Actresses: ಲಾಡ್ಜ್​ನಲ್ಲಿ ಅನೈತಿಕ ಚಟುವಟಿಕೆ, 3 ನಟಿಯರನ್ನು ರಕ್ಷಿಸಿದ ಪೊಲೀಸ್ | | ACTPnews

ಪ್ರಾತಿನಿಧಿಕ ಚಿತ್ರ


Last Updated:

ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಮರಾಠಿ ಚಲನಚಿತ್ರೋದ್ಯಮದ ಜನಪ್ರಿಯ ನಟಿಯಾಗಿದ್ದಾರೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮನರಂಜನಾ ಉದ್ಯಮದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ಘಟನೆ ನಡೆದಿದ್ದು ನಟಿಯರನ್ನು (Actresses) ವೇಶ್ಯಾವಾಟಿಗೆ ಬಳಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ನಂತರ ಪೊಲೀಸರು (Police) ದಿಢೀರ್ ದಾಳಿ ಮಾಡಿದ್ದಾರೆ. ಗಿರ್ಗಾಂವ್ ಪ್ರದೇಶದಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ದಂಧೆಯನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.

ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಮರಾಠಿ ಚಲನಚಿತ್ರೋದ್ಯಮದ ಜನಪ್ರಿಯ ನಟಿಯಾಗಿದ್ದರೆ, ಇನ್ನೊಬ್ಬರು ಬಂಗಾಳಿ ಚಲನಚಿತ್ರೋದ್ಯಮದವರು ಆಗಿದ್ದಾರೆ. ಮೂರನೇ ನಟಿ ಬಾಲಿವುಡ್ ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸುವ ನಟಿ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಗಿರ್ಗಾಂವ್‌ನ ಹೋಟೆಲ್‌ವೊಂದರಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ನಂತರ, ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ ಇಬ್ಬರು ನಟಿಯರನ್ನು ರಕ್ಷಿಸಲಾಯಿತು. ರಕ್ಷಿಸಲ್ಪಟ್ಟವರು ಮತ್ತು ಈ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಇತರ ಜನರನ್ನು ಪ್ರಶ್ನಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಂಧಿತರಲ್ಲಿ ಒಬ್ಬರು, “ನಾನು ಅಳುತ್ತಾ ಗೋಡೆಗೆ ತಲೆ ಬಡಿದುಕೊಳ್ಳುತ್ತಿದ್ದೆ…” ಎಂದು ಹೇಳಿದ್ದಾರೆ. ಪೊಲೀಸರು ಈ ಗ್ಯಾಂಗ್‌ನ ಹಣಕಾಸಿನ ವಹಿವಾಟುಗಳ ಬಗ್ಗೆ ಮತ್ತು ಹೋಟೆಲ್ ಆಡಳಿತ ಮಂಡಳಿಯ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಜನವರಿಯಲ್ಲೂ ಒಂದು ಗ್ಯಾಂಗ್ ಅನ್ನು ಬಂಧಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ, ಹ್ಯೂಮನ್ ಟ್ರಾಫಿಕ್ಕಿಂಗ್ ವಿರೋಧಿ ಘಟಕ (AHTU) ನವಿ ಮುಂಬೈನ ತುರ್ಬೆ ನಾಕಾ ಪ್ರದೇಶದಲ್ಲಿ ಒಂದು ಪ್ರಮುಖ ಕಾರ್ಯಾಚರಣೆಯನ್ನು ನಡೆಸಿತು. ತುರ್ಬೆ ನಾಕಾದ ಲಾಡ್ಜ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ಏಳು ಮಹಿಳೆಯರನ್ನು ರಕ್ಷಿಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಬಂದ ಸುಳಿವು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಮಾಹಿತಿಯನ್ನು ಪರಿಶೀಲಿಸಲು, ಪೊಲೀಸರು ಲಾಡ್ಜ್‌ಗೆ ನಕಲಿ ಗ್ರಾಹಕನನ್ನು ಕಳುಹಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed