Friendship Day Murder: ಫ್ರೆಂಡ್‌ಶಿಪ್ ಡೇ ಗಿಫ್ಟ್ ನೀಡಿ ಮದುವೆಯ ಬಗ್ಗೆ ಚರ್ಚೆ, ಒಪ್ಪದ ಗೆಳತಿಯನ್ನು ನದಿಗೆ ತಳ್ಳಿ ಮುಗಿಸಿದ ಕಿರಾತಕ ಗೆಳೆಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಪ್ರಾಥಮಿಕ ತನಿಖೆಗಳ ಪ್ರಕಾರ, ಸ್ನೇಹ, ಮದುವೆ ಮತ್ತು ಫ್ರೆಂಡ್‌ಶಿಪ್ ಡೇ ಉಡುಗೊರೆಯ ಬಗ್ಗೆ ಭಿನ್ನಾಭಿಪ್ರಾಯಗಳು ಈ ವಿವಾದಕ್ಕೆ ಕಾರಣವಾಗಿದ್ದವು. ವಾಗ್ವಾದ ತೀವ್ರಗೊಂಡು, ಇಬ್ಬರೂ ಹಳೆಯ ರೈಲ್ವೆ ಸೇತುವೆಯತ್ತ ನಡೆದುಕೊಂಡು ಬಂದಿದ್ದಾರೆ. ಆಗ ಆಶಿಶ್, ಅಶ್ವಿನಿಯನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾನೆ.

News18
News18

Kanhan River in Nagpur Murder Case: ಕಳೆದ ವಾರವಷ್ಟೇ ವಿಶ್ವಾದ್ಯಂತ ಫ್ರೆಂಡ್‌ಶಿಪ್ ಡೇ ಆಚರಣೆ ಮಾಡಲಾಗಿತ್ತು. ಆಕೆ ಕೂಡ ತನ್ನ ಗೆಳೆಯನನ್ನು ನಂಬಿ ಸ್ನೇಹಿತರ ದಿನದ ಆಚರಣೆಗಾಗಿ ಹೋಗಿದ್ದಳು. 29 ವರ್ಷ ವಯಸ್ಸಿನ ಆಕೆ ತನ್ನ ಜೀವನ ಇವತ್ತೇ ಕೊನೆಯಾಗುತ್ತೆ ಅಂತಾ ಕನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.. ಗೆಳೆಯ ಅಂತಾ ನಂಬಿ ಬಂದವಳ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ ಆ ಕಿರಾತಕ.

ಹೌದು.. ಸ್ನೇಹಿತರ ದಿನ ಅನ್ನೋದು ಜನರು ತಮ್ಮ ಸ್ನೇಹಿತರಿಗೆ ಉಡುಗೊರೆಗಳನ್ನು ನೀಡುವ, ಫೋಟೋಗಳನ್ನು ಹಂಚಿಕೊಳ್ಳುವ ಮತ್ತು ಸ್ನೇಹವನ್ನು ಸೆಲಬ್ರೇಟ್ ಮಾಡುವ ದಿನ. ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ, ಅದೇ ದಿನವೇ 29 ವರ್ಷದ ಮಹಿಳೆಯ ಜೀವನ ಕೊನೆಯಾಗಿದೆ. ಮದುವೆಯ ಬಗ್ಗೆ ತನ್ನ ಸ್ನೇಹಿತನ ಜೊತೆ ಶುರುವಾದ ವಿವಾದವು ಆಕೆಯ ಸಾವಿನಲ್ಲಿ ಅಂತ್ಯಗೊಂಡಿದೆ.

ರಾತ್ರಿಯಾಗುತ್ತಿದ್ದಂತೆ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ಸ್ನೇಹ, ಮದುವೆ ಮತ್ತು ಫ್ರೆಂಡ್‌ಶಿಪ್ ಡೇ ಉಡುಗೊರೆಯ ಬಗ್ಗೆ ಭಿನ್ನಾಭಿಪ್ರಾಯಗಳು ಈ ವಿವಾದಕ್ಕೆ ಕಾರಣವಾಗಿದ್ದವು. ವಾಗ್ವಾದ ತೀವ್ರಗೊಂಡು, ಇಬ್ಬರೂ ಹಳೆಯ ರೈಲ್ವೆ ಸೇತುವೆಯತ್ತ ನಡೆದುಕೊಂಡು ಬಂದಿದ್ದಾರೆ. ಆಗ ಕೋಪದ ಭರದಲ್ಲಿ ಆಶಿಶ್, ಅಶ್ವಿನಿಯನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾನೆ, ಆಕೆಯ ನದಿಗೆ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರಿಗೆ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಒಂದೇ ಸುಳಿವನ್ನು ಅವಲಂಬಿಸುವ ಬದಲು, ಪೊಲೀಸರು ಹಲವಾರು ಕೋನಗಳಲ್ಲಿ ತನಿಖೆ ಶುರು ಮಾಡಿದರು. ಅಪರಾಧ ನಡೆದ ಸ್ಥಳದ ಸುತ್ತಲೂ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು, ಮೊಬೈಲ್ ಫೋನ್ ಲೊಕೇಶನ್ ಟ್ರಾಕ್ ಮಾಡಲಾಯಿತು. ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸಲಾಯಿತು. ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ, ಪೊಲೀಸರು ಶಂಕಿತನ ಬಗ್ಗೆ ಖಚಿತ ಮಾಹಿತಿ ಪಡೆದು ಕೊನೆಗೆ, ಆಶಿಶ್ ಮಾನ್ಪಿಯಾನನ್ನು ನಾಗ್ಪುರದ ಆಟೋಮೊಬೈಲ್ ಚೌಕ್ ಪ್ರದೇಶದಲ್ಲಿ ಬಂಧಿಸಲಾಯಿತು. ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಇಡೀ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಮಹಿಳೆಯ ಸಾವಿಗೆ ಕಾರಣವಾದ ವಿವಾದಕ್ಕೆ ಕಾರಣವೇನು ಎಂಬುದನ್ನು ಪೊಲೀಸರು ಈಗ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಹಠಾತ್ ಕೋಪದ ಕ್ರಿಯೆಯೇ ಅಥವಾ ಬೇರೆ ಏನಾದರೂ ಕಾರಣವೇ? ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಶ್ನೆಗಳಿಗೆ ಉತ್ತರಗಳು ಸಿಗಲಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports