Last Updated:
ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 11 ರಿಂದ ಸಂಜೆ 3 ರವರೆಗೆ KPTCL ನಿರ್ವಹಣಾ ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ. ಗಂಗಾನಗರ, ಆರ್.ಟಿ. ನಗರ, ಸಂಜಯನಗರ ಸೇರಿ ಹಲವೆಡೆ ಪವರ್ ಕಟ್.
ಬೆಂಗಳೂರು (Bengaluru) ನಗರದ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಪ್ರಮುಖ ಹಾಗೂ ತುರ್ತು ಎಚ್ಚರಿಕೆಯ ಸುದ್ದಿಯಾಗಿದೆ. ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಹೆಬ್ಬಾಳ ವ್ಯಾಪ್ತಿಯ ಹಲವೆಡೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ. ಈ ಅನಿರೀಕ್ಷಿತ ವಿದ್ಯುತ್ ಕಡಿತದಿಂದಾಗಿ ಸಾರ್ವಜನಿಕರು (Publics) ದೈನಂದಿನ ಕೆಲಸಗಳಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಆರ್. ಟಿ ನಗರ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಮುನ್ನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್.ಟಿ. ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವತ್ನಗರ, ಡಾರ್ಸ್ ಕಾಲೋನಿ, ಎಂ.ಎಲ್.ಎ ಲೇಔಟ್, ರತನ್ ಅಪಾರ್ಟ್‍ಮೆಂಟ್, ಗಾಯತ್ರಿ ಅಪಾರ್ಟ್‍ಮೆಂಟ್, ನೃಪತುಂಗ ಬಡಾವಣೆ ಮತ್ತು ಕೃಷ್ಣಪ್ಪ ಬ್ಲಾಕ್.
ಶಾಂತಿಸಾಗರ ಮುಖ್ಯ ರಸ್ತೆ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80 ಅಡಿ ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್ 1ನೇ ಹಂತ, ಸ್ಟೆಲಿರ್ಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಆಲ್ಪೈನ್ ಅಪಾರ್ಟ್‍ಮೆಂಟ್ ಮತ್ತು ಜೈನ್ ಅಪಾರ್ಟ್‍ಮೆಂಟ್.
ಹೆಬ್ಬಾಳ ಹಾಗೂ ಚೋಳನಾಯಕನಹಳ್ಳಿ ಭಾಗ- ಸಿ 4 ಉಪವಿಭಾಗ ಕಚೇರಿ, ಗಿಡ್ಡಪ್ಪ ಬ್ಲಾಕ್, ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ, ಎಸ್ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ಆನಂದಗಿರಿ ಎಕ್ಸ್ಟೆನ್ಷನ್, ಎಸ್.ಎಸ್.ಎ ರಸ್ತೆ, ಪೆÇಲೀಸ್ ಕ್ವಾರ್ಟಸ್, ಹೆಬ್ಬಾಳ ಎಸ್.ಎಸ್ ಬ್ಲಾಕ್, ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ ಮತ್ತು ಕೆಇಬಿ ಲೇಔಟ್.
Bangalore [Bangalore],Bangalore,Karnataka
Jul 21, 2026 11:49 AM IST














