Last Updated:
ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ! ಕಾರಿನಲ್ಲಿ ಬಂದ ಖದೀಮರು ಅಂಗಡಿಯಿಂದ ಬ್ರ್ಯಾಂಡೆಡ್ ಶೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ
ಬೆಂಗಳೂರಿನಲ್ಲಿ ಕಳ್ಳರು ಎಷ್ಟೊಂದು ಅಡ್ವಾನ್ಸ್ (Advance) ಆಗಿದ್ದಾರೆ ಎಂದರೆ, ಈಗ ಚಿನ್ನ, ಬೆಳ್ಳಿ, ದುಡ್ಡಿನ ಬದಲು ಜನರ ಮನೆ ಮುಂದಿರುವ ಶೂಗಳ (Shoes) ಮೇಲೆಯೇ ಕಣ್ಣು ಹಾಕಲಾರಂಭಿಸಿದ್ದಾರೆ! ಹೌದು, ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ (Apartment) ನಡೆದಿರುವ ಈ ಹೈಟೆಕ್ ಕಳ್ಳತನದ (Theft) ದೃಶ್ಯಾವಳಿಗಳು ಇದೀಗ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ಬೆಳ್ಳಂಬೆಳಗ್ಗೆ ಐಷಾರಾಮಿ ಕಾರಿನಲ್ಲಿ ಬರುವ ಈ ಖದೀಮರು, ಮನೆ ಹೊರಗೆ ಇಟ್ಟಿರುವ ಕೇವಲ ಬ್ರ್ಯಾಂಡೆಡ್ ಶೂಗಳನ್ನು ಮಾತ್ರ ಆಯ್ದುಕೊಂಡು ಕದಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಬೆಂಗಳೂರಿನ ಸದಾನಂದನಗರದಲ್ಲಿರುವ ಶ್ರೀಧಾಮ ಅಪಾರ್ಟ್ಮೆಂಟ್ನಲ್ಲಿ ಈ ವಿಚಿತ್ರ ಹಾಗೂ ಅಚ್ಚರಿಯ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಬುಧವಾರ ಬೆಳಗಿನ ಜಾವ ಸರಿಯಾಗಿ 4:30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಇಬ್ಬರು ಕಳ್ಳರ ಪೈಕಿ ಓರ್ವ ಅಪಾರ್ಟ್ಮೆಂಟ್ ಒಳಗೆ ನುಗ್ಗಿ, ತನಗೆ ಬೇಕಾದ ಅತ್ಯಂತ ದುಬಾರಿ ಹಾಗೂ ಬ್ರ್ಯಾಂಡೆಡ್ ಶೂಗಳನ್ನು ಮಾತ್ರ ಬಹಳ ನಾಜೂಕಾಗಿ ಆರಿಸಿಕೊಳ್ಳುತ್ತಾನೆ. ಆರಿಸಿದ ಶೂಗಳನ್ನೆಲ್ಲಾ ತಾನು ತಂದಿದ್ದ ಗೋಣಿ ಚೀಲದಲ್ಲಿ ತುಂಬಿಕೊಂಡು, ಯಾರಿಗೂ ಅನುಮಾನ ಬಾರದಂತೆ ಯಾವುದೇ ಆತಂಕವಿಲ್ಲದೆ ಕೂಲ್ ಆಗಿ ಹೊರಗೆ ನಡೆದುಕೊಂಡು ಬರುತ್ತಾನೆ. ಸರಿಯಾಗಿ ಅದೇ ಸಮಯಕ್ಕೆ ಮತ್ತೊಬ್ಬ ಖದೀಮ ಕಾರಿನಲ್ಲಿ ಬಂದು ಆತನನ್ನು ಪಿಕ್ ಮಾಡಿಕೊಂಡು ಎಸ್ಕೇಪ್ ಆಗುತ್ತಾನೆ! ಇವರಿಬ್ಬರೂ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗುತ್ತಿರುವ ಈ ರೋಚಕ ದೃಶ್ಯಗಳು ಸಿಸಿಟಿವಿಯಲ್ಲಿ ಸಂಪೂರ್ಣವಾಗಿ ದಾಖಲಾಗಿವೆ.
ಅಷ್ಟಕ್ಕೂ ಇವರು ಕದ್ದೊಯ್ದ ಶೂಗಳ ಮೌಲ್ಯ ಶಾಕಿಂಗ್!
ಅಪಾರ್ಟ್ಮೆಂಟ್ನಿಂದ ಒಟ್ಟು ಬರೋಬ್ಬರಿ 1.35 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 27 ಜೊತೆ ದುಬಾರಿ ಶೂಗಳನ್ನು ಈ ಖದೀಮರು ಎಗರಿಸಿದ್ದಾರೆ. ಕಳ್ಳರ ಕಣ್ಣು ಬಿದ್ದಿದ್ದು ಕೇವಲ ಸಾಮಾನ್ಯ ಶೂಗಳ ಮೇಲಲ್ಲ, ಬದಲಾಗಿ ಬುಕಾರೋ, ಪುಮಾ, ಸ್ಕೆಚಸ್, ವರ್ಸಾ ಹಾಗೂ ವಾಕರೋ ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡೆಡ್ ಶೂಗಳನ್ನು ಮಾತ್ರ ಇವರು ಟಾರ್ಗೆಟ್ ಮಾಡಿ ಕದ್ದಿದ್ದಾರೆ. ಶೂಗಳನ್ನು ಕಳೆದುಕೊಂಡು ಕಂಗಾಲಾಗಿರುವ ಮಾಲೀಕರು ಇದೀಗ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈ ಹೈಟೆಕ್ ಶೂ ಕಳ್ಳರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಿಮ್ಮ ಮನೆ ಮುಂದೆಯೂ ದುಬಾರಿ ಶೂಗಳಿದ್ದರೆ, ಇಂದೇ ಎಚ್ಚರವಹಿಸಿ!
Bangalore [Bangalore],Bangalore,Karnataka
Jun 29, 2026 10:57 AM IST













