Bengaluru Police: ಬೆಂಗಳೂರು ಕಮಿಷನರೇಟ್ ಐದು ಹೋಳು! ಯಾರಾಗ್ತಾರೆ ಮೇನ್ ಬಾಸ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಪೊಲೀಸ್ ಆಯುಕ್ತಾಲಯದ ವಿಭಜನೆ


Last Updated:

ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು 5 ಭಾಗಗಳಾಗಿ ವಿಭಜಿಸಲು ಸರ್ಕಾರ ಚಿಂತನೆ ನಡೆಸಿದೆ. 5 ಹೊಸ ಕಮಿಷನರೇಟ್‌ಗಳು, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತಾಲಯದ ವಿಭಜನೆ
ಬೆಂಗಳೂರು ಪೊಲೀಸ್ ಆಯುಕ್ತಾಲಯದ ವಿಭಜನೆ

ಬೆಂಗಳೂರು: ಐದು ಮಹಾನಗರಪಾಲಿಕೆಗಳ ಮಾದರಿಯಲ್ಲಿ ಬೆಂಗಳೂರು (Bengaluru) ಪೊಲೀಸ್ ಕಮಿಷನರೇಟ್ (Police Commissionerate

) ಅನ್ನು ಕೂಡ ಐದು ಹೋಳು ಮಾಡಲು ರಾಜ್ಯ ಸರ್ಕಾರ (Govt) ಮುಂದಾಗಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ ಸಂಬಂಧ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದು, ರಾಜಧಾನಿಗೆ ಇನ್ನು ಮುಂದೆ ಐದು ಜನ ಪೊಲೀಸ್ ಆಯುಕ್ತರು ಬರಲಿದ್ದಾರೆ. ಪ್ರಸ್ತುತ ವ್ಯವಸ್ಥೆಯನ್ನು (System) ಬದಲಾಯಿಸಿ, ಕೇವಲ ಒಂದೇ ಕಮಿಷನರೇಟ್ ಬದಲಿಗೆ ಐದು ಕಮಿಷನರೇಟ್‍ಗಳನ್ನು ರಚಿಸಿ, ಅದಕ್ಕೊಬ್ಬ ‘ಮುಖ್ಯ ಬಾಸ್’ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ -ADGP ಮಟ್ಟದ ಅಧಿಕಾರಿ) ನೇಮಿಸಲು ಸಿದ್ಧತೆ ನಡೆಂದಿದೆ.

ವಿಭಜನೆಯ ಪ್ರಮುಖ ಮುಖ್ಯಾಂಶಗಳು

ಐದು ಹೊಸ ಆಯುಕ್ತಾಲಯಗಳು: ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ಪ್ರತ್ಯೇಕ ಕಮಿಷನರೇಟ್‍ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಭಾರೀ ವೆಚ್ಚದ ಪ್ರಸ್ತಾವನೆ: ಪೊಲೀಸ್ ವಿಭಾಗಗಳನ್ನು ಹರಿದು ಹಂಚಿಕೆ ಮಾಡಿ ಮಾದರಿ ಮಾಡಿದರೆ ದೊಡ್ಡ ಮಟ್ಟದ ಖರ್ಚು ಬರಲಿದ್ದು, ಹೊಸ ಅಧಿಕಾರಿಗಳು, ಕಟ್ಟಡ ಹಾಗೂ ಸಾರಿಗೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಸುಮಾರು ?7,648 ಕೋಟಿ ರೂ.ಗಳ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಆಯುಕ್ತರು ಕೋರಿದ್ದಾರೆ.

ಸಿಬ್ಬಂದಿ ಹಂಚಿಕೆ: ಐದು ಆಯುಕ್ತರು, ಐದು ಡಿಸಿಪಿಗಳು, ನಾಲ್ಕು ಎಸಿಪಿ ಉಪ ವಿಭಾಗಗಳು, ಪೊಲೀಸ್ ಠಾಣೆಗಳು ಸೇರಿದಂತೆ ಒಟ್ಟು 6,633 ಹೊಸ ಹುದ್ದೆಗಳನ್ನು ಸೃಜಿಸಲು ಹಾಗೂ ಆಡಳಿತ ವಿಭಾಗದ ಅಧಿಕಾರ-ಸಿಬ್ಬಂದಿ ಸೇರಿಸಲು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ವಿರೋಧ ಹಾಗೂ ಚರ್ಚೆಗಳು

ಐದು ಕಮಿಷನರೇಟ್ ರಚನೆಗೆ ಪೊಲೀಸ್ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಹಾನಗರ ಪಾಲಿಕೆಗಳು ಮತ್ತು ಪೊಲೀಸ್ ಕಮಿಷನರೇಟ್ ಕಾರ್ಯನಿರ್ವಹಣೆಯಲ್ಲಿ ಭಿನ್ನತೆಯಿದೆ ಎಂದು ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಡಿ.ಕೆ. ಶಿವಕುಮಾರ್ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳು ಆಗಲಿರುವುದು ಖಚಿತವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed