Toxic Manamohaka Song: ಯಶ್-ತಾರಾ ಬಾತ್ ಟಬ್ ರೊಮ್ಯಾನ್ಸ್, ಮನಮೋಹಕ ಸಾಂಗ್ ಹೇಗಿದೆ? | Toxic movie yash manamohaka song released tara sutaria | | ACTPnews

ಮನಮೋಹಕ ಸಾಂಗ್


Last Updated:

Toxic Manamohaka: ಟಾಕ್ಸಿಕ್ ಸಿನಿಮಾದ ಎರಡನೇ ಹಾಡು ಮನಮೋಹಕ ರಿಲೀಸ್ ಆಗಿದೆ. ಇದರಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ರೊಮ್ಯಾನ್ಸ್ ಮಾಡಿದ್ದಾರೆ.

ಮನಮೋಹಕ ಸಾಂಗ್
ಮನಮೋಹಕ ಸಾಂಗ್

ಟಾಕ್ಸಿಕ್ ಸಿನಿಮಾ (Toxic Cinema) ರಿಲೀಸ್ ಆಗೋಕೆ ಕೆಲವೇ ವಾರಗಳು ಬಾಕಿ ಇವೆ. ಆಗಸ್ಟ್ 26ರಂದು ಯಶ್ (Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಟಾಕ್ಸಿಕ್ ಮೂವಿಯಲ್ಲಿ ಐವರು ಚೆಲುವೆಯರು ನಟಿಸುತ್ತಿದ್ದಾರೆ. ಹುಮಾ ಖುರೇಶಿ, ನಯನತಾರಾ, ತಾರಾ ಸುತಾರಿಯಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್ ಅವರು ಯಶ್ ಜೊತೆ ನಟಿಸಲಿದ್ದಾರೆ.

ಈಗಾಗಲೇ ಯಶ್ ಹಾಗೂ ಕಿಯಾರಾ ಅವರನ್ನು ಒಳಗೊಂಡ ಮನಮೋಹಕ ಹಾಡು ರಿಲೀಸ್ ಆಗಿದೆ. ಇದೀಗ ಇನ್ನೊಂದು ಹಾಡು ರಿಲೀಸ್ ಆಗಲಿದೆ. ‘ತಬಾಹಿ’ ಹಾಡಿಗೆ ಯೋಗಾರಜ್ ಭಟ್ ಅವರು ಸಾಹಿತ್ಯ ಬರೆದಿದ್ದರು. ಈ ಹಾಡು ಭಾರೀ ಹಿಟ್ ಎನಿಸಿಕೊಂಡಿದೆ.

ಇದೀಗ ಎರಡನೇ ಹಾಡು ರಿಲೀಸ್ ಆಗಿದೆ. ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರಿದ್ದಾರೆ. ಈ ಚಿತ್ರದಲ್ಲಿ ಯಶ್ ಅವರದ್ದು ದ್ವಿಪಾತ್ರ. ರಾಯನಾಗಿ ಯಶ್ ಮಿಂಚಲಿದ್ದು ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ಮಿಂಚೊಂದು ಎದೆ ತುಂಬಾ ನಡೆದಾಡಿ ಮರೆಯಾದಂತೆ.. ಯಾಕಿಂತ ತಿಳಿಗಾಳಿಯು ಬಿರುಗಾಳಿಯಾಗಿ ಕಾಡಿದೆ ಎಂದು ಹಾಡು ಶುರುವಾಗುತ್ತದೆ. ಮನಮೋಹಕ, ತುಸು ಮಾದಕ, ಬದಲಾಯಿತೇ ನನ್ನ ಲೋಕ.. ಎಂಬ ಸಾಲುಗಳು ಬರುತ್ತವೆ.

ಈ ಹಾಡನ್ನು ಸಿದ್ಧಾರ್ಥ್ ಬಸ್ರೂರು ಹಾಡಿದ್ದು, ಸಾಹಿತ್ಯವನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ತನಿಷ್ಕ್ ಬಾಗ್ಚಿ ಹಾಗೂ ಫಹೀಮ್ ಅಬ್ದುಲ್ಲ ಅರ್ಸಲ್ನ್ ನಿಝಾಮಿ ಸಂಗೀತ ಸಂಯೋಜಿಸಿದ್ದಾರೆ.

ಯಶ್ ಅವರ ತಬಾಹಿ ಹಾಡಿನಲ್ಲಿ ರಾಯ ಹಾಗೂ ನಾಡಿಯಾ ರೊಮ್ಯಾನ್ಸ್ ಎಲ್ಲರ ಮೆಚ್ಚುಗೆ ಗಳಿಸಿತು. ಹಾಟ್ ರೊಮ್ಯಾಂಟಿಕ್ ಸಾಂಗ್​ನಲ್ಲಿ ಬಾಲಿವುಡ್ ನಟಿ ಹಾಗೂ ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಮಸ್ತ್ ಆಗಿ ಕಾಣಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports