕದ ಮಾತುಗಳೂ ಇವೆ. ಇಡೀ ಟ್ರೈಲರ್ ಅಲ್ಲಿ ಶಿವಣ್ಣನ ಪಾತ್ರದ ಕೆಲವು ದೃಶ್ಯಗಳು ರಿವೀಲ್ ಆಗಿವೆ. ಒಂದೇ ಒಂದು ಡೈಲಾಗ್ ಕೂಡ ರಿವೀಲ್ ಆಗಿದೆ.

ಬದುಕೋದು ಮುಖ್ಯ..

ಶಿವಣ್ಣ ಇಲ್ಲಿ ಒಂದು ಡೈಲಾಗ್ ಹೇಳಿದ್ದಾರೆ. ಇದು ತುಂಬಾನೆ ಪ್ರ್ಯಾಕ್ಟೀಕಲ್ ಆಗಿದೆ. ಒಬ್ಬ ಪೈಲ್ವಾನ್‌ಗೆ ಉಸ್ತಾದ್ ಹೇಳುವ ಮಾತು ಕೂಡ ಇದಾಗಿದೆ.

ಈ ಡೈಲಾಗ್ ಹೀಗೆ ಹೋಗುತ್ತದೆ. “ನನಗೆ ಆಟ ಗೆಲ್ಲೋದಲ್ಲ. ಬದುಕೋದು ಮುಖ್ಯ” ಹೀಗೆ ಹೇಳುವ ಈ ಡೈಲಾಗ್ ಇಡೀ ಕಥೆಯ ಒಂದಷ್ಟು ವಿಷಯ ಬಿಟ್ಟುಕೊಡುತ್ತದೆ.

ಗುರು-ಶಿಷ್ಯ

ಈ ಚಿತ್ರದಲ್ಲಿ ಶಿವಣ್ಣ ಕುಸ್ತಿ ಹೇಳಿಕೊಡುವ ಉಸ್ತಾದ್ ಪಾತ್ರ ಮಾಡಿದ್ದಾರೆ. ಗೌರ್ ನಾಯ್ಡು ಅನ್ನುವ ಹೆಸರಿನ ಪಾತ್ರ ಇದಾಗಿದೆ. ಈ ಒಂದು ಪಾತ್ರದಲ್ಲಿ ಶಿವಣ್ಣ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ.

telugu peddi movie trailer reveal shiva rajkumar gourinaidu role

ನನಗೆ ಆಟ ಗೆಲ್ಲೋದಲ್ಲ.

ಪಕ್ಕಾ ಉಸ್ತಾದ್ ಆಗಿಯೇ ಕಾಣಿಸುತ್ತಿದ್ದಾರೆ. ಇವರ ಶಿಷ್ಯನಾಗಿಯೇ ರಾಮ್ ಚರಣ್ ನಟಿಸಿದ್ದಾರೆ. ಪೆದ್ದಿ ಅನ್ನುವ ಪಾತ್ರ ಮಾಡಿದ್ದಾರೆ.

ರಾಮ್ ಚರಣ್

ರಾಮ್ ಚರಣ್ ತುಂಬಾನೆ ಕಷ್ಟಪಟ್ಟಿದ್ದಾರೆ. ಪೈಲ್ವಾನ್ ಪೆದ್ದಿ ಪಾತ್ರಕ್ಕಾಗಿಯೇ ದೇಹ ದಂಡಿಸಿದ್ದಾರೆ. ಕೈಗೆ ಏಟು ಮಾಡಿಕೊಂಡಿದ್ದಾರೆ. ಕಣ್ಣಿಗೂ ತೊಂದರೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಚಿತ್ರಕ್ಕಾಗಿಯೇ ಮಾಡಿದ್ದಾರೆ.

ಅದರ ಫಲವೇ ಇಡೀ ಸಿನಿಮಾ ಅಷ್ಟು ಅದ್ಭುತವಾಗಿಯೇ ಬಂದಿದೆ ಅನ್ನುವ ಅಭಿಪ್ರಾಯವನ್ನ ಈಗ ಟ್ರೈಲರ್ ಮೂಡಿಸುತ್ತಿದೆ. ಅದರೊಟ್ಟಿಗೆ ಡೈರೆಕ್ಟರ್ ಬುಚಿ ಬಾಬು ಸನಾ ಒಳ್ಳೆ ವಿಷಯದ ಮೇಲೇನೆ ಸಿನಿಮಾ ಮಾಡಿದ್ದಾರೆ ಅನ್ನೊದು ಗೊತ್ತಾಗುತ್ತದೆ.

telugu peddi movie trailer reveal shiva rajkumar gourinaidu role

ಜೂನ್-4 ರಿಲೀಸ್
ಜೂನ್-4 ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ಬಹು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.

ಕನ್ನಡದಲ್ಲೂ ಈ ಚಿತ್ರದ ಡಬ್ಬಿಂಗ್ ಚೆನ್ನಾಗಿ ಆಗಿದೆ. ಶಿವಣ್ಣ ಈ ಚಿತ್ರಕ್ಕೆ ಕನ್ನಡದಲ್ಲಿ ತಾವೇ ಡಬ್ ಮಾಡಿದ್ದಾರೆ. ಈ ವಿಷಯ ಕನ್ನಡ ಟ್ರೈಲರ್ ನೋಡಿದಾಗಲೇ ತಿಳಿಯುತ್ತದೆ.

ತೆಲುಗು ಚಿತ್ರರಂಗದಲ್ಲಿ ಸದ್ಯ ಪೆದ್ದಿ ಚಿತ್ರದ ಸದ್ದು ಕೇಳಿ ಬರ್ತಿದೆ. ಈ ಚಿತ್ರ ಒಳ್ಳೆ ಕಲೆಕ್ಷನ್ ಮಾಡುತ್ತದೆ ಅನ್ನುವ ಅಂದಾಜು ಶುರು ಆಗಿವೆ. ಒಟ್ಟಾರೆ, ಪೆದ್ದಿ ಈ ವರ್ಷದ ಬಹು ನಿರೀಕ್ಷೆಯ ಸಿನಿಮಾ ಆಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed